ad

ಸಿಗಂದೂರು ಮತ್ತು ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಕುಸಿತ-Tourist numbers drop in Sigandur and Jog

 SUDDILIVE || SHIVAMOGGA

ಸಿಗಂದೂರು ಮತ್ತು ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಕುಸಿತ-Tourist numbers drop in Sigandur and Jog

Siganduru, joga


ಕಳೆದ ವಾರ ಸಿಗಂದೂರು ಮತ್ತು ಜೋಗಕ್ಕೆ ಪ್ರವಾಸಿಗರ ಸಾಗರವೇ ಹರಿದು ಬಂದಿತ್ತು. ಸೇತುವೆ ಉದ್ಘಾಟನೆಯ ಹಿನ್ನಲೆಯಲ್ಲಿ ಕಳೆದ ಭಾನುವಾರ ಪ್ರವಾಸಿಗರು  ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಆದರೆ ಈ ಭಾನುವಾರ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತವಾಗಿದೆ. 

ಸಿಗಂದೂರು ಸೇತುವೆ ಉದ್ಘಾಟನೆಗೊಂಡು ಐದು ದಿನ ಕಳೆದಿತ್ತು. ಸೇತುವೆ ಪ್ರವಾಸಿಗರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಪರಿಣಾಮ ಸಿಗಂದೂರಿನಲ್ಲಿ ಪ್ರವಾಸಿಗರು ಕಾರು, ಟಿಟಿ, ಬಸ್ ಗಳಲ್ಲಿ ಹರಿದು ಬಂದಿದ್ದರು. ಆದರೆ ಈ ಬಾರಿ ಈ ಸಂಖ್ಯೆ ಅರ್ಧಕ್ಕೆ ಅರ್ಧ ಕುಸಿತವಾಗಿದೆ. ಅದರಂತೆ ಜೋಗದಲ್ಲಿಯೂ ಈ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಶ್ರಾವಣದಲ್ಲಿ ಈ ಕುಸಿತ ಅಚ್ಚರಿ ಮೂಡಿಸಿದೆ. 

ಕಳೆದ ಭಾನುವಾರ ಜೋಗದಲ್ಲಿ 14 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದರು. ಇದಕ್ಕೂ ಸಿಗಂದೂರು ಸೇತುವೆಯೇ ಮುಖ್ಯ ಕಾರಣವಾಗಿತ್ತು. ಈ ಭಾನುವಾರ ಅದರ ಅರ್ಧದಷ್ಟು ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಕಳೆದ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರು ಜಲಪಾತದ ವೀಕ್ಷಣೆಗೆ ಪರದಾಡುವಂತಾಗಿತ್ತು. 

ಈದಿನ ಸಲೀಸಾಗಿದೆ. ಜಲಪಾತದ ವೀಕ್ಷಣೆಗೆ ಪ್ರಕೃತಿ ಅನುವು ಮಾಡಿಕೊಟ್ಟ ಪರಿಣಾಮ ಹೆಚ್ಚುಹೊತ್ತು ಪ್ರವಾಸಿಗರು ಉಳಿಯುವಂತಾಗಿದೆ. ಜೋಗದಲ್ಲಿ ಆ.15 ರ ವರೆಗೆ ಪ್ರವಾಸಿಗರ ಸಂಖ್ಯೆ ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದರೆ. ಮಳೆ ಕಡಿಮೆಯಾದಂತೆ ಜೋಗದ ಕಡೆ ಪ್ರವಾಸಿಗರು ಬರುವುದು ಕಡಿಯಾಗುತ್ತಾ ಬರುತ್ತದೆ. 

ಇಂದು ಪ್ರವಾಸಿಗರು ಜೋಗವನ್ನ ಕಣ್ಣತುಂಬಿಸಿಕೊಂಡಿದ್ದಾರೆ. ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತದ ವೀಕ್ಷಣೆ ಪ್ರವಾಸಿಗರ ಮನಸೂರೆಗೈದಿದೆ.‌

Tourist numbers drop in Sigandur and Jog

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close