ad

ರಾಜ್ಯದ ಪರಿಸ್ಥಿತಿ ನೋಡಿ ನೋವಾಗಿದೆ-ಈಶ್ವರಪ್ಪ- Pained to see the situation in the state - Eshwarappa

SUDDILIVE || SHIVAMOGGA

ರಾಜ್ಯದ ಪರಿಸ್ಥಿತಿ ನೋಡಿ ನೋವಾಗಿದೆ-ಈಶ್ವರಪ್ಪ-Pained to see the situation in the state - Eshwarappa

Pained, Eshwarappa

ಮೈದುಂಬಿ ಹರಿಯುತ್ತಿರುವ  ತುಂಗಾ ನದಿಗೆ ಮಾಜಿ ಡಿಸಿಎಂ ಈಶ್ವರಪ್ಪ ಕುಟುಂಬ ಸಮೇತರಾಗಿ ಬಂದು  ಬಾಗಿನ ಅರ್ಪಿಸಿದರು. ಯಾರಿಗೂ ಹಾನಿಯಾಗದಂತೆ ತುಂಗೆಗೆ ಬಾಗಿನ ನೀಡಿದರು. 

ಈ ಕುರಿತು ಮಾತನಾಡಿದ ಮಾಜಿ ಡಿಸಿಎಂ,  ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಉತ್ತಮ  ಬೆಳೆ ಬೆಳೆಯುವಂತೆ ಅನುಕೂಲ ಮಾಡಮ್ಮ ಎಂದು ಪ್ರಾರ್ಥಸಿದ್ದೇನೆ ಎಂದರು. 

ರಾಜಕೀಯ ಕುರಿತು ಮಾತನಾಡಿ,  ಕರ್ನಾಟಕ ರಾಜ್ಯದ ಪರಿಸ್ಥಿತಿ ನೋಡಿ ನೋವಾಗಿದೆ. ಯಾವುದೇ ಕ್ಷೇತ್ರದಲ್ಲೂ ಸಂತೃಪ್ತಿ ಇಲ್ಲ. ರಾಜಕೀಯ ಪಕ್ಷದಲ್ಲೂ ಗೊಂದಲ ಶಿಸ್ತು ಎಂಬುದು ಇಲ್ಲ. ಹಿಂದುಳಿದವರು ದಲಿತರಿಗೆ ನ್ಯಾಯ ಸಿಗುತ್ತಿಲ್ಲ. ಹಿಂದುಳಿದವರ ದಲಿತರ ಉದ್ಧಾರ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿಕೆಗೆ ಸೀಮಿತವಾಗಿದೆ ಎಂದರು.  


ಆಡಳಿತ ನಡೆಸುವವರೇ ಹಿಂದುಳಿದವರಿಗೆ ದಲಿತರಿಗೆ ಅನ್ಯಾಯವಾಗಿದೆ ಎಂದು ಮಾತನಾಡುತ್ತಾರೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಎಲ್ಲಾ ಪಕ್ಷದಲ್ಲೂ ಇದೆ.  ಹಿಂದುಳಿದವರಿಗೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೆ ದೇಶದಲ್ಲಿ ರಾಜ್ಯದಲ್ಲಿ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಹೋಗಲಾಡಿಸಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಶಿಸ್ತು ಮೂಡಿಸಬೇಕು ಎಂದ ಅವರು, ಹಿಂದುಳಿದವರಿಗೆ ದಲಿತರಿಗೆ ಅನ್ಯಾಯವಾಗದಂತೆ ನೋಡಮ್ಮ ಎಂದು ತುಂಗಾ ಮಾತೆಯಲ್ಲಿ ಪ್ರಾರ್ಥನೆ ಮಾಡಿದ್ದೇನೆ.ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ರಾಜಕೀಯ ಗೊಂದಲ ಇರಲಿಲ್ಲ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close