ad

ದಲಿತರ ಸ್ಮಶಾನ ಜಾಗಕ್ಕೆ ಅಡ್ಡಿ-ಸೂಕ್ತ ಕ್ರಮಕ್ಕೆ ಆಗ್ರಹ-Demand for appropriate action against Dalit cemetery site obstruction

 SUDDILIVE || SHIVAMOGGA

ದಲಿತರ ಸ್ಮಶಾನ ಜಾಗಕ್ಕೆ ಅಡ್ಡಿ-ಸೂಕ್ತ ಕ್ರಮಕ್ಕೆ ಆಗ್ರಹ-Demand for appropriate action against Dalit cemetery site obstruction

Dalit, cemetery

ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ಕೈಮರ ಗ್ರಾಮದ  105 ಸರ್ವೆ ನಂಬರ್ ಸ್ಮಶಾನ ಜಾಗದಲ್ಲಿ ದಲಿತರಿಗೆ ಶವವನ್ನ ಸುಡಲು ಅವಕಾಶ ಮಾಡಿಕೊಡದೆ ಮೇಲ್ವರ್ಗದ ಮೋಹನ್ ಮತ್ತು ಮುರುಳಿ ಎಂಬುವರು ಹಲ್ಲೆ ಮಾಡಿರುವುದಾಗಿ ಕಾಂಗ್ರೆಸ್ ನ ಮಂಜುನಾಥ ಆರೋಪಿಸಿದ್ದಾರೆ. 

ಈ ಕುರಿತು ಸುದ್ದಿಗೋಷ್ಠ ನಡೆಸಿದ ಅವರು, ಕೈಮರದಲ್ಲಿ 800 ಕ್ಕೂ ಹೆಚ್ಚು ದಲಿತ ಕುಟುಂಬವಿದೆ. ಮರಣವಾದರೆ ಅಂತ್ಯ ಸಂಸ್ಕಾರವನ್ನ 20 ಗುಂಟೆ ಜಾಗದಲ್ಲಿ ನಡೆಸಲಾಗುತ್ತದೆ. ಈ ಜಾಗವನ್ನ ಮೋಹನ ಮತ್ತು ಮುರುಳಿ ಎಂಬುವರು 10 ಗುಂಟೆ ಜಾಗವನ್ನ ಅಕ್ಕಪಕ್ಕದ ಜಮೀನುದಾರರು ಮೇಲ್ವರ್ಗದವರು ಗುಂಪು ಮಾಡಿಕೊಂಡು ಎಸಿ ಮತ್ತು ವಿಎಗಳಿಗೆ ಮಾಡಿ ಪಹಣಿ ರದ್ದುಮಾಡಲು ತಾಕೀತು ಮಾಡಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದರು. 

ಸ್ಮಶಾನ ಜಾಗವನ್ನ ದಲಿತರಿಗೆ ಕೊಡಬೇಕು. ಮೇಲ್ವರ್ಗದವರು ದೌರ್ಜನ್ಯ ನಡೆಸಿದ್ದಾರೆ.  ಸ್ಮಶಾನ ಭೂಮಿಯನ್ನ ಬಿಟ್ಟುಕೊಡದಿದ್ದರೆ ಚನ್ನಗಿರಿ ರಸ್ತೆಯ ಮೇಲೆ ಸುಡುವುದಾಗಿ ಪೊಲೀಸರಿಗೆ ತಿಳಿಸಿರುವುದಾಗಿ ದೂರಿದರು. 

ಮೋಹನ ಮತ್ತು ಮುರುಳಿಗೆ 50 ಎಕರೆ ಜಾಗವಿದೆ. ಸ್ಮಶಾನ ಜಾಗವೂ ನಮ್ದು ಎನ್ನುತ್ತಾರೆ. 107 ಸೆಕ್ಷನ್ ಅತ್ಮಹತ್ಯೆಗೆ ಪ್ರಚೋದನೆಯ  ಕೇಸ್ ನ್ನ ಇವರ ಮೇಲೆ ಜಾರಿಯಾಗಬೇಕು. ಕನಸಿನಕಟ್ಟೆ ಸ್ಮಶಾನ ಜಾಗ 80 ವರ್ಷದಿಂದ ಇದೆ. ಇದೇ ರೀತಿ ಉದ್ಭವಿಸಿತ್ತು ನಿವಾರಿಸಲಾಯಿತು ಎಂದರು.

Demand for appropriate action against Dalit cemetery site obstruction

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close