SUDDILIVE || SHIVAMOGGA
ತರೀಕೆರೆ ಟು ಶಿವಮೊಗ್ಗ ಚೀಲಗಳಲ್ಲಿ ಪತ್ತೆಯಾಗಿದ್ದು ಏನು?Tarikere to SHIVAMOGGA sandalwood found in bags
ಹಳೇ ಮಂಡ್ಲಿ ಬಳಿ ಶ್ರೀಗಂಧ ಮರವನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದ ಗ್ಯಾಂಗ್ ನ್ನ ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿ 12 ಜನರನ್ನ ಬಂಧಿಸಿದ್ದಾರೆ. ಸಿದ್ದಿಕ್ ಪಾಶಾ, ಓತಿಘಟ್ಟದ ಮುದ್ದುರಾಜ್, ಹರೀಶ್, ಆನಂದ, ತರೀಕೆರೆಯ ಹನುಮಂತ ನಾಯ್ಕ್, ತಣಿಗೆಬೈಲಿನ ಮುರುಗೇಶ್, ಸಿದ್ದರ ಗುಡಿ ಶಿವ, ಗಣೇಶ, ಖಾನಾಪುರದ ಆಕಾಶ, ರವಿ, ರಾಮಚಂದ್ರ ಹಾಗೂ ಶಿವಮೊಗ್ಗದ ಫಾರೂಕ್ ರನ್ನ ಬಂಧಿಸಲಾಗಿದೆ.
ಸವಾಯಿ ಪಾಳ್ಯದ ಈದ್ಗಾ ಮೈದಾನದ ಬಳಿ ಎರಡು ಬೈಕು ಒಂದು ಓಮಿನಿಯಲ್ಲಿ ಶ್ರೀಗಂಧ ಮಾರಾಟ ಮಾಡಲು ಸಿದ್ದಗೊಂಡಿದ್ದ ಗ್ಯಾಂಗ್ ನ ಮೇಲೆ ಖಡಕ್ ದಾಳಿ ನಡೆಸಲಾಗಿದೆ. ಪಿಎಸ್ಐ ನಾರಾಯಣ ಮಧುಗಿರಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ತರೀಕೆರೆಯ ಎಂಸಿ ಹಳ್ಳಿಯಿಂದ ಶಿವಮೊಗ್ಗದ ಫಾರೂಕ್ ಗೆ ಮಾರಾಟ ಮಾಡಲು ಅನೇಕ ಕವರ್ ನಲ್ಲಿ ಶ್ರೀಗಂಧವನ್ನ ತುಣುಕುಗಳನ್ನಾಗಿ ಮಾಡಿಕೊಂಡು ಓಮಿನಿ ಕಾರಿನಲ್ಲಿ ಇಟ್ಟುಕೊಂಡಿದ್ದರು. ತಪಾಸಣೆ ವೇಳೆ ಈ ಮರಗಳು ಪತ್ತೆಯಾಗಿದೆ. ಓಮಿನಿ ಎರಡು ಬೈಕ್ ನಲ್ಲಿ ಬಂದ 12 ಜನರನ್ನ ಬಂಧಿಸಲಾಗಿದೆ. ಮೂರು ಮೊಬೈಲ್, ಕೆಎ 14 Z 1846 ಕ್ರಮ ಸಂಖ್ಯೆಯ ಓಮಿನಿ ಹಾಗೂ ಎರಡು ಬೈಕ್ ನ್ನ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
Tarikere to SHIVAMOGGA