SUDDILIVE || SHIVAMOGGA
ಪ್ರಯತ್ನ ವಿಫಲವಾಗಬಹುದು ಡಿಕೆಶಿ ಪ್ರಾರ್ಥನೆ ಸಲ್ಲುತ್ತದೆ-ಆರ್ ಮೋಹನ್-The attempt may fail, but DK's prayers will be accepted - R Mohan
ನಗರದ ಜ್ಯೂವೆಲ್ ರ‌್ಯಾಕ್ ಹೋಟೆಲ್ ರಸ್ತೆಯಲ್ಲಿರುವ ಕಾಮಾಕ್ಷಿ ಸರ್ವ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಡಿಕೆಶಿ ಅಭಿಮಾನಿ ಬಳಗದ ಸಂಸ್ಥಾಪಕ ಆರ್ ಮೋಹನ್ ದಂಪತಿಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿ ಎಂದು ವಿಶೇಷ ಪೂಜೆ ಮತ್ತು ಹೋಮವನ್ನ ನಡೆಸಲಾಯಿತು.
ಡಿಜೆ ಶಿವಕುಮಾರ್ ಅವರಿಗೆ ಸಂಕಲ್ಪಿತ ಸ್ಥಾನ ಪ್ರಾಪ್ತಿಯಾಗಲಿ ಎಂದು ಮೋದಕ ದ್ರವ್ಯಗಳೊಂದಿಗೆ 108 ಕಾಯಿ ಗಣ ಹೋಮ, ಶತರುದ್ರಾಭಿಷೇಕ ನವಚಂಡಿಪಾರಾಯಣ ಮತ್ತು ಇಡುಗಾಯಿ ಸೇವೆಯನ್ನ ನೆರವೇರಿಸಲಾಗಿದೆ.
ಜಯಂತ್ ಭಾಗವತ್ ಮತ್ತು ತಂಡದವರಿಂದ ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಪ್ರಾಪ್ತಿಯಾಗಲೆಂದು ವೇದ ಮಂತ್ರಗಳನ್ನ ಪಠಿಸಿದ್ದಾರೆ. ಆರ್ ಮೋಹನ್ ಮಾತನಾಡಿ, ಡಿಕೆಶಿಗೆ ಸಿಎಂ ಆಗಲು ಯೋಗ್ಯತೆಯಿದೆ ಯೋಗವಿಲ್ಲ. ಹಾಗಾಗಿ ಅವರು ಸಿಎಂ ಆಗಿಲ್ಲ.
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಫಲಿಸುತ್ತೆ ಎಂಬ ನಂಬಿಕೆ ನಮ್ಮದು ಹಾಗಾಗಿ ಈ ಹೋಮ ಹವನ ನಡೆಸಲಾಗಿದೆ. ಕಾಂಗ್ರೆಸ್ ಸಂಘಟನೆಯಲ್ಲಿ ಡಿಕೆಶಿ ಜೆಶಿ ಶ್ರಮವಿದೆ. ಹಾಗಾಗಿ ದೇವರಲ್ಲಿ ನಮ್ಮ ಪ್ರಾರ್ಥನೆ ಸಲ್ಲಿಸಲು ಹೋಮ ಹವನ ನಡೆಲಾಗುತ್ತಿದೆ ಎಂದು ತಿಳಿಸಿದರು.
The attempt may fail, but DK's prayers will be accepted - R Mohan