ad

ಮಾಣಿ ಜಲಾಶಯದ ಮೊದಲ ನೋಟೀಸ್ ಜಾರಿ-First notice issued for Mani reservoir

SUDDILIVE || SHIVAMOGGA

ಮಾಣಿ ಜಲಾಶಯದ ಮೊದಲ ನೋಟೀಸ್ ಜಾರಿ-First notice issued for Mani reservoir

Maani, dam


ಮಾಣಿ ಜಲಾಶಯದಿಂದ ಮೊದಲ ಮುನ್ಸೂಚನೆ ಹೊರಬಿದ್ದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಣಿ ಜಲಾಶಯದ ಮೊದಲ ನೋಟೀಸ್ ಜಾರಿಗೊಳಿಸಲಾಗಿದೆ. 

ಮಾಣಿ ಜಲಾಶಯ ಮಟ್ಟ 590 ಮೀಟರ್ ತಲುಪಿದ ತಕ್ಷಣ ನೀರು ಹೊರ ಬಿಡಲಾಗುತ್ತದೆ. ಆದ್ದರಿಂದ ವರಾಹಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಪ್ರವಾಸಿಗರು ನದಿಗೆ ಇಳಿಯಬಾರದು ಎಂದು ಕರ್ನಾಟಕ ವಿದ್ಯುತ್‌ ನಿಗಮದಿಂದ ಎಚ್ಚರಿಕೆ ನೀಡಿದೆ. ಮಾಣಿ ಜಲಾಶಯದ ಗರಿಷ್ಠ ಮಟ್ಟ 594.36ಮೀ ಇದ್ದು 588.26 ಮೀಟರ್ ನಷ್ಟು ಜಲಾಶಯದ ನೀರಿನ ಮಟ್ಟ ತಲುಪಿದೆ. 

5087 ಸಾವಿರ ಕ್ಯೂಸೆಕ್‌ ಒಳ ಹರಿವು ಜಲಾಶಯಕ್ಕೆ ಸದ್ಯಕ್ಕೆ ಹರಿದು ಬರುತ್ತಿದೆ. ಇದೇ ರೀತಿ ಒಳ ಹರಿವು ಮುಂದುವರೆದರೆ ಜಲಾಶಯದ ನೀರಿನ ಮಟ್ಟ ಶೀಘ್ರ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಂದರ್ಭ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡುವ ಸಾಧ್ಯತೆಯಿದೆ ಎಂದು ಕೆಪಿಸಿಯ ಕಾರ್ಯನಿರ್ವಾಹಕ ಇಂಜಿನಿಯರ್‌ ನಿಂದ ಮನವಿ ಮಾಡಲಾಗಿದೆ.

ಮೂರು ವರ್ಷದ ಬಳಿಕ ಮಾಣಿ ಜಲಾಶಯ ಭರ್ತಿಯಾಗುತ್ತಿದೆ. ಇದುವರೆಗೂ 4 ರಿಂದ 5 ಬಾರಿ ಮಾತ್ರ ತುಂಬಿತ್ತು. 1994, 2006, 2007, 2018 ರಲ್ಲಿ ತುಂಬಿದ್ದ ಜಲಾಶಯ 2022 ರಲ್ಲಿ 590 ಅಡಿ  ಜಲಾಶಯದ ನೀರಿನ ಮಟ್ಟ ತಲುಪಿತ್ತು. 

First notice issued for Mani reservoir

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close