ad

ಕೆರೆ ಏರಿ ಕುಸಿಯುವ ಭೀತಿ, ಮರಬಿದ್ದು ಶೌಚಾಲಯ ಜಖಂ-Fear of lake rising and collapsing, toilet damaged by falling tree

SUDDILIVE || SORABA

ಕೆರೆ ಏರಿ ಕುಸಿಯುವ ಭೀತಿ, ಮರಬಿದ್ದು ಶೌಚಾಲಯ ಜಖಂ-Fear of lake rising and collapsing, toilet damaged by falling tree

Soraba, lake


ನಿರಂತರ ಮಳೆಗೆ ಕೆರೆ ಏರಿ‌ ಕುಸಿಯುವ ಭೀತಿಯಲ್ಲಿ ಸೊರಬತಾಲೂಕಿನ ದೇವತಿ ಕೊಪ್ಪ ಉರಗನಹಳ್ಳಿಯ ದೊಡ್ಡ ಕೆರೆಯ ಸುತ್ತಮುತ್ತಲಿನ ಜನರಿದ್ದಾರೆ. 

ತಾಲೂಕಿನ  ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶದ ಅಪಾರ ಪ್ರಮಾಣದ ಕೃಷಿ ಭೂಮಿಗೆ ನೀರು ನುಗ್ಗುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. 

ಬೇಸಿಗೆಯಲ್ಲಿ ಕೃಷಿ ಜಮೀನಿಗೆ ಮೂಲವಾಗಿರುವ ಕೆರೆ, ಇತ್ತೀಚಿನ ವರ್ಷದಲ್ಲಿ ನಿರಂತರವಾಗಿ ಕುಸಿಯುತ್ತಿರುವ ಕೆರೆ ಏರಿ ಅಧಿಕಾರಿಗಳು ತಕ್ಷಣವೇ ಶಾಶ್ವತ ಪರಿಹಾರ ಒದಗಿಸಲು ಕಾರ್ಯೋನ್ಮುಖವಾಗಬೇಕು ಎಂದು  ಸ್ಥಳೀಯರು ಆಗ್ರಹಿಸಿದ್ದಾರೆ. 


ಉರುಳಿಬಿದ್ದ ಭಾರಿ ಗಾತ್ರದ ಮರ : ಶೌಚಾಲಯ ಜಖಂ



ಸೊರಬ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಜೊತೆ ಭೀಕರ ಗಾಳಿ ಬೀಸುತ್ತಿದ್ದು ಅನೇಕ ಕಡೆ ಮರಗಳು ಬಿದ್ದು ಮನೆ, ವಿದ್ಯುತ್ ಕಂಬಗಳು ಹಾನಿಗೊಳ್ಳುತ್ತಿವೆ. ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಭಾನುವಾರ ಬೃಹತ್ ಗಾತ್ರದ ಮರ ಧರೆಗುರುಳಿದ್ದು ಶೌಚಾಲಯ ಜಖಂಗೊಂಡಿದೆ. ಗ್ರಾಮದ ಹುಚ್ಚಪ್ಪ ಎಂಬುವವರ ಮನೆ ಹಿಂಬದಿ ಇದ್ದ ಮರ ಬಿದ್ದು ಕಟ್ಟಿಗೆಮನೆ, ಶೌಚಾಲಯ ಒಳಗೊಂಡಂತೆ ಭಾರಿ ಹಾನಿಯಾಗಿದ್ದು ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.

Fear of lake rising and collapsing, toilet damaged by falling tree

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close