SUDDILIVE || SHIVAMOGGA
ಬಿಹೆಚ್ ರಸ್ತೆಯಲ್ಲಿರುವ ಹೋಟೆಲ್ ವೊಂದರ ಮೇಲೆ ಪಿಐ ಹರೀಶ್ ಪಾಟೀಲ್ ದಾಳಿ!PI Harish Patil raid on a hotel on BH Road!
ಶಿವಮೊಗ್ಗದಲ್ಲಿ ಎಗ್ಗಿಲ್ಲದೆ ಯುವಕರು ಮತ್ತು ಅಪ್ರಾಪ್ತ ಬಾಲಕರು ದುಶ್ಚಟಕ್ಕೆ ಬೀಳುತ್ತಿದ್ದಾರೆ. ಪೊಲೀಸರು ದಾಳಿ ನಡೆಸಿದರೂ ಯಾವ ದಾಳಿಗೂ ಯುವಕರು ಮತ್ತು ಅಪ್ರಾಪ್ತರು ಹೆದರುತ್ತಿಲ್ಲವೆಂಬುದು ಅಷ್ಟೆ ಸತ್ಯವಾಗಿದೆ. ಮೀಸೆ ಚಿಗುರದ ಯುವಕರು ಸಿಗರೇಟ್ ಬೀಡಿ ಮತ್ತು ತಂಬಾಕು ಸೇವನೆಗೆ ಬಲಿಯಾಗುತ್ತಿದ್ದಾರೆ.
ಬಿ.ಹೆಚ್ ರಸ್ತೆಯ ಗಿರಿಯಾಸ್ ಅಂಗಡಿ ಬಳಿಯಿರುವ ಮೊಬೈಲ್ ಅಂಗಡಿಪಕ್ಕದ ಓಣಿಯಲ್ಲಿ ಹೋಟೆಲ್ ವೊಂದರಲ್ಲಿ ಬರುವ ಯುವಕರು ಮತ್ತು ಅಪ್ರಾಪ್ತರು ಸಿಗರೇಟ್ ಸೇವನೆಗೆ ಮುಗಿಬಿದ್ದಾರೆ. ಹೋಟೆಲ್ ಬೆಳಿಗೆ 6 ಗಂಟೆಗೆ ಓಪನ್ ಆಗುತ್ತೆ. ಬೆಳಿಗ್ಗೆ 8 ರಿಂದ 8-30 ಗೆ ಹುಡುಗರು ಬರ್ತಾರೆ. ಡೋಂಟ್ ಕೇರ್ ಎಂಬ ಲೆಕ್ಕಾಚಾರದಲ್ಲಿ ಈ ಯುವಕರ ದುಶ್ಚಟ ಸೇವನೆಯ ವರ್ತನೆಗಳು ಮುಂದುವರೆಯುತ್ತದೆ.
ಹೋಟೆಲ್ ಮೇಲೆ ಹೋಗುವ ಹುಡುಗರು ಸಿಗರೇಟನಲ್ಲಿರುವ ತಂಬಾಕನ್ನ ಬದಲಾಯಿಸುತ್ತಾರೆ ಎಂಬ ಆರೋಪ ಕೇಳಿ ಬಂದರೂ ಇದಕ್ಕೆ ದಾಖಲೆಗಳಿಲ್ಲ. ಆದರೆ ಸ್ಥಳೀಯರು ಈ ಮಾತನ್ನ ಗ್ಯಾರೆಂಟಿ ರೂಪದಲ್ಲಿ ಸವಾಲಿನ ರೂಪದಲ್ಲಿ ಹೇಳುತ್ತಾರೆ. ಆದರೆ ಪೊಲೀಸರು ಇದನ್ನ ಅಲ್ಲಗೆಳೆದಿದ್ದಾರೆ. ಟೀಕುಡಿಯಲು ಹೋದವರಿಗೂ ಈ ತಂಬಾಕು ಬದಲಾವಣೆ ಸ್ಥಳ ಯಾರಿಗೂ ಗೊತ್ತಾಗೊಲ್ಲ. ಸಿಗರೇಟಿನ ತೊಂಬಾಕು ತೆಗೆದು ಎಲೆ ತುಂಬಿಸಿಕೊಳ್ಳುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಂದು ಕೋಟೆ ಪೊಲೀಸರು ಒಂದೊಳ್ಳೆ ದಾಳಿ ನಡೆಸಿದ್ದಾರೆ. ಪಿಐ ಹರೀಶ್ ಪಟೇಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಯುವಕರನ್ನ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಫ್ಐಆರ್ ಆಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ರೈಡ್ ಹಿನ್ನಲೆಯಲ್ಲಿ ಹೋಟೆಲ್ ಬಂದ್ ಆಗಿದೆ.
PI Harish Patil raid on a hotel on BH Road!