SUDDILIVE || SHIVAMOGGA
ಶ್ವಾನಪ್ರೇಮಿಯಿಂದ ನಡೆಯಿತು ಹಲ್ಲೆ ಮತ್ತು ರಾಬರಿ-Dog lover commits assault and robbery
ಕಲ್ಲಾಪುರದ ಟೋಲ್ ಬಳಿ ನಡೆದ ಪ್ರಕರಣದಲ್ಲಿ ಕುಂಸಿ ಪೊಲೀಸರು ಆರೋಪಿಯನ್ನ ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ನಾಯಿಗೆ ಅಪಘಾತ ಪಡಿಸಿದ ಪರಿಣಾಮ ಹಿಂಬಲಿಸಿಕೊಂಡು ಬಂದು ರಾಬರಿ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ
ಶಿಕಾರಿಪುರ ತಾಲೂಕು ಗಾಮ ಗ್ರಾಮದ ವಾಸಿ, ಶಿವಯೋಗಿ ತಂದೆ ಗಂಗಾಧರಯ್ಯ ರವರು ಆರ್ಗನಿಕ್ ಫುಡ್ ಪ್ರಾಡಕ್ಟ್ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ 12.6.2025 ರಂದು ಮಧ್ಯಾಹ್ನ ತನ್ನ ಶಿಫ್ಟ್ ಕಾರಿನಲ್ಲಿ ಶಿವಮೊಗ್ಗಕ್ಕೆ ಹೋಗಿ ವ್ಯಾಪಾರ ಮುಗಿಸಿಕೊಂಡು ವಾಪಸ್ ಶಿಕಾರಿಪುರ ಮಾರ್ಗವಾಗಿ ಊರಿಗೆ ಹೋಗಲು ಬರುತ್ತಿರುವಾಗ ಸುತ್ಕೋಟೆ ಟೋಲ್ ಗೇಟ್ ಬಳಿ ರಾಬರಿಯಾಗಿತ್ತು.
ರಾತ್ರಿ ಸುಮಾರು 9:40 ರಿಂದ 10 ಗಂಟೆ ಸಮಯದಲ್ಲಿ ಟೋಲ್ ಗೇಟ್ ಬಳಿ ಶಿವಯೋಗಿಯವರು ತನ್ನ ಕಾರನ್ನು ನಿಧಾನಿಸಿದಾಗ ಒಬ್ಬ ವ್ಯಕ್ತಿ ಕಾರಿನ ಹಿಂದಿನಿಂದ ಬಂದು ಕಾರನು ಬಡಿದಿದ್ದು ಶಿವಯೋಗಿ ರವರು ಕಾರನು ನಿಲ್ಲಿಸಿದಾಗ ಅವಾಚ್ಯವಾಗಿ ಕಾರಿನ ಒಳಗೆ ಕೈ ಹಾಕಿ ಶಿವಯೋಗಿ ರವರಿಗೆ ಕೈ ಯಿಂದ ಮುಖಕ್ಕೆ ಎದೆಗೆ ಗುದ್ದಿದ್ದು ಆತನ ಜೊತೆಗಿದ್ದ ಇತರರು ಶಿವಯೋಗಿ ರವರಿಗೆ ನಾಯಿಗೆ ಅಪಘಾತ ಪಡಿಸಿದ್ದೀಯ ಎಂದು ಹೆದರಿಸಿದ್ದು ನಂತರ ಹಣ ಕಿತ್ತುಕೊಂಡಿದ್ದರು.
ಆ ವೇಳೆ ಸಹಾಯಕೆ ಯಾರು ಬಾರದೇ ಇದ್ದುದ್ದರಿಂದ ಶಿಕಾರಿಪುರ ಕ್ಕೆ ಹೋಗಿ ಚಿಕಿತ್ಸೆ ಪಡೆದು ನಂತರ ಜೂ.14 ರಂದು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಗಿಸಿದ್ದರು. ಪ್ರಕರಣ ಮೇಲೆ ತನಿಖೆ ಕೈಗೊಂಡು ಪೊಲೀಸ್ ಇನ್ಸ್ಪೆಕ್ಟರ್ ದೀಪಾಕ್ ರವರ ನೇತೃತ್ವದ ತಂಡ ಆರೋಪಿತರಾದ 1) ಕಾರ್ತಿಕ್, 2) ಗಂಗಾಧರನಾಯ್ಕ್ ವಾಸ ಕುಂಚೇನಹಳ್ಳಿ ತಾಂಡಾ ಗ್ರಾಮ ಶಿವಮೊಗ್ಗ ತಾಲ್ಲೂಕು ರವರನ್ನು ಬಂಧಿಸಿ ನ್ಯಾಯಾಂಗ ಬಂಧನಕೆ ಒಪ್ಪಿಸಲಾಗಿದೆ.
Dog lover commits assault and robbery