SUDDILIVE || SHIVAMOGGA
ರೈತರ ಸಮಸ್ಯೆ ಬಗೆಹರಿಸಿ ಇಲ್ಲ ಪ್ರತಿಭಟನೆ ಎದುರಿಸಿ-ತೀ.ನಾ.ಶ್ರೀ-Farmers' problems will not be solved, but they will face protests - T.N.Sri
ರೈತರಿಗೆ ಹಕ್ಕು ಪತ್ರ ಕೊಡಿಸುವಲ್ಲಿ ಮಧು ಬಂಗಾರಪ್ಪ ಮತ್ತು ಸಂಸದ ರಾಘವೇಂದ್ರ ಸೇರಿದಂತೆ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಆರೋಪಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿಯ ತೀ.ನಾ.ಶ್ರೀನಿವಾಸ್ ಶರಾವತಿ, ತುಂಗ, ಭದ್ರ, ವರಾಹಿ ಚಕ್ರ ಸಾವೆಹಕ್ಲು ಅಂಬ್ಲಿಗೋಳ ಅಣೆಕಟ್ಟಿನ ನಿರ್ಮಾಣಕ್ಕೆ ಮಲೆನಾಡಿಗರು ಭೂಮಿ ನೀಡಿದ್ದಾರೆ. ಮಲೆನಾಡಿದ 65 ವಿಧಾನಸಭಾ ಕ್ಷೇತ್ರ ಬರುತ್ತೆ. ಅಲ್ಲಿನ ಜನರ ಭೂಮಿ ಹಕ್ಕು ನೀಡುವ ಭರವಸೆ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ವಿಫಲವಾಗಿದೆ ಎಂದರು.
ಸಚಿವ ಮಧು ಬಂಗಾರಪ್ಪ ಅವರಿಗೆ ದೀವರ ವೋಟ್ ಮೇಲೆ ಕಣ್ಣಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಲಾಭಿ ಬೇಕಿದೆ ರಾಜ್ಯ ರೈತರ ಸಮಸ್ಯೆ ಬೇಡವಾಗಿದೆ. ಪಂಪ್ಡ್ ಸ್ಟೋರೇಜ್ ನಲ್ಲಿ 13 ಸಾವಿರ ಮರ ಕಡಿಯಲಾಗುತ್ತದೆ. ಅಲ್ಲಿ ಮರ ಕಡಿಯಲು ಲಾಭಿ ನಡೆಯುತ್ತದೆ. ಅದು ಎರಡೂ ಸರ್ಕಾರಕ್ಕೆ ಬೇಕಿದೆ ಎಂದು ಹೇಳಿದರು.
ಜಿಲ್ಲಾ ಸಚಿವರು ಸಂಸದರು ಅಧಿಕಾರಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಸಾವಿರಾರು ರೈತರು ಅರಣ್ಯ ಕಂದಾಯ ಇಲಾಖೆಗೆ ತಿರುಗುವಂತಾಗಿದೆ. ಶಾರದಪೂರ್ಯನಾಯ್ಕ್ ಹೊರತುಪಡಿಸಿ ಶಾಸಕರಿಗೆ ಮಾತು ಎತ್ತಲ್ಲ. ವಿಜೇಂದ್ರ ರೈತರ ಸಮಸ್ಯೆ ಬಗ್ಗೆ ಮಾತನಾಡೊಲ್ಲ ಎಂದು ದೂರಿದರು.
ಪಂಪ್ಡ್ ಸ್ಟೋರೇಜ್ ನಲ್ಲಿ 15 ಕುಟುಂಬಕ್ಕೆ ಒಕ್ಕಲೆಬ್ಬಿಸಲು ನೋಟೀಸ್ ನೀಡಿ ತರಾತುರಿಯಲ್ಲಿ ಸಭೆ ನಡೆಸಿ ಒಕ್ಕಲೆಬ್ಬಿಸಲು ಅಧಿಕಾರಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಶಾಸಕರು ಇದಕ್ಕೆ ಯಶಸ್ಸಿನ ಸಭೆ ನಡೆಸುತ್ತಾರೆ. ರೈತರ ಸಮಸ್ಯೆ ಬಗೆಹರಿಸಲು ಇವರಿಗೆ ಸಮಯವಿಲ್ಲ. ಹಾಗಾಗಿ ಹೋರಾಟ ಮಾಡುತ್ತೇವೆ ಎಂದರು.
ಪ್ರಧಾನಿಗೆ ಪತ್ರ ಬರೆದರೆ ಅಲ್ಲಿಂದ ಪತ್ರ ಬರುತ್ತೆ. ಸಿಎಂ ಕಚೇರಿ ನಮ್ಮ ಪತ್ರಕ್ಕೆ ಉತ್ತರ ನೀಡಲ್ಲ. ಜನರಿಗೆ ಕಿಂಚಿತ್ತು ಮಾನಮರ್ಯಾದೆ ಉಳಿಯ ಬೇಕೆಂದರೆ ಸಂಸದರು ಮತ್ತು ಸಚಿವರು ಸಭೆ ಮಾಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
Farmers' problems will not be solved, but they will face protests - T.N.Sri