SUDDILIVE || SHIVAMOGGA
ರಸಗೊಬ್ಬರವನ್ನ ಕಾಂಗ್ರೆಸ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ-ಬಿಜೆಪಿ ರೈತ ಮೋರ್ಚ ಆರೋಪ-Congress is selling fertilizer in black market - BJP Raitha Morcha alleges
ರಸಗೊಬ್ಬರವನ್ನ ಕಾಂಗ್ರೆಸ್ ಸರ್ಕಾರ ಕಾಳಸಂತೆಗೆ ಮಾರಾಟ ಮಾಡುತ್ತಿದೆಯಾ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಸಿದ್ದಲಿಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯಾದ್ಯಂತ ರಸಗೊಬ್ಬರದ ಅಭಾವವಿದೆ ಈ ನಿಟ್ಟಿನಲ್ಲಿ ಕೆಲ ಜಿಲ್ಲೆಗಳಲ್ಲಿ ಲಾಠಿ ಪ್ರಹಾರ ನಡೆದಿದೆ. ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ಅವಶ್ಯಕತೆಯಿದೆ. 8.73 ಮೆಟ್ರಿಕ್ ಟನ್ ರಸಗೊಬ್ಬರವಿದೆ ಎನ್ನುವ ರಾಜ್ಯ ಸರ್ಕಾರ ಬಫರ್ ಸ್ಟಾಕ್ ಇದೆ ಎನ್ನುತ್ತಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಒಬ್ಬೊಬ್ಬ ಸಚಿವರು ಒಂದೊಂದು ಹೇಳುತ್ತಾರೆ. ರೈತರ ಸಮಸ್ಯೆ ಬಗ್ಗೆ ಇವರಿಗೆ ನಿಖರ ನಾಹಿತಿ ಇಲ್ಲವಾಗಿದೆ ಎಂದು ದೂರಿದ ಅವರು, ಕಳೆದ ಎರಡು ವರ್ಷದ ಅವಧಿಯಲ್ಲಿ ರೈತ ವಿಧ್ಯಾನಿಧಿ ನಿಲ್ಲಿಸಿದೆ. ಕಿಸಾನ್ ಸಮ್ಮಾನ್ ನಿಧಿ ಸ್ಥಗಿತಗೊಂಡಿದೆ. ಕಾಂಗ್ರೆದ್ ಸರ್ಜಾರದಲ್ಲಿ ರೈತರು ಟ್ರಾನ್ಸ್ ಫಾರ್ಮರ್ ಗೆ 20 ಸಾವಿರ ಖರ್ಚು ಆಗುತ್ತಿದ್ದ ಜಾಗದಲ್ಲಿ 3 ಲಕ್ಷ ರೂ. ವೆಚ್ಚ ಮಾಡಬೇಕಿದೆ ಎಂದು ದೂರಿದರು.
ಬಿತ್ತಬೆ ಬೀಜದಲ್ಲಿ ಪ್ರತಿ ಕ್ವಿಂಟಾಲ್ ಗೆ 20% ರಷ್ಟು ಏರಿಕೆ. ಕೇಂದ್ರ ಬರಪರಿಹಾರವಾಗಿ ಬಂದ 3454 ಕೋಟಿಯ ಹಣ ಲೂಟಿ ಹೊಡೆಯಲಾಗಿದೆ. ಎರಡು ವರ್ಷದ ಅವಧಿಯಲ್ಲಿ 3400 ಜನ ರೈತರ ಆತ್ಮಹತ್ಯೆಯಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನ ನಿಲ್ಲಿಸಲಾಗಿದೆ ಎಂದು ದೂರಿದರು.
ಹಾಲಿನಿ ಪ್ರೋತ್ಸಾಹ ಧನ ಸ್ಥಗಿತ, ರಸಗೊಬ್ಬರ ಖರೀದಿಗೆ ಮುಂದಾದ ರೈತರ ಮೇಲೆ ಲಾಠಿ ಚಾರ್ಜ್, ಕೃಷಿ ಇಲಾಖೆ ಮತ್ತು ಸಚಿವಾಲಯ ಸ್ಥಗಿತವಾಗಿದೆ. ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಕರೆ ನೀಡಿದಂತೆ ಜಿಲ್ಲೆಯಾದ್ಯಂತ ಪ್ರತಿಭಟಿಸಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಿಲ್ಲವೆಂದು ತಿಳಿದು ಬಂದಿದೆ ಎಂದರು.
ಅತಿಶೀಘ್ರದಲ್ಲಿಯೇ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯದ ವಿರುದ್ಧ ಬಿಜೆಪಿ ಪ್ರತಿಭಟಿಸಲಾಗುವುದಾಗಿ ಎಚ್ಚರಿಸಿದರು.
congress is selling fertilizer in black market