ad

ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಮುತ್ತಿಗೆ ಯತ್ನ-ಮಾಜಿ ಸಚಿವ ಪೊಲೀಸರ ವಶಕ್ಕೆ

SUDDILIVE || SHIVAMOGGA

ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಮುತ್ತಿಗೆ ಯತ್ನ-ಮಾಜಿ ಸಚಿವ ಪೊಲೀಸರ ವಶಕ್ಕೆ-Office of the Chief Engineer of the Karnataka Irrigation Corporation

Protest, chief Engineer

ಭದ್ರಾ ಬಲದಂಡೆ ಒಡೆದು ಕುಡಿಯುವ ನೀರು ಪೂರೈಸುವ ಯೋಜನೆಯನ್ನ ಖಂಡಿಸಿ ಇಂದು ಮಾಜಿ ಸಚಿವ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ, ದಾವಣಗೆರೆ ಭಾಗದ ರೈತರಿಂದ ಕರ್ನಾಟಕ ನೀರಾವರಿ ಮುಖ್ಯ ಎಂಜಿನಿಯರ್ ಕಚೇರಿಯನ್ನ ಮುತ್ತಿಗೆ ಹಾಕಲಾಯಿತು. 

ಮುತ್ತಿಗೆ ಹಾಕಿದ ಮಾಜಿ ಸಚಿವ ರೇಣುಕಾಚಾರ್ಯರನ್ನ ಮತ್ತು ಇತರೆ ರೈತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ಕಚೇರಿ ಎದುರಿನ ಹೈಡ್ರಾಮಾಕ್ಕೆ ತೆರೆ ಬಿದ್ದಂತಾಗಿದೆ. 

ಜಲಜೀವನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಯನ್ನ ಭದ್ರ ಜಲಾಶಯದ ಪಕ್ಕದಲ್ಲಿಯೇ ಸೀಳಿ ನೀಡುತ್ತಿರುವುದನ್ನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. 

ಕಾಲುವೆ ಒಡೆಯುವ ಬದಲು ಜಾಕ್ ವೆಲ್ ಮೂಲಕ ನೀರು ಪೂರೈಸುವಂತೆ ರೈತರ ಆಗ್ರಹಿಸಿದರು. ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಮುತ್ತಿಗೆ ಹಾಕುವ ಯತ್ನ ಮಾಡಲಾಯಿತು. ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 


ನೂರಾರು ಸಂಖ್ಯೆಯ ರೈತರಿಂದ ಪ್ರತಿಭಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಿಹೆಚ್ ರಸ್ತೆಯ ಮೇಲೆಯೇ ರೈತರು ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ನಂತರವೂ ಪ್ರತಿಭಟನೆ ಮುಂದುವರೆದಿತ್ತು. ನಂತರ ಮಾಜಿ ಸಚಿವರನ್ನ ಮತ್ತು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಈ ವೇಳೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ತಾಯಿಯ ಎದೆಯನ್ನೇ ಸೀಳಿ ಜಲಾಶಯದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದರ ಬಗ್ಗೆ ನಮ್ಮ ವಿರೋಧವಿದೆ. ಸರಿಯಾಗಿ ಅಚ್ಚುಕಟ್ಟುದಾರರ ಕೊನೆಯ ಹಂತದ ರೈತನಿಗೆ ನೀರು ಸಿಗುತ್ತಿಲ್ಲ. ಇದರ ಮಧ್ಯೆ ಬಲದಂಡೆ ನಾಲೆಯ ಪಕ್ಕದಲೇ ಜಲಾಶಯವನ್ನ ಒಡೆದು ನೀರು ಲಿಫ್ಟ್ ಮಾಡಬಾರದು ಇದಕ್ಕೆ ನಮ್ಮ‌ವಿರೋಧವಿದೆ. ನೀರು ಹಂಚಿಕೆಗೆ ನಮ್ಮ‌ ವಿರೋಧವಲ್ಲ ಎಂದು ತಿಳಿಸಿದರು.

Office of the Chief Engineer of the Karnataka Irrigation Corporation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close