ad

ಗದ್ದೆಗೆ ಪಲ್ಟಿಯಾದ ಕಾರು-Car overturned in field

 SUDDILIVE || SHIVAMOGGA

ಗದ್ದೆಗೆ ಪಲ್ಟಿಯಾದ ಕಾರು-Car overturned in field

Field, car


ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು, ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗದ್ದೆಗೆ ಪಲ್ಟಿಯಾಗಿ ಬಿದ್ದಿದೆ.  ಘಟನೆ,  ನಗರದ ಹೊರವಲಯದ ಗೋಂಧಿಚಟ್ನಳ್ಳಿಯಲ್ಲಿ ನಡೆದಿದೆ.

ಕಾರಿನಲ್ಲಿ ದರ್ಶನ್ ಎಂಬುವರು ಒಬ್ಬರೇ ಪ್ರಯಾಣಿಸುತ್ತಿದ್ದರು.  ಸಣ್ಣಪುಟ್ಟ ಗಾಯಗಳೊಂದಿಗೆ ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಇವರು ಶಿವಮೊಗ್ಗದ ವಿನೋಬನಗರ ಬಡಾವಣೆ ನಿವಾಸಿಗಳಾಗಿದ್ಧಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾರು ಶಿವಮೊಗ್ಗದಿಂದ ಹೊನ್ನಾಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೊದಲು ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ನಂತರ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ.  ಪಲ್ಟಿಯಾದ ಕಾರು ಕೆಎ-14-Z-7378  ಕ್ರಮ ಸಂಖ್ಯೆಯ ವಾಹನವಾಗಿದೆ. 

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಐಸಿಎಎಫ್ಎಸ್ಟಿಓ ಹುಸೇನ್, ಎಎಫ್ಎಸ್ಟಿಓ ವಿಲ್ ಫ್ರೇಡ್, ಎಲ್ ಎಫ್ ಲೋಹಿತ್ ಕುಮಾರ್, ಎಫ್ ಡಿ ಶರತ್ ಕುಮಾರ್, ಎಫ್ ಎಂ ಎರ್ರಿಸ್ವಾಮಿ, ಕಿರಣ್ ಕುಮಾರ್ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.

Car overturned in field

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close