SUDDILIVE || SHIVAMOGGA
ಅರಣ್ಯ ಸಚಿವರಿಗೆ ಗ್ರಾಮೀಣ ಪರಿಕಲ್ಪನೆನೇ ಇಲ್ಲ-ಆರಗ ವಾಗ್ದಾಳಿ-Forest Minister has no concept of rural life - Araga attacks
ಅತಿ ಹೆಚ್ಚು ಗೊಬ್ಬರ ತಯಾರಿಕಾಘಟಕ ಗೋವಿನಕೊಟ್ಟಿಗೆ ಎಂಬುದನ್ನ ಸಚಿವ ಈಶ್ವರ ಖಂಡ್ರೆ ಮರೆತಂತಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿ, ಕಾಡಿಗೆ ಹೋಗುವುದನ್ನ ನಿಷೆಧಿಸಿರುವ ಸಚಿವ ಈಶ್ವರ ಖಂಡ್ರೆ ಆದೇಶವನ್ನ ಹಿಂಪಡೆಯಬೇಕು. ಮಲೆನಾಡಿನಲ್ಲಿ ಜಾನುವಾರುಗಳನ್ನ ಹೊರಗೆ ಬಿಟ್ಟರೆ ಕಾಡಿಗೆ ಹೋಗೋದು ಅವು. ಗ್ರಾಮೀಣ ಪ್ರದೇಶದ ಪರಿಕಲ್ಪನೆ ಸಚಿವರಿಗೆ ಇದ್ದಂತಿಲ್ಲ. ಈ ಆದೇಶ ಕೂಲಿ ಕಾರ್ಮಿಕರ ಮೇಲೆ ಮತ್ತು ರೈತರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಎನ್ ಆರ್ ಪುರದಲ್ಲಿ ಆನೆ ತುಳಿದು ಸಾವಾಗಿದೆ. ಹಾಗಾದರೆ ನಿಮ್ಮ ಆನೆಯನ್ನ ಕಾಡಲ್ಲೇ ಇಟ್ಟುಕೊಳ್ಳಿ ಎಂದು ಹೇಳಿದರೆ ಹೇಗಿರುತ್ತೆ. ನಿಮ್ಮ ಕಾಡು ಪ್ರಾಣಿಗಳನ್ನ ಕಾಡಿನಲ್ಲಿಯೇ ಇಟ್ಟುಕೊಳ್ಳಿ ಎಂದರೆ ಹೇಗೆ? ಎಂಪಿಎಂ ಜಾಗವನ್ನ, ಡೀಮ್ಡ್ ಫಾರೆಸ್ಟ್ ನ್ನ ಬಿಟ್ಟುಕೊಡಿ, ಕಾಡೆಂದರೆ ಕೇವಲ ಕಾಡಿನ ಪ್ರಾಣಿಗಳು ಮಾತ್ರ ಇರಲ್ಲ. ಮನುಷ್ಯ ಮತ್ತು ಆತನ ಸಾಕು ಪ್ರಾಣಿಗಳು ಇರುತ್ತವೆ ಎಂಬುದನ್ನ ಮರೆಯಬಾರದು ಎಂದರು.
ಈಗ ಹೊರ ರಾಜ್ಯಗಳಿಂದ ಬರುವ ಹಸುಗಳನ್ನ ಬಿಡಲ್ಲ ಎಂದು ಸಚಿವ ಸ್ಪಷ್ಟನೆ ನೀಡುತ್ತಿದ್ದಾರೆ. ಡೀಮ್ಡ್ ಫಾರೆಸ್ಟ್ ನ್ನ ಕಾಡಿಗೆ ಸೇರಿಸಿಕೊಳ್ಳಲಾಗಿದೆ. ಹೊರರಾಜ್ಯಗಳನ್ನ ಬಿಡಲ್ಲ ಎಂಬುದನ್ನ ಮೊದಲು ಸ್ಪಷ್ಠೀಕರಣಕೊಟ್ಟಿಲ್ಲ ಕುರಿಗಳನ್ನ ಹೊಡೆದುಕೊಂಡು ಹೋಗುತ್ತಾರೆ. ಗದ್ದೆಗಳಲ್ಲಿ ಕುರಿಯಿರಲಿ ಎಂದು ದುಡ್ಡುಕೊಟ್ಟು ಇರಿಸಲಾಗುತ್ತದೆ.
ಅರಣ್ಯ ಅಧಿಕಾರಿಗಳು ಇಡೀ ಪ್ರದೇಶವನ್ನ ಕಾಡು ಮಾಡಿ ಎನ್ನುತ್ತಾರೆ. ಅವರ ಮಾತು ಕೇಳದೆ ಸಚಿವರು ಈ ಆದೇಶವನ್ನ ಹಿಂಪಡೆಯಬೇಕು. ಬಿಲ್ಡಿಂಗ್ ಕಟ್ಟಲು ಸೆಸ್ ಜಾರಿ ಮಾಡಲಾಗುತ್ತಿದೆ. ಯಾರ ಜೇಬಿಗೆ ಕೈಹಾಕಿದರು ಸಿದ್ದರಾಮಯ್ಯ ಸರ್ಕಾರಕ್ಕೆ ಸಾಕಾಗುತ್ತಿಲ್ಲ. ಮೊನ್ನೆ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಮೂಲಕ ನೋಟೀಸ್ ನೀಡಿ ಶಾಕ್ ಕೊಟ್ರು. ಮೈ ಮೇಲೆ ಬಂದ ಮೇಲೆ ಕೇಂದ್ರ ವಿರುದ್ಧ ಬೆರಳು ಮಾಡಿ ತೋರಿಸುತ್ತಾರೆ.
ಜನರ ಸುಲಿಗೆ ಆಗುತ್ತಿದೆ. ಇದನ್ನ ಸರಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರ ಪರಿಣಾಮ ಎದುರಿಸಲಿದೆ ಎಂದು ಎಚ್ಚರಿಸಿದರು.
Forest Minister has no concept of rural life - Araga attacks