SUDDILIVE || SHIVAMOGGA
ಪ್ರೋಟೋಕಾಲ್ ಏನೇ ಇದ್ದರು ಧರ್ಮದರ್ಶಿ ರಾಮಪ್ಪನವರನ್ನ ಆಹ್ವಾನಿಸಿ-NGVK-Whatever the protocol, invite Dharmadarshi Ramappa - SNGVK
ಸೇತುವೆ ಆರಂಭದಿಂದಲೂ ಪ್ರತಿಭಟನೆ, ಹೋರಾಟ, ಗೊಂದಲಗಳಿಂದ ಕೂಡಿದ ಸಿಗಂದೂರು ಸೇತುವೆ ಉದ್ಘಾಟನೆಗೆ ಬಂದು ನಿಂತಿದೆ. ಉದ್ಘಾಟನೆಗೆ 48 ಗಂಟೆ ಇದ್ದರೂ ಹೇಳಿಕೆ ಪ್ರತಿಹೇಳಿಕೆಯಲ್ಲೇ ಮುಳುಗಿದೆ. ಈ ಕುರಿತು ನಾರಾಯಣಗುರ ವಿಚಾರ ವೇದಿಕೆ ತನ್ನ ವಾದವನ್ನ ಪ್ರತಿಪಾದಿಸಿದೆ.
ಸಿಗಂದೂರು ಸೇತುವೆ ಉದ್ಘಾಟನೆ ಜು.14 ರಂದು ನಡೆಯುತ್ತಿದ್ದು ಇದಕ್ಕೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮಾಧಿಕಾರಿಯನ್ನ ಆಹ್ವಾನಿಸಬೇಕು ಎಂದು ನಾರಾಯಣ ಗುರು ವಿಚಾರ ವೇದಿಕೆ ಪ್ರವೀಣ್ ಇರೇಗೋಡು ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿದ ಅವರು, ಚೌಡೇಶ್ವರಿ ದೇವಿ ಇಲ್ಲದ ಹೋದರೆ ಪ್ರವಾಸಿಗರು ಬರ್ತಾಯಿರಲಿಲ್ಲ. ಪ್ರವಾಸಿಗರನ್ನ ವಿಶೇಷವಾಗಿ ಆಕರ್ಷಿಸುತ್ತಿದ್ದು. ದೇವಿಗೆ ದೇಶ ವಿದೇಶದಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಉದ್ಘಾಟಿಸಲು ಹೊರಟಿರುವ ಸೇತುವೆ ಉದ್ಘಾಟನೆಗೆ ಡಾ.ರಾಮಪ್ಪನವರನ್ನ ಆಹ್ವಾನಿಸಬೇಕು. ಅವರ ಶಿಷ್ಠಾಚಾರ ಏನೆ ಇದ್ದರೂ ಅವರನ್ನಕರೆದಿ ಗೌರವ ನೀಡುವ ನಿಟ್ಟಿನಲ್ಲಿ ಆಹ್ವಾನಿಸಬೇಕು ಮತ್ತು ಸಿಗಂದೂರು ಚೌಡೇಶ್ವರಿ ಹೆಸರಿಡಬೇಕು ಎಂದರು.
ಭಡ್ಕಳದ ಸೇತುವೆ ಉದ್ಘಾಟನೆಯ ವೇಳೆ ರಾಮನ ಹೆಸರು ಇಟ್ಟು ನಾಮಕರಣ ಮಾಡಲಾಗಿತ್ತು. ಇದಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಅವರ ಹೆಸರು ಪ್ರೊಟೋಕಾಲ್ ನಲ್ಲಿ ಇಲ್ಲದಿದ್ದರು ಆರ್ ಎಸ್ ಎಸ್ ನ ಮುಖಂಡ ಭಟ್ಟರ ಮೂಲಕವೇ ಉದ್ಘಾಟಿಸಲಾಗಿದೆ ಹಾಗೇ ಧರ್ಮಪ್ಪನವರಿಗೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಪ್ರಕಟಿಸಬೇಕೆಂದರ ಅವರು ಒಂದು ವೇಳೆ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರು ಇಡದಿದ್ದರೆ ಹಿಂದೂಳಿದ ವರ್ಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ನಾಮಕರಣ ಮಾಡದಿದ್ದರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕಾಣದ ಕೈಗಳು ಈ ಹೆಸರು ಇಡಲು ತಡೆತುತ್ತಿರುವ ಅನುಮಾನವಿತ್ತು. ವಿಮಾನ ನಿಲ್ದಾಣಕ್ಕೆ ಬಂಗಾರಪ್ಪನವರ ಹೆಸರು ಇಡಲು ಒತ್ತಾಯಿಸಲಾಗಿತ್ತು. ಸರ್ಕಾರ ಇನ್ನೂ ಆ ಹೆಸರು ಇಟ್ಟಿಲ್ಲ. ಮೆಗ್ಗಾನ್ ಗೆ ಮತ್ತು ಕೃಷಿ ವಿವಿಗೆ ನಮ್ಮ ನಾಯಕರ ಹೆಸರು ಇಡಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ.
ಸಂಸದರು ಸಿಗಂದೂರು ಚೌಡೇಶ್ವರಿ ದೇವಸ್ಥಾನ ಹೆಸರಿಡಲು ಹೇಳಿದ್ದಾರೆ ರಾಜ್ಯ ಸರ್ಕಾರ ಎನ್ ಒಸಿ ಕೊಡೇಕುದೆ ಎಂದು ಬಿದರೆ ಹರಿನಾಥ ರಾವ್ ನವರ ಮೂಲಕ ಯಡಿಯೂರಪ್ಪನವರ ಹೆಸರಿಡಲುಕೋರ್ಟ್ ಗೆ ಹೋಗಿದ್ದಾರೆ. ಇದು ಮೇಲ್ನೋಟಕ್ಕೆ ಹಿಂದುಳಿದ ವರ್ಗಗಳ ಹೆಸರು ಇಡಲು ತುಳಿಯುವ ಪ್ರಯತ್ನ ಎಂದು ತಿಳಿದು ಬರುತ್ತಿದೆ ಎಂದರು.
ಆಹ್ವಾನ ಪತ್ರಿಕೆಯಲ್ಲಿ ಧರ್ಮದರ್ಶಿಗಳ ಹೆಸರಿಲ್ಲ. ಯಾವುದೇ ಪ್ರೋಟೋಕಾಲ್ ಆದರೂ ಧರ್ಮದರ್ಶಿಗಳ ಹೆಸರನ್ನ ನಮೂದಿಸಬೇಕು ಮತ್ತು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಅವರು ಆಗ್ರಹಿಸಿದರು.
invite Dharmadarshi Ramappa - NGVK