ad

ಲಿಂಗನಮಕ್ಕಿ ಜಲಾಶಯದ ಎರನೇ ನೋಟೀಸ್ ಜಾರಿ-Eighth notice issued for Linganamakki reservoir

SUDDILIVE || SHIVAMOGGA

ಲಿಂಗನಮಕ್ಕಿ ಜಲಾಶಯದ ಎರನೇ ನೋಟೀಸ್ ಜಾರಿ-Eighth notice issued for Linganamakki reservoir

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ  ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು-ಕೆಪಿಸಿ ವತಿಯಿಂದ ಎರಡನೇ ಮುನ್ಸೂಚನೆ ಜಾರಿ ಮಾಡಲಾಗಿದೆ. 

ಲಿಂಗನಮಕ್ಕಿ ಜಲಾಶಯ ಮಟ್ಟ 1816 ಅಡಿ ತಲುಪಿದ ತಕ್ಷಣ ನೀರು ಹೊರ ಬಿಡಲಾಗುತ್ತದೆ. ಆದ್ದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಪ್ರವಾಸಿಗರು ನದಿಗೆ ಇಳಿಯಬಾರದು ಎಂದು ಕರ್ನಾಟಕ ವಿದ್ಯುತ್‌ ನಿಗಮದಿಂದ ಎಚ್ಚರಿಕೆ ನೀಡಿದೆ. 

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. 18೦7 ಅಡಿಗೆ ತಲುಪಿದ ಜಲಾಶಯದ ನೀರಿನ ಮಟ್ಟ ತಲುಪಿದೆ. ಜಲಾಶಯಕ್ಕೆ 52 ಸಾವಿರ ಕ್ಯೂಸೆಕ್‌ ಒಳ ಹರಿವಿದೆ. ಪ್ರತಿ ದಿನ ಎರಡು ಟಿಎಂಸಿ ನೀರು ಒಳಹರಿವಿದೆ. 

ಇದೇ ರೀತಿ ಒಳ ಹರಿವು ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಶೀಘ್ರ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಂದರ್ಭ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡುವ ಸಾಧ್ಯತೆಯಿದೆ. ಕೆಪಿಸಿಯ ಕಾರ್ಯನಿರ್ವಾಹಕ ಇಂಜಿನಿಯರ್‌ ನಿಂದ ಮನವಿ ಮಾಡಿದ್ದಾರೆ. 

Eighth notice issued for Linganamakki reservoir

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close