SUDDILIVE || SHIKARIPUR
ಶಿಕಾರಿಪುರದಲ್ಲಿ ಅರಣ್ಯ ನಾಶ ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆ ಆಗ್ರಹ-Demand to order a high-level investigation into forest destruction in Shikaripura
ಶಿಕಾರಿಪುರದಲ್ಲಿ ಮೀಸಲಾ ಅರಣ್ಯ ರಾಜ್ಯ ಅರಣ್ಯ ಲೂಟಿ ಮಾಡಿದವರ ವಿರುದ್ಧ ಹಾಗೂ ಭ್ರಷ್ಠ ಅಧಿಕಾರಿಗಳ ವಿರುದ್ಧ ರಾಜ್ಯ ನಾಗರೀಕರ ಶಕ್ತಿ ವೇದಿಕೆ ತಹಸಿಲ್ದಾರ್ ಮೂಲಕ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವರಾದ ಈಶ್ವರ್ ಕಂಡ್ರೆ ಅವರಿಗೆ ಇಂದು ಮನವಿ ಸಲ್ಲಿಸಿತು
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಹಲವು ವರ್ಷಗಳಿಂದ ಐತಿಹಾಸಿಕ ಹಾಗೂ ವಿಶ್ವದಲ್ಲಿ ಅತಿ ಹೆಚ್ಚು ಗಂಧದ ಮರಗಳನ್ನು ಬೆಳೆಯುತ್ತಿದ್ದ ಚಂದ್ರಕಲಾ ಫಾರೆಸ್ಟ್ ಕುಟ್ಟ್ರಹಳ್ಳಿ ಶ್ರೀಗಂಧದ ರಿಸರ್ವ್, ಕೆಂಗಟ್ಟೆ ಸ್ಯಾಂಡಲ್, ರಿಸರ್ವ್ ಅರಣ್ಯ, ಗಂಗವ್ವನ ಸರ ಫಾರೆಸ್ಟ್, ಇಟ್ಟಿಗೆಹಳ್ಳಿ ಶ್ರೀಗಂಧದ ಬ್ಲಾಕ್, ಯರೆಕಟ್ಟೆ ಸ್ಟೇಟ್ ಫಾರೆಸ್ಟ್ ಹಾಗು ಇನ್ನು 10 ಹಲವಾರು ಅನೇಕ ಮೀಸಲು ಹಾಗೂ ರಾಜ್ಯ ಅರಣ್ಯಗಳು ಅಕ್ರಮ ಒತ್ತುವರಿಯಾಗಿದೆ.
ಇವುಗಳನ್ನು ನಾಶ ಮಾಡಿ ಸಾವಿರಾರು ಎಕರೆ ಅರಣ್ಯ ಪ್ರದೇಶದ ಭೂಮಿಗಳನ್ನು ಕೃಷಿ ಜಮೀನನ್ನಾಗಿ ಮತ್ತು ಅಡಿಕೆ ಬಾಳೆ ಮಾವಿನ ತೋಟಗಳನ್ನಾಗಿ ಮಾಡಿ ಕಾಡಿನ ಗುಡ್ಡ ಬೆಟ್ಟಗಳ ಪ್ರದೇಶಗಳಲ್ಲಿ ಲಕ್ಷಾಂತರ ಮೆಟ್ರಿಕ್ ಟನ್ ಗಳಷ್ಟು ಮರ ಮಣ್ಣು ಕಲ್ಲುಗಳನ್ನು ತೆಗೆದು ಖಾಸಗಿ ಅವರಿಗೆ ಲೇಔಟ್ ದಾರರಿಗೆ ಮಾರಾಟ ಮಾಡುತ್ತಿರುವುದು ಈಗಲೂ ದಿನನಿತ್ಯ ಕಂಡುಬರುತ್ತದೆ
ಈ ಘಟನೆ ಬಗ್ಗೆ ಶಿಕಾರಿಪುರ ತಾಲೂಕು ಪ್ರಗತಿಪರ ಸಂಘಟನೆಗಳು ಸಂಘ ಸಂಸ್ಥೆಗಳು ಪತ್ರಿಕ ಮಾಧ್ಯಮಗಳು ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಇಲ್ಲಿಯವರೆಗೂ ಯಾವುದೇ ಬದಲಾವಣೆ ಆಗದೆ ಬೇಲಿಯೇ ಎದ್ದು ಹೊಲವನ್ನು ಮೇಯುವ ರೀತಿಯಲ್ಲಿ ಕಾಡುಗಳ್ಳರ ಜೊತೆ ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಕೈಜೋಡಿಸಿದ್ದಾರೆ ಹಾಡು ಆಗಲೇ ಕಾಡು ಕಳ್ಳರು ಜೆಸಿಬಿಗಳನ್ನು ಟಿಪ್ಪರ್ ಲಾರಿಗಳನ್ನು ಬಳಸಿ ಮೀಸಲು ಅರಣ್ಯದಲ್ಲಿ ಅರಣ್ಯ ನಾಶ ಮಾಡಿ ಮಣ್ಣು ಕಲ್ಲುಗಳನ್ನು ತೆಗೆದು ಮಾರಾಟ ಮಾಡುತ್ತಿದ್ದಾರೆ.
ಸರ್ಕಾರ ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ತಪ್ಪಿತಸ್ಥರ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಒತ್ತುವರಿಯಾಗಿರುವ ಎಲ್ಲ ಪ್ರದೇಶಗಳಲ್ಲಿ ಅಸಲೀಕರಣ ಮಾಡಬೇಕೆಂದು ವೇದಿಕೆ ಮನವಿಯಲ್ಲಿ ಆಗ್ರಹಿಸಿದೆ ಮನವಿ ನೀಡುವ ವೇಳೆ ವೇದಿಕೆಯ ಬಿಎಸ್ ಯುವರಾಜ್, ಸಿ ರಾಜಕುಮಾರ, ಎಂ ವಿಜಯ್ ಕುಮಾರ್ ಡಿಡಿ ಶಿವಕುಮಾರ್ರು ತೀರ್ಥಪ್ಪ ಮೊದಲಾದವರು ಉಪಸ್ಥಿತರಿದ್ದರು.
Demand to order a high-level investigation into forest destruction in Shikaripura