ad

ಮೆಗ್ಗಾನ್ ಹಿಂಬದಿಯ ಬೃಹತ್ ಮರಗಳು ಧರೆಗೆ- The huge trees behind Meggan fell to the ground

 SUDDILIVE || SHIVAMOGGA

ಮೆಗ್ಗಾನ್ ಹಿಂಬದಿಯ ಬೃಹತ್ ಮರಗಳು ಧರೆಗೆ-The huge trees behind Meggan fell to the ground.

Meggan, tree


ಮೆಗ್ಗಾನ್ ಹಿಂಬದಿಯ ಸಿಮ್ಸ್ ಮುಂಭಾಗದಲ್ಲಿರುವ ಬೃಹತ್ ಮರಗಳನ್ನ ಧರೆಗುರುಳಿಸಲಾಗಿದೆ. ಒಂದು ವಾರದ ಹಿಂದಷ್ಟೆ ಸಿಮ್ಸ್ ಮುಂಭಾಗದ ಮರಗಳನ್ನ ಧರೆಗುರುಳಿಸಲಾಗಿತ್ತು. ಇಂದು ಮೆಗ್ಗಾನ್ ಹಿಂಬದಿಯಲ್ಲಿರುವ ಬೃಹತ್ ಮರಗಳನ್ನ ಧರೆಗುರುಳಿಸಲಾಗಿದೆ. 

ಈ ಹಿಂದೆ ವಾಹನ ಸವಾರರ ಮೇಲೆ ಮರದ ಕೊಂಬೆಗಳು ಬಿದ್ದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಮರಗಳನ್ನೇ ಧರೆಗುರುಳಿಸುತ್ತಿರುವ ತೀರ್ಮಾನಕ್ಕೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ವಾಹನ ಸವಾರರಿಗೆ ರಸ್ತೆಗಳಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದಾಗ ಯಾವ ಇಲಾಖೆಗಳು ಮುಂದೆ ಬಾರದೆ ಇದ್ದ ಈದಿನಗಳಲ್ಲಿ ಮರಗಳನ್ನ ಧಾರಶಾಹಿಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ. 


ಈ ಹಿಂದೆ ಸಿಗ್ನಲ್ ಗಳಲ್ಲಿರುವ ಮರಗಳನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಸರ ವಾದಿಗಳು ಪ್ರತಿಭಟನೆಯನ್ನ ನಡೆಸಿದ್ದವು. ಈಗ ಪರಿಸರ ವಾದಿಗಳ ದಿವ್ಯ ಮೌನವೂ ಅಚ್ಚರಿ ಉಂಟು ಮಾಡಿದೆ. ಈ ಹಿಂದೆ ಮರಗಳ ಕೊಂಬೆಗಳು ಬೃಹದಾಕಾರವಾಗಿ ಬೆಳೆದರೆ ಟ್ರಮ್ ಮಾಡಲಾಗುತ್ತಿತ್ತು. ಈಗ ಮರದ ಬುಡಕ್ಕೆ ಕೊಡಲಿಪೆಟ್ಟು ಹಾಕಲಾಗುತ್ತಿದೆ. 

The huge trees behind Megan fell to the ground.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close