SUDDILIVE || SHIVAMOGGA
ಸಡಗರದ ನಾಗರಪಂಚಮಿ-The bustling Nagara Panchami
ನಗರದ ಎಲ್ಲೆಡೆ ನಾಗರ ಪಂಚಮಿ ಹಬ್ಬವನ್ನ ಆಚರಿಸಲಾಗುತ್ತಿದೆ. ಶ್ರಾವಣ ಶುಕ್ಲಪಕ್ಷದ ಪಂಚಮಿಯಂದು ನಾಗರ ಪಂಚಮಿ ಆಚರಣೆಯನ್ನ ಹಿಂದೂಗಳು ಆಚರಿಸಿಕೊಂಡು ಬರಲಾಗುತ್ತಿದೆ.
ಈ ಹಬ್ಬವನ್ನ ಅಣ್ಣ-ತಂಗಿಯರ ಹಬ್ಬ ಎಂದು ಸಹ ಕರೆಯಲಾಗುತ್ತದೆ. ಮಹಾರಾಷ್ಡ್ರದ ಶಿರಾಳ ಎಂಬಲ್ಲಿ ಜೀವಂತ ಹಾವನ್ನ ಪೂಜಿಸಲಾಗುತ್ತದೆ. ಇದು ಹಬ್ಬಗಳ ಸಾಲಿಗೆ ನಾಂದಿ ಹಾಡುವ ಹಬ್ಬವಾಗಿದೆ. ರಕ್ಷಬಂಧನ, ಕೃಷ್ಣ ಜನ್ಮಾಷ್ಠಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ನಾಗರ ಪಂಚಮಿಯಿಂದ ಆರಂಭವಾಗಲಿದೆ.
ಪುರಾಣ ಕಥೆಗಳ ಪ್ರಕಾರ ಜನಮೇಜ ರಾಜ ತನ್ನ ತಂದೆ ಪರೀಕ್ಷಿತ ಮಹಾರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು ಸರ್ಪ ಕುಲವನ್ನೇ ನಿರ್ನಾಮ ಮಾಡಲು ಸರ್ಪಯಜ್ಞ ಮಾಡಲು ಮುಂದಾಗುತ್ತಾನೆ. ಈ ಸಂಧರ್ಭದಲ್ಲಿ ಸರ್ಪಗಳು ತಮ್ಮ ದೂರದ ಬಂಧು ಆಸ್ತಿಕ ಋಷಿಯನ್ನ ಕೇಳಿಕೊಂಡಾಗ ಆಸ್ತಿಕನೇ ಜನಮೇಜ ರಾಜನನ್ನ ಪ್ರಸನ್ನಗೊಳಿಸಿಕೊಳ್ಳುತ್ತಾನೆ.
ಆಗ ಏನು ವರಬೇಕು ಕೇಳು ಎಂದಾಗ ಈ ಸರ್ಪ ಯಜ್ಞವನ್ನನಿಲ್ಲಿಸುವಂತೆ ಆಸ್ತಿಕನು ಕೇಳಿಕೊಳ್ಳುತ್ತಾನೆ. ನಾಗರ ಪಂಚಮಿಯಂದು ಜನಮೇಜ ರಾಜ ಈ ಯಜ್ಞವನ್ನ ನಿಲ್ಲಿಸುತ್ತಾನೆ. ಈ ದಿನ ಎಲ್ಲಾ ಕೆಡಕುಗಳಿಂದ ನಾಗರ ಕಲ್ಲುಗಳಿಗೆ ಹಾಲು ಬೆಳ್ಳಿ ಅರ್ಪಿಸಲಾಗುತ್ತದೆ.
ನಗರದ ರವೀಂದ ನಗರ ಗಣಪತಿ ದೇವಸ್ಥಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಗನ ಕಲ್ಲಿಗೆ ಪೂಜಿಸಿದರು.
The bustling Nagara Panchami