SUDDILIVE || SHIVAMOGGA
ಸಭೆಯಲ್ಲಿ ತೀರ್ಮಾನಿಸಿದಂತೆ ಸಿಟ್ ಬಸ್ ಮಾಲೀಕರು ಮತ್ತು ಸಿಬ್ಬಂದಿಗಳು ನಡೆದುಕೊಳ್ತಾರಾ? Will the city bus owner and staff behave as planned?
ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದಲ್ಲಿ ನಗರದ ಸಿಟಿ ಬಸ್ ಮಾಲೀಕರ ಸಭೆ ನಡೆದಿದೆ. ಸಭೆಯಲ್ಲಿ ಹಲವಾರು ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನದಂತೆ ಮಾಲೀಕರು ಅವರ ಸಿಬ್ಬಂದಿಗಳು ನಡೆದುಕೊಳ್ತಾರಾ ಎಂಬುದೇ ಕುತೂಹಲ.
ಸಿಟಿಯಲ್ಲಿ ನಗರ ಸಂಚಾರಿ ಬಸ್ ಗಳು ಮತ್ತು ಆಟೋಗಳ ಅಡ್ಡದಿಡ್ಡಿ ಸಂಚಾರಗಳು ಇತರೆ ಸವಾರರಿಗೆ ಸಾಕಾಗಿದೆ. ಸಿಟಿ ಬಸ್ ಗಳು ಪ್ರಯಾಣಿಕರು ಎಲ್ಲೆಂದರೆಲ್ಲಿ ಅದರಲ್ಲೂ ಸಿಗ್ನಲ್ ದಾಟುತ್ತಿದ್ದಂತೆ ಅಲ್ಲಿ ಸ್ಟಾಪ್ ನೀಡಿ ಪ್ರಯಾಣಿಕರನ್ನ ಹತ್ತಿಸಿಕೊಳ್ಳುವ ಮೂಲಕ ಸಿಗ್ನಲ್ ದಾಟುವ ಇತರೆ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಆದರೆ ಪೊಲೀಸರು ಇದನ್ನ ಗಮನಿಸದೆ ದ್ವಿಚಕ್ರ ವಾಹನ ಸವಾರರ ದಂಡ ವಸೂಲಿ ನಗರದ ಹಲವೆಡೆ ನಡೆಯುತ್ತದೆ.
ಇನ್ನೂ ಈ ಆಟೋದವರ ಹಾವಳಿ ಹೇಳ ತೀರದು. ಯಾವ ಆಟೋಗಳು ಮೀಟರ್ ಹಾಕಲ್ಲ. ಹಬ್ಬಹರಿದಿನಗಳು ಬಂದರೆ ದರಗಳು ಗಗನಕ್ಕೇರುತ್ತವೆ. ಇವನ್ನೆಲ್ಲಾ ಕೇಳುವವರು ಪ್ರೂಫ್ ಕೊಡಿ ಎನ್ನುತ್ತಾರೆ. ಬೆಂಕಿ ಇಲ್ಲದೆ ಹೊಗೆ ಆಡೊಲ್ಲ. ಸಿಗ್ನಲ್ ಹಾಕದೆ ಆಟೋದವ ತಿರುವು ತೆಗೆದುಕೊಳ್ಳೋದು, ಎಲ್ಲೆಂದರಲ್ಲಿ ಆಸ್ಪತ್ರೆಗಳ ಮುಂದೆ ಪಾರ್ಕಿಂಗ್ ಮಾಡಿಕೊಳ್ಳುವುದು ಸಮಸ್ಯೆಗೆ ಕಾರವಾಗಿದೆ. ಆ ರಸ್ತೆಯಲ್ಲಿ ನಾಲ್ಕು ವಾಹನಗಳು ಬಂದರೆ ಜ್ಯಾಮ್ ಆಗಲಿದೆ. ಇವುಗಳೆಲ್ಲಾ ಸಮಸ್ಯೆಗಳು ಹಾಗೆ ಉಳಿದಿದೆ. ನೋಡೋಣ ಸಿಟಿ ಬಸ್ ನವರಾದರೂ ರಸ್ತೆ ನಿಯಮಗಳನ್ನ ಪಾಲಿಸುತ್ತಾರಾ ಕಾದು ನೋಡೋಣ
ಈ ದಿನ ದಿನಾಂಕಃ 09-07-2025 ರಂದು ಸಂಜೆ ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ಸಂಚಾರ ಪೊಲೀಸ್ ವತಿಯಿಂದ ಶಿವಮೊಗ್ಗ ನಗರದ ಸಿಟಿ ಬಸ್ ಮಾಲೀಕರುಗಳ ಸಭೆಯನ್ನು ಆಯೋಜಿಸಿದ್ದು, ಸದರಿ ಸಭೆಯಲ್ಲಿ, ಶ್ರೀ ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತರವರು ಸಭೆಯಲ್ಲಿ ಭಾಗವಹಿಸಿ, ಕಾರ್ಯ ಕ್ರಮದ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.
1. ಬಸ್ ಪ್ರಯಾಣಿಕರು ಕೈ ತೋರಿಸಿದ ಕಡೆ ಮತ್ತು ಎಲ್ಲಿ ಅಂದರೆ ಅಲ್ಲಿ ಬಸ್ ನಿಲ್ಲಿಸದೆ ನಿಗದಿ ಪಡಿಸಿರುವ ಸಿಟಿ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್ ನಿಲ್ಲಿಸುವುದು.
2. ಎಲ್ಲಾ ಸಿಟಿ ಬಸ್‌ಗಳ ವಿಮೆ, ಎಫ್.ಸಿ, ವಾಯುಮಾಲಿನ್ಯ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳುವುದು.
3. ಸಿಟಿ ಬಸ್‌ಗಳ ಮೇಲೆ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಯ ಚಲನ್ ಗಳ ದಂಡದ ಹಣವನ್ನು ಪಾವತಿ ಮಾಡುವುದು.
4. ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಿದರು.ಸಭೆಯಲ್ಲಿ, ಶ್ರೀ ಶಿವಣ್ಣನವರ್ ಪಿಎಸ್ಐ ಪೂರ್ವ ಸಂಚಾರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
Will the city bus owner and staff behave as planned?