SUDDILIVE || SHIVAMOGGA
ಪ್ರೀಪೇಯ್ಡ್ ಆಟೋಗೆ ಮುಹೂರ್ತ ಫಿಕ್ಸ್- Muhurat fix for prepaid auto
ಶಿವಮೊಗ್ಗದಲ್ಲಿ ಮತ್ತೆ ಪ್ರೀಪೇಯ್ಡ್ ಆಟೋ ಚಾಲನೆ ವಿಷಯ ಮುಂಚೂಣಿಗೆ ಬಂದಿದೆ. ಆ.1 ರಿಂದ ರೈಲ್ವೆ ನಿಲ್ದಾಣದಲ್ಲಿ ಆಟೋ ಪ್ರೀಪೇಯ್ಡ್ ಗೆ ಚಾಲನೆ ದೊರಕುವ ನಿರೀಕ್ಷೆಯಿದೆ.
ನಿನ್ನೆ ಡಿಸಿ ಗುರುದತ್ತ ಹೆಗಡೆರವರ ಅಧ್ಯಕ್ಷತೆಯಲ್ಲಿ ರೈಲ್ವೇ ನಿಲ್ದಾಣದಿಂದ ಪ್ರೀಪೇಯ್ಡ್ ಆಟೋ ಕೌಂಟರ್ ತೆರೆಯುವ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆಟೋ ಚಾಲಕರುಗಳ ಜೊತೆಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೆಲ ನಿರ್ಣಯಕ್ಕೂ ಬರಲಾಗಿದೆ.
ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆ.1 ರಿಂದ ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋಗೆ ಚಾಲನೆ ನೀಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಯಶಸ್ವಿಯಾದರೆ ಮಾತ್ರ ಬಸ್ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋಗೆ ಚಾಲನೆಗೆ ಸಿದ್ದಪಡಿಸಿಕೊಳ್ಳಲಾಗುವುದು ಎಂದಿದ್ದಾರೆ.
ಈ ಹಿಂದೆಯೂ ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಚಾಲನೆ ಮಾಡಲಾಗಿತ್ತು. ಆದರೆ ಇದು ಯಶಸ್ವಿ ತಂದಿರಲಿಲ್ಲ. ಈಗ ಹಲವು ಬದಲಾವಣೆಗಳೊಂದಿಗೆ ಪ್ರೀಪೇಯ್ಡ್ ಆಟೋ ಚಾಲನೆಗೆ ತರಲಾಗುತ್ತಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೆಂಗಳೂರಿನಲ್ಲಿ ಆಟೋಗಳಿಗೆ ಕಾಯುವ ರೀತಿಯಲ್ಲಿ ಕಾಯುವ ಪದ್ದತಿಯಿಲ್ಲ. ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಯಾವ ವಾಹನ ಸಿಗುತ್ತದೆಯೋ ಆ ವಾಹನ ಹತ್ತಿಕೊಂಡು ಹೋಗ್ತಾಯಿರ್ತಾರೆ.
ಹಾಗಾಗಿ KSRTC ಬಸ್ ಗಳನ್ನ ರೈಲು ಬರುವ ವೇಳೆಯಲ್ಲಿ ಮುಂಚಿತವಾಗಿ ನಿಲ್ಲಿಸಿಕೊಂಡರೆ ಬಸ್ ಗಳು ಉಪಯೋಗಕ್ಕೆ ಬರ್ತವೆ ಎಂಬ ಅಭಿಪ್ರಾಯವೂ ಇದೆ. ಕಾದು ನೋಡೋಣ ಏಳೆಂಟು ವರ್ಷದ ಹಿಂದೆ ಆಗದ ಪ್ರಯತ್ನ ಈಗ ಯಾಕೆ ಫಲಕೊಡಬಾರದು? ಎಂದು.
Muhurat fix for prepaid auto