SUDDILIVE || HOSANAGARA
ಎರಡು ತಾಲೂಕಿನ ಶಾಲಾ, ಕಾಲೇಜು ಮತ್ತು ಅಂಗನವಾಡಿಗಳಿಗೆ ಇಂದು ರಜೆ ಘೋಷಣೆ-Holiday declared for schools, colleges and anganwadis in two talukas today
ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಹಿನ್ನಲೆಯಲ್ಲಿ ಎರಡು ತಾಲೂಕಿನಾದ್ಯಂತ ಶಾಲಾ ಕಾಲೇಜು ಮತ್ತು ಅಂಗನವಾಡಿಗಳ ಮಕ್ಕಳಿಗೆ ಇಂದು ಸಹ ರಜೆ ಘೋಷಿಸಲಾಗಿದೆ. ಮಳೆಯ ಆರ್ಭಟ ಹೆಚ್ಚಾಗುವ ಮುನ್ಸೂಚನೆಯ ಹಿನ್ನಲೆಯಲ್ಲಿ ಅಲ್ಲಿನ ತಹಶೀಲ್ದಾರ್ ರಜೆಗೆ ಆದೇಶಿಸಿದ್ದಾರೆ.
ಹೊಸನಗರ ತಾಲೂಕಿನಾದ್ಯಂತ ಮಳೆ ಹೆಚ್ಚಾಗಿ ಸುರಿಯುತ್ತುರುವ ಹಿನ್ನಲೆಯಲ್ಲಿ ಪ್ರಾಥಮಿಕ, ಹಿರಿಯ ಮತ್ತು ಪ್ರೌಢ ಶಾಲೆ ಗಳಿಗೆ, ಪದವಿಪೂರ್ವ ಮತ್ತು ಅಂಗನವಾಡಿ ಶಾಲೆಗಳಿಗೆ ತಹಶೀಲ್ದಾರ್ ರಶ್ಮೀ ಹಾಲೇಶ್ ರಜೆ ಘೋಷಿಸಿದರೆ,
ಇತ್ತ ಸಾಗರದಲ್ಲಿ ಭಾರಿ ಮಳೆ ಇರುವ ಕಾರಣ ಮಕ್ಕಳ ಹಿತೈದೃಷ್ಟಿಯ ಹಿನ್ನಲೆ ಮಾನ್ಯ ತಹಸೀಲ್ದಾರ್ ಅವರ ಆದೇಶದ ಮೇರೆಗೆ ಸಾಗರ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ, ಪದವಿಪೂರ್ವ ಕಾಲೇಜುಗಳಿಗೆ, ಡಿಪ್ಲೋಮ ಕಾಲೇಜಗಳಿಗೆ ಇಂದು (ಜುಲೈ 5 ಶನಿವಾರದಂದು) ರಜೆ ಘೋಷಿಸಿದ್ದಾರೆ.
Holiday declared for schools