ad

ಧೂಳು ಹಿಡಿಯುತ್ತಿವೆ ಶಾಲಾ ಬ್ಯಾಗ್ ಗಳು-School bags are gathering dust

SUDDILIVE || THIRTHAHALLI

ಧೂಳು ಹಿಡಿಯುತ್ತಿವೆ ಶಾಲಾ ಬ್ಯಾಗ್ ಗಳು-School bags are gathering dust

School, Bags

ಶಿಕ್ಷಣ ಇಲಾಖೆಯಲ್ಲಿ ಹಲವು ಸಾಮಗ್ರಿಗಳು ವಿದ್ಯಾರ್ಥಿಗಳಿಗೆ ಬರುತ್ತದೆ. ಅಷ್ಟೇ ಅಲ್ಲದೆ ಕೆಲವು ದಾನಿಗಳು ನೀಡುವ ಎಷ್ಟೋ ಸಾಮಗ್ರಿಗಳು ಅಧಿಕಾರಿಗಳ ಕಪಿ ಮುಷ್ಟಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ವೇಳೆ ವಿದ್ಯಾರ್ಥಿಗಳು ಶಿಕ್ಷಣವನ್ನೇ ಮುಗಿಸಿರುತ್ತಾರೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.

ಹೌದು ಮಕ್ಕಳಿಗೆ ದಾನಿಗಳು ನೀಡಿರುವ ಎಷ್ಟೋ ಸಾಮಗ್ರಿಗಳು ಮಕ್ಕಳ ಕೈ ಸೇರುವುದಿಲ್ಲ. ಅದಕ್ಕೆ ಪುಷ್ಟಿ ನೀಡುವಂತೆ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಸಾವಿರಾರು ಸ್ಕೂಲ್ ಬ್ಯಾಗ್ ಗಳು ಬಿ. ಆರ್. ಸಿ ಕೋಣೆ ಒಳಗೆ ಸೇರಿದ್ದು ಇಲ್ಲಿಯವರೆಗೆ ಹೊರ ಬಂದಿಲ್ಲ. ಬಹುಷಃ ಮಕ್ಕಳಿಗೆ ಬೆನ್ನು ಬಾಗಿದ ಮೇಲೆ ಕೊಡಬಹುದೇನೋ ಎಂದು ಪೋಷಕರು ಮಾಧ್ಯಮಕ್ಕೆ ಹೇಳಿದ್ದಾರೆ.

ತೀರ್ಥಹಳ್ಳಿಯ ಕ್ಷೇತ್ರ ಸಂಪನ್ಮೂಲ ಕೊಠಡಿಯ ಕಟ್ಟಡವೊಂದರ ಕೋಣೆಯಲ್ಲಿ ಶಿವಮೊಗ್ಗ ಜಿಲ್ಲಾ ಸಂಸದ ಆಗಿರುವ ಬಿ ವೈ ರಾಘವೇಂದ್ರ ಅವರು ಮಕ್ಕಳಿಗಾಗಿ ನೀಡಿದ ಚೀಲಗಳು ಕೂಡಿಡಲಾಗಿದ್ದು ಈ ಸ್ಕೂಲ್ ಬ್ಯಾಗ್ ಗೆ ಬರೋಬ್ಬರಿ ಒಂದು ವರ್ಷದ ಹತ್ತಿರ ಆಗಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಯಾಕೆ ಮಕ್ಕಳಿಗೆ ಇಲ್ಲಿಯವರೆಗೆ ಬ್ಯಾಗ್ ವಿತರಣೆ ಮಾಡಿಲ್ಲ. ಮಕ್ಕಳಿಗೆ ನೀಡಿದ ಬ್ಯಾಗ್ ಹಸ್ತಾಂತರ ಮಾಡಲು ಅಧಿಕಾರಿಗಳು ಮೀನಾ ಮೇಷ ನೋಡುತ್ತಿರುವುದು ಏಕೆ?  ಬೆನ್ನಿಗೆ ಹಾಕುವ ಚೀಲ ಬೆನ್ನು ಬಾಗಿದ ಮೇಲೆ ಕೊಡ್ತಾರಾ!!?ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರು ಕೊಟ್ಟ ಮಕ್ಕಳ ಶಾಲಾ ಬ್ಯಾಗ್ ದೂಳು ಹಿಡಿದು, ಮಳೆಗಾಲದಲ್ಲಿ ಚಂಡಿ ಹಿಡಿಯುವ ದೂರವಸ್ಥೆ ಆ ಕಟ್ಟಡದಲ್ಲಿ ಇದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ನೀಡುವ ಸೌಲಭ್ಯವನ್ನು ಏನು ಮಾಡುತ್ತಿದ್ದಾರೆ? ಎಂಬುದೇ ಪ್ರೆಶ್ನೆಯಾಗಿದೆ.

School bags are gathering dust

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close