SUDDILIVE || SHIVAMOGGA
ಓಟಿ ರಸ್ತೆಯಲ್ಲಿರುವ ಹೋಂ ಅಪ್ಲೈನ್ಸಸ್ ನಲ್ಲಿ ಕಾಣಿಸಿಕೊಂಡ ಬೆಂಕಿ ಲಕ್ಷಾಂತರ ರೂ ಹಾನಿ-Fire at home appliances on OT Road causes damage worth lakhs of rupees
ಓಟಿ ರಸ್ತೆಯ ಪಲ್ಲವಿ ಹೋಟೆಲ್ ಬಳಿಯಿರುವ ಮಜ್ಜಿಶ ಕಾಂಪ್ಲೆಕ್ಸ್ ನಲ್ಲಿರುವ ಗೃಹ ಉಪಯೋಗಿ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಮಜ್ಜಿಶ ಕಾಂಪ್ಲೆಕ್ಸ್ ನಲ್ಲಿ ಇಂದು ಬೆಳಿಗ್ಗೆ ಸುಮಾರು 9-30 ಕ್ಕೆ ಹೋಮ್ ಅಪ್ಲೈನ್ಸ್ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಿಕ್ಸಿ, ಗ್ಯಾಸ್ ಪೈಪ್ ಗಳು, ಗ್ಯಾಸ್ ಲೈಟರ್ಸ್ ಗಳು, ಫ್ಯಾನ್ ಗಳು ಸೇರಿ ಇನ್ನಿತರ ಗೃಹ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಅಂಗಡಿ ಮತ್ತು ವಸ್ತುಗಳು ಸೇರಿ 5 ಲಕ್ಷ ರೂ. ನಷ್ಟವಾಗಿರುವುದು ತಿಳಿದು ಬಂದಿದೆ. ಬೆಂಕಿ ನಂದಿಸಲು ಡಿಎಫ್ ಒ ಅಶೋಕ ಕುಮಾರ್, AFSTO ಮುಕುದಂ ಹುಸೇನ್, ಸುನೀಲ್ ಹೆಚ್, ಸತೀಶ್, ಗಣೇಶ್, ನಿಹಾರ್, ಸಾಗರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Fire at home appliances on OT Road causes damage worth lakhs of rupees