ad

ಕಾಳುಮೆಣಸು ನೀಡುವುದಾಗಿ ₹5.5 ಲಕ್ಷ ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು-Case registered against two for cheating of ₹5.5 lakh on the pretext of giving pepper

 SUDDILIVE || THIRTHAHALLI

ಕಾಳುಮೆಣಸು ನೀಡುವುದಾಗಿ ₹5.5 ಲಕ್ಷ ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು-Case registered against two for cheating of ₹5.5 lakh on the pretext of giving pepper

Case, cheating


ಕಾಳುಮೆಣಸು ಪೂರೈಸುವುದಾಗಿ ನಂಬಿಸಿ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ₹5.5 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕೋಣಂದೂರಿನ ಬಸವನ ಬೀದಿಯಲ್ಲಿ ಅಡಿಕೆ ಮಂಡಿ ನಡೆಸುತ್ತಿರುವ ಮಾಲೀಕರೊಬ್ಬರು ಕಳೆದ ಒಂದು ವರ್ಷದಿಂದ ಇಬ್ಬರು ವ್ಯಕ್ತಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು. ಜುಲೈ 8 ರಂದು, ಈ ಇಬ್ಬರು ಆರೋಪಿಗಳು ಕಾಳುಮೆಣಸು ನೀಡುವುದಾಗಿ ಹೇಳಿ ಮಂಡಿ ಮಾಲೀಕರಿಂದ ಮುಂಗಡವಾಗಿ ಹಣ ಪಡೆದಿದ್ದಾರೆ. ಒಬ್ಬ ಆರೋಪಿ ₹2.5 ಲಕ್ಷ ಮತ್ತು ಇನ್ನೊಬ್ಬ ಆರೋಪಿ ₹2.5 ಲಕ್ಷ - ಹೀಗೆ ಒಟ್ಟು ₹5 ಲಕ್ಷ ಪಡೆದಿದ್ದಾರೆ ಎನ್ನಲಾಗಿದೆ

ಆದರೆ, ಹಣ ಪಡೆದ ನಂತರವೂ ಆರೋಪಿಗಳು ಕಾಳುಮೆಣಸು ಪೂರೈಸದೆ ಮತ್ತು ಹಣವನ್ನು ಸಹ ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ ಎಂದು ಮಂಡಿ ಮಾಲೀಕರು ಆರೋಪಿಸಿದ್ದಾರೆ. ಈ ವಂಚನೆಯ ಕುರಿತು ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Case registered against two for cheating of ₹5.5 lakh on the pretext of giving pepper

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close