SUDDILIVE || SHIVAMOGGA
ಆ.3 ರಂದು ಪ್ರತಿಭಾ ಪುರಸ್ಕಾರ-Prathibha puraskara on August 3rd
ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಿ ನೌಕರರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ 2025 ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಈಗಾಗಲೇ 18 ಕಡೆ ಈ ಪ್ರತಿಭಾ ಪುರಸ್ಕಾರ ಮುಗಿದಿದೆ. ಶಿವಮೊಗ್ಗದಲ್ಲಿ ಸುಮಾರು 400 ಜನರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಟಿವಿ9 ಮುಖ್ಯ ಸಂಪಾದಕ ರಂಗನಾಥ ಭಾರದ್ವಾಜ್ ರನ್ನ ಆಹ್ವಾನಿಸಲಾಗಿದೆ. ಇವರು ಪ್ರೇರಣಾ ನುಡಿ ಭಾಷಣ ಮಾಡಲಿದ್ದಾರೆ. ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ಸಂಸದರು ಪ್ರತಿಭಾ ಪುರಸ್ಕಾರ ನಡೆಸಲಿದ್ದಾರೆ ಎಂದರು.
ಶಿವಮೊಗ್ಗ ಸಂಸದರು, ಶಾಸಕರಾದ ಎಸ್ ಎನ್ ಚೆನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕ್, ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್ ಮೋಹನ್ ಉಪಸ್ಥಿತರಿದ್ದಾರೆ. ಪ್ರತಿವರ್ಷ ಎರಡು ಕೋಟಿ ವ್ಯಚ್ಚ ಮಾಡಿ ಪ್ರೋತ್ಸಹಿಸಲಾಗುತ್ತಿದೆ. ನಗರದ ಕುವೆಂಪು ರಂಗಮಂದಿರದಲ್ಲಿ ಆ.03 ರಂದು ಸಂಜೆ 4 ಗಂಟೆಗೆ ನಡೆಸಲಾಗುತ್ತಿದೆ ಎಂದರು.
Prathibha puraskara on August 3rd