SUDDILIVE || SHIVAMOGGA
ಪ್ರಕಾಶ್ ಎಂ ನಾಯಕ್ ಹೃದಯಾಘಾತದಿಂದ ನಿಧನ-Prakash M Nayak passes away due to heart attack
ಮಾಜಿ ನಗರಸಭಾ ಸದಸ್ಯ ಹಾಗೂ ವಿಡಿಯೋ ಗ್ರಾಫರ್ ಆಗಿದ್ದ ಪ್ರಕಾಶ್ ಎಂ ನಾಯಕ್ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೃತರಿಗೆ 57 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ, ಸಹೋದರಿ ಸೇರಿದಂತೆ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಶಿವಮೊಗ್ಗದ ಕುವೆಂಪುರ ರಸ್ತೆಯ ನಂಜಪ್ಪ ಆಸ್ಪತ್ರೆ ಎದುರು ಇರುವ ಮೃತರ ನಿವಾಸಕ್ಕೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಬರಲಿದೆ.
ನಂಜಪ್ಪದಿಂದ ಮೆಗ್ಗಾನ್ ಗೆ ಕರೆಯಲಾಗಿತ್ತು. ಮೆಗ್ಗಾನ್ ಗೆ ಕರೆದೊಯ್ಯಲಾಗಿತ್ತು. ಅಲ್ಲಿ ನಿಧನರಾಗಿದ್ದಾರೆ. ಮೆಗ್ಗಾನ್ ನಲ್ಲಿ ಪೋಸ್ಟ್ ಮಾರ್ಟಮ್ ನಂತರ ಪಾರ್ಥೀವ ಶರೀರವನ್ನ ಮನೆಗೆ ಕರೆದೊಯ್ಯಲಾಗುವುದಾಗಿ ಆಪ್ತವಲಯ ತಿಳಿಸಿದೆ.
ಇವರು ಜೆ.ಹೆಚ್ ಪಟೇಲ್ ಸಿಎಂ ಆಗಿದ್ದಾಗ ಪ್ರಕಾಶ್ ಅವರನ್ನ ನಗರ ಸಭೆಗೆ ನಾಮ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಪಟೇಲರಿಗೆ ಇವರು ಬಹಳ ಆಪ್ತರು ಆಗಿದ್ದಾರೆ.
Prakash M Nayak passes away due to heart attack