SUDDILIVE || SHIVAMOGGA
ಮರ್ಡರ್ ಮಾಡಿದ ಆರೋಪಿ ಬಂಧನ-Murder accused arrest
ಮೇಲಿನ ತುಂಗ ನಗರದಲ್ಲಿ ಬೆಳ್ಳೆಂಬೆಳಿಗ್ಗೆ ಮರ್ಡರ್ ಮಾಡಿದ್ದ ಆರೋಪಿ ಕೊನೆಗೂ ಪತ್ತೆಯಾಗಿದ್ದಾನೆ. ರಾತ್ರಿ ತಮ್ಮನೊಂದಿಗೆ ಇದ್ದ ಅಣ್ಣ ಮಣಿಕಂಠ ಮನೆಯಲ್ಲೇ ಹೆಣವಾಗಿ ಬಿದ್ದಿದ್ದ. ತಮ್ಮ ಸಂತೋಷ ಘಟನೆಯ ನಂತರ ಪರಾರಿಯಾಗಿದ್ದ.
ಈ ಪ್ರಕರಣವನ್ನ ತುಂಗ ನಗರ ಪೊಲೀಸ್ ಠಾಣೆ ಪಿಐ ಗುರುರಾಜ್ ನೇತೃತ್ವದ ತಂಡ ಬೇಧಿಸಿ ಆರೋಪಿಯನ್ನ ಪತ್ತೆಹಚ್ಚಿದೆ. ಆರೋಪಿಯನ್ನ ಘಟನೆ ನಡೆದು 24 ಗಂಟೆಯಲ್ಲೇ ಪತ್ತೆಹಚ್ಚಿರುವ ಪೊಲೀಸರು ಮೃತನಾದ ಮಣಿಕಂಠನ ಸಹೋದರ ಸಂತೋಷನನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ.
ಮನೆಯ ವಿಚಾರದಲ್ಲಿ ಸಹೋದರರಿಬ್ಬರ ನಡುವೆ ವ್ಯಾಜ್ಯ ನಡೆದಿದೆ. ಮೊದಲೇ ಸರ್ಕಾರಿ ಜಾಗದಲ್ಲಿದ್ದ ಮೃತ ಮಣಿಕಂಠ ಮತ್ತು ಆತನ ಸಹೋದರರು ಈ ಜಾಗಕ್ಕೆ ಕಿತ್ತಾಡಿಕೊಂಡು ಹೆಣವಾಗಿದ್ದಾರೆ. ಅನ್ಯಾಯವಾಗಿ ಮಣಿಕಂಠ ಹತನಾಗಿದ್ದಾನೆ. ಸಹೋದರನನ್ನ ಬಂಧಿಸಿರುವ ಪೊಲೀಸರು ಮುಂದಿನಪ್ರಕ್ರಿಯೆ ನಡೆಸಿದ್ದಾರೆ. ಮೊದಲು ಗುದ್ದಲಿಯಿಂದ ಹತ್ಯೆ ಮಾಡಿದ್ದ ಸಂತೋಷ ನಂತರ ಸೈಜುಕಲ್ಲನ್ನ ಎತ್ತುಹಾಕಿ ಪರಾರಿಯಾಗಿದ್ದ.
Murder accused arrest