SUDDILIVE || SHIVAMOGGA
ಟ್ವೀಟ್ ಗೆ ಸಿಎಂ ಸ್ಪಂಧನೆ-CM's response to the tweet
ಒಂದೇ ಒಂದು ಟ್ವೀಟ್ ಗೆ ಸಿಎಂ ಸಿದ್ದರಾಮಯ್ಯ ಸ್ಪಂಧಿಸಿದ್ದಾರೆ. ಜೈನ ಬಸದಿಗೆ ಸ್ಪಂಧಿಸುವ ಬಗ್ಗೆ ಸಿಎಂ ಅಸ್ತು ಎಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಂದಳಿಕೆ ಸಮೀಪದ ಜೈನ ಬಸದಿಯು ದಯಾನೀಯ ಸ್ಥಿತಿಯಲ್ಲಿದೆ. ಜೊತೆಗೆ ತಾಲ್ಲೂಕಿನ ಹಿರೇ ಜಂಬೂರು ಗ್ರಾಮದಲ್ಲಿರುವ ಶಂಭು ಜಕ್ಕೇಶ್ವರ ದೇವಾಲಯದ ಜೀರ್ಣೋದ್ಧಾರ ಆಗಬೇಕಾಗಿದೆ ಎಂಬ ವಿಚಾರವನ್ನು ʼಎಕ್ಸ್ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ಗಮನಕ್ಕೆ ತಂದಿದ್ದು, ತಕ್ಷಣವೇ ಸ್ಪಂದಿಸಿದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ಪರಿಶೀಲಿಸಿದಾಗ ಸದರಿ ಪ್ರವಾಸಿ ತಾಣವು ಭಾರತೀಯ ಪುರಾತತ್ವ ಇಲಾಖೆಗೆ ಒಳಪಡುವುದರಿಂದ ಸಂರಕ್ಷಣಾ ಕಾರ್ಯಗಳನ್ನು ಪುರಾತತ್ವ ಇಲಾಖೆಯಿಂದ ಕೈಗೊಳ್ಳಲಾಗುವುದು. ಜೊತೆಗೆ ಶಂಭು ಜಕ್ಕೇಶ್ವರ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ಸದರಿ ತಾಣದ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
CM's response to the tweet