SUDDILIVE || SHIVAMOGGA
ಗ್ಯಾಸ್ ಸಿಲಿಂಡರ್ ಸ್ಪೋಟ ಮೂರು ಗಾಯ-Gas cylinder explosion injured three
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂವರು ಗಾಯಗೊಂಡಿದ್ದಾರೆ. ಸ್ಪೋಟದ ಶಬ್ದಕ್ಕೆ ನೆರೆಹೊರೆಯ ನಿವಾಸಿಗಳು ಅಂತಕಕ್ಕೀಡಾಗಿದ್ದಾರೆ.
ಶಿವಮೊಗ್ಗದ ಶರಾವತಿ ನಗರದ 1ನೇ ಅಡ್ಡರಸ್ತೆಯ ಸುನ್ನಿ ಮಾಸ್ಜಿದ್ ಏ ಶೆಹ್‌ಜಾದಿ ಅಸ್ಗರ್ ಮಸೀದಿ ಪಕ್ಕದ ಓಣಿಯಲ್ಲಿದ್ದ ಪೀರಾನ್ ಸಾಬ್ ಎಂಬುವವರ ಮನೆಯಲ್ಲಿ ಇಂದು ಸಂಜೆ ಸಿಲಿಂಡರ್ ಸ್ಪೋಟಗೊಂಡಿದೆ.
ಮನೆಯಲ್ಲಿದ್ದ ಎಂ.ಬಿ.ಪೀರಾನ್ ಸಾಬ್(48), ಅವರ ಪತ್ನಿ ಸಾಹೇರಾ(40), ಸೊಸೆ ಜಯೇಬಾ(22) ಗಾಯಗೊಂಡಿದ್ದಾರೆ. ಕೂಡಲೆ ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮನೆಯ ಛಾವಣಿ ಹಾರಿ ಹೋಗಿದೆ. ಒಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ. ಪೀರ್ ಸಾಹೇಬ್ ಅವರಿಗೆ ಮಣಿಪಾಲ್ ಗೆ ಸಾಗಿಸುವ ಸಾಧ್ಯತೆಯಿದೆ.
ಮನೆಯ ಮುಂದೆ ಕುಳಿತಿದ್ದಾಗ ಸಡನ್ ಆಗಿ ಬೆಂಕಿ ಬಂದಿರುವುದಾಗಿ ಗಾಯಾಳುಗಳು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. ಪೀರ್ ಸಾಬ್ ಅವರ ಮೈ ಎಲ್ಲಾ ಗಾಯಗಳಾಗಿವೆ.
ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Gas cylinder explosion injured three