SUDDILIVE || SHIVAMOGGA
ಈ ಸ್ಥಳದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿದ್ದಕ್ಕೆ ಹೆಮ್ಮೆಯಿದೆ-ಎಸ್ಪಿ ಮಿಥುನ್ ಕುಮಾರ್- Proud to inaugurate door-to-door police program at this location - SP Mithun Kumar
ರಾಮಣ್ಣ ಶ್ರೇಷ್ಠಿ ಪಾರ್ಕ್ ನ ದೇವಸ್ಥಾನದಿಂದ ಮನೆ ಮನೆಗೆ ಪೊಲೀಸ್ ಉದ್ಘಾಟಿಸಿದ್ದಕ್ಕೆ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿಕೆ ತಿಳಿಸಿದರು.
ಅವರು ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಮಹಾತ್ಮ ಗಾಂಧಿ, ಬಾಲಗಂಗಾಧರ ನಾಥ್ ತಿಲಕ್ ಬಂದು ಹೋಗ ಜಾಗ ಮತ್ತು ಇದನ್ನ ಬಿಡಿ ಜತ್ತಿ ಉದ್ಘಾಟಿಸಿದ ಐತಿಹಾಸಿಕ ಸ್ಥಳ ಇದಾಗಿದೆ ಹಾಗಾಗಿ ನಮ್ಮ ಕಾರ್ಯಕ್ರಮವನ್ನ ಉದ್ಘಾಟಿಸಲಾಗುತ್ತಿದೆ ಎಂದರು.
ಈಗಲೂ ಪೊಲೀಸರ ಬಗ್ಗೆ ಜನರಲ್ಲಿ ಭಯವಿದೆ. ಬ್ರಿಟಿಶ್ ಲೆಗಸಿಯ ಸೈಕಲಾಜಿಕಲ್ ಫಿಯರ್ ಇವತ್ತಿಗೂ ಇದೆ. ಇಲಾಖೆಯ ಜೊತೆ ಒಡನಾಟ ಇರುವವರಿಗೆ ಪೊಲೀಸರು ಸ್ಪಂಧಿಸಿರುವ ಬಗ್ಗೆ ಒಳ್ಳೆ ಅಭಿಪ್ರಾಯವಿದೆ.
ಸಿನಿಮಾ, ಧಾರವಾಹಿ, ಕಥೆಗಳನ್ನ ಓದಿಕೊಂಡು ಇರುವವರಿಗೆ ಪೊಲೀಸರ ಬಗ್ಗೆ ಋಣಾತ್ಮಕ ನಂಬಿಕೆಯಿದೆ. ಮನೆ ಮಬೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳನ್ನ ನೇಮಿಸಲಾಗಿರುತ್ತದೆ. ಮೊಹಲ್ಲಾಗೆ ಸಿಬ್ಬಂದಿಯು ಭೇಟಿ ಮಾಡಿ ಸಭೆ ನಡೆಸಲಿದ್ದಾರೆ. ಮೈಕ್ರೋ ಲೆವೆಲ್ ಗೆ ನಾವು ಹೋಗುತ್ತಿದ್ದೇವೆ ಅಕ್ಕಪಕ್ಕ ಜಗಳ, ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ಮಾದಕ ವಸ್ತು ಸೇವನೆ, ಬೇರೆ ರೀತಿ ಕಾನೂನು ಅರಿವು ಮೂಡಿಸುವ ಬಗ್ಗೆ ಈ ಸಿಬ್ಬಂದಿ ಪ್ರಯತ್ನಿಸಲಿದ್ದಾರೆ ಎಂದರು.
ಇದರಿಂದ ಜನಸ್ನೇಹಿ ಪೊಲೀಸ್ ಆಗಲಿದೆ. ಘಟನೆಯನ್ನ ತಡೆಯಲು ಈ ಮನೆ ಮನೆಗೆ ಪೊಲೀಸ್ ಕಳೆದ 10-2 ದಿನದಿಂದ ನಡೆಯುತ್ತಿದೆ. ಸಮಸ್ಯೆಗಳನ್ನ ತಿಳಿಸಿ. 100% ಪರಿಹಾರ ನೀಡಲು ಸಾಧ್ಯವಾಗುತ್ತಾ ಎಂಬುದು ಬೇರೆ ಪ್ರಶ್ನೆ ಆದರೆ ನಾಗರೀಕರು ಮತ್ತು ಪೊಲೀಸರ ನಡುವೆ ಒಳ್ಳೆಯ ಸಂಬಂಧ ಬೆಳೆಯುತ್ತದೆ ಎಂದರು.
Proud to inaugurate door-to-door police program at this location - SP Mithun Kumar