SUDDILIVE || SHIVAMOGGA
ಬಂಗಾರಪ್ಪ ಬಡಾವಣೆ ದುಷ್ಕೃತ್ಯಕ್ಕೆ ಎಸ್ ಡಿಪಿಐ ಖಂಡನೆ-SDPI condemns Bangarappa Layout misdeeds
ಜು. 6 ರಂದು ನಗರದ ಬಂಗಾರಪ್ಪ ಬಡಾವಣೆಯಲ್ಲಿ ನಡೆದ ದುಷ್ಕೃತ್ಯಕ್ಕೆ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಖಂಡಿಸುತ್ತದೆ.
ಈ ದುಷ್ಕೃತ್ಯ ನಡೆಸಿದವರಿಗೆ ಈಗಾಗಲೇ ಪೊಲೀಸ್ ಇಲಾಖೆ ಬಂಧಿಸಿ ಕಾನೂನು ಕಾರ್ಯಾಚರಣೆ ಮುಂದುವರಿದಿದೆ. ಆದರೆ ಈ ವಿಷಯದಲ್ಲಿ ಮಾಜಿ ಶಾಸಕ ಈಶ್ವರಪ್ಪ ಕೋಮು ದ್ವೇಷ ಹರಡಿಸುವ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿರುವುದು, ಇವರ ಜೊತೆಗೆ ಬಿಜೆಪಿ ಕೂಡ ಈ ಪ್ರಕರಣವನ್ನು ಕೋಮು ದ್ವೇಷಕ್ಕೆ ಬಳಸಿಕೊಂಡು ಮನೆಗಳನ್ನು ನೆಲಸಮ ಮಾಡುವ ಮಾತುಗಳನ್ನಾಡುತ್ತಿರುವ ಮತ್ತು ಇದಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಅವರಿಗೆ ಆಶ್ವಾಸನೆ ನೀಡುತ್ತಿರುವುದು ಖಂಡನೀಯ ಎಂದು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷ ಜಿಲಾನ್ ಖಾನ್ ಆಗ್ರಹಿಸಿದ್ದಾರೆ.
ದುಷ್ಕೃತ್ಯ ಮಾಡಿದವರಿಗೆ ಕಾನೂನು ಪಾಠ ಕಲಿಸುತ್ತದೆ. ಆದರೆ ಇದರ ನೆಪದಲ್ಲಿ ಮನೆಗಳನ್ನು ನೆಲಸಮ ಮಾಡುವ ಬೇಡಿಕೆ ಎಷ್ಟು ಸರಿ?ಪೊಲೀಸ್ ಇಲಾಖೆ ಇಂತಹ ಪ್ರಚೋದನೆ, ಕೋಮು ದ್ವೇಷ ಹರಡಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ಆಯುಕ್ತರು ಸರ್ಕಾರದ ನೌಕರರಾಗಿಯೇ ಕೆಲಸ ನಿರ್ವಹಿಸಬೇಕಾಗಿದೆ.ಯಾವುದೇ ಒತ್ತಡಗಳಿಗೆ ಮಣಿದು ಮನೆಗಳ ಧ್ವಂಸ ಮಾಡುವುದು ಸರಿಯಲ್ಲ ಎಂದಿದ್ದಾರೆ.
SDPI condemns Bangarappa Layout misdeeds