SUDDILIVE || BANGLORE
ಠಾಣೆಯಲ್ಲಿ ದೂರು ದಾಖಲಿಸಲು ಜನಪ್ರತಿಗಳ ಮೊರೆ-ಪ್ರಯಾಣಿಕರಿಗೆ ಇಲ್ಲ ಸುರಕ್ಷೆ-Citizens appeal to police to file complaint - no security for passengers
ರೈಲಿನಲ್ಲಿ ಚಲಿಸುವಾಗ ರ‌್ಯಾಡೋ ವಾಚ್, ಬಟ್ಟೆಗಳು ಹಾಗೂ 2800 ರೂ. ನಗದು ಕಳುವಾಗುತ್ತು. ಈ ಕುರಿತು ದೂರು ದಾಖಲಿಸಲು ಶಿವಮೊಗ್ಗದ ವ್ಯಕ್ತಿ ಜನಪ್ರತಿಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 16ರಂದು ಶಿವಮೊಗ್ಗದ ಶಂಕರ ನಿಲಯ ನಿವಾಸಿಯಾದ ನಾಗರಾಜ್ ಎಂಬುವರು 16228 ಕ್ರಮ ಸಂಖ್ಯೆಯ ತಾಳಗುಪ್ಪ-ಮೈಸೂರು ರೈಲಿನಲ್ಲಿ ಚಲಿಸುವಾಗ ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನಭರಣವನ್ನು ಕಳೆದುಕೊಂಡಿದ್ದರು. ರಾತ್ರಿ ಸುಮಾರು 12 20ಕ್ಕೆ ನಿದ್ದೆಗೆ ಜಾರಿದ ನಾಗರಾಜ್ ಅವರ ಪಕ್ಕದಲ್ಲಿದ್ದ ನೀಲಿ ಬ್ಯಾಗ್ ಕಾಣೆಯಾಗಿತ್ತು.
ರ‌್ಯಾಡೋ ವಾಚ್, ನಗದು, ಬಟ್ಟೆಗಳು ಸೇರಿ 2,67,800 ರೂ. ಮೌಲ್ಯದ ವಸ್ತುಗಳು ಬ್ಯಾಗ್ ನಲ್ಲಿದ್ದವು. ಎ-1 ಕೋಚ್ ನಲ್ಲಿ ರಾತ್ರಿ ಚಲಿಸುವಾಗ ಕಳವು ಘಟನೆ ನಡೆದಿದೆ. ಬೆಳಿಗ್ಗೆ ಎದ್ದು ನೋಡಿಕೊಂಡಾಗ ನೀಲಿ ಬ್ಯಾಗ್ ಕಳುವಾಗಿದೆ. ಈ ಕುರಿತು ಬೆಂಗಳೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ ನಾಗರಾಜ್ ಗೆ ಪೊಲೀಸರು ತಕ್ಷಣವೇ ದೂರು ದಾಖಲಿಸಿಕೊಂಡಿರಲಿಲ್ಲ.
ನಂತರ ಇದೇ ರೈಲಿನಲ್ಲಿ ಮಾಜಿ ಗೃಹ ಸಚಿವರು ಮತ್ತು ಎಂಎಲ್ ಸಿ ಅವರು ಚಲಿಸುತ್ತಿದ್ದು, ಈ ಘಟನೆಯನ್ನ ಇವರ ಗಮನಕ್ಕೆ ತಂದ ನಂತರ ಪ್ರಕರಣ ದಾಖಲಾಗಿದೆ. ಹೀಗೆ ಜನ ಸಾಮಾನ್ಯನಿಗೆ ಇರಬೇಕಾದ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲು ಜನಪ್ರತಿನಿಧಿಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ರೈಲುಗಳ ಸಂಖ್ಯೆಗಳು ಅಧಿಕವಾದ ಪರಿಣಾಮ ಈ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಆದರೆ ರೈಲಿನ ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ಅಷ್ಟೆ ಸತ್ಯ
Citizens appeal to police to file complaint - no security for passengers