ಈ ಬಾರಿ ಸ್ವಾತಂತ್ರ್ಯೋತ್ಸವ ನೆಹರೂ ಕ್ರೀಡಾಂಗಣದಲ್ಲಿ-This time the Independence Day will be celebrated at Nehru Stadium

 SUDDILIVE || SHIVAMOGGA

ಈ ಬಾರಿ ಸ್ವಾತಂತ್ರ್ಯೋತ್ಸವ ನೆಹರೂ ಕ್ರೀಡಾಂಗಣದಲ್ಲಿ-This time the Independence Day will be celebrated at Nehru Stadium

Nehru, stadium

12 ವರ್ಷಗಳ ನಂತರ ಈ ಬಾರಿ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕರ ಒತ್ತಾಯಕ್ಕೆ ಮಣಿದು, ಸ್ವಾತಂತ್ರೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಡಿಆರ್ ಗ್ರೌಂಡ್ ನಲ್ಲಿ ಸ್ವತಂತ್ರೋತ್ಸವ ನಡೆಯುತ್ತಿತ್ತು ಈ ಬಾರಿಯಿಂದ ಜಿಲ್ಲಾಡಳಿತ ನೆಹರು ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಿದೆ.

ನೆಹರು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದ್ದರಿಂದ ಅದರ ಸುರಕ್ಷತೆಯ ಕಾರಣಕ್ಕೆ 2013 ರಿಂದ ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗಳನ್ನು ಡಿಎಆರ್ ಮೈದಾನದಲ್ಲಿ ಆಚರಿಸಲಾಗುತ್ತಿತ್ತು ಕುಳಿತುಕೊಳ್ಳಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರ ಆಕ್ಷೇಪಣಗಳು ಕೇಳಿಬಂದಿತ್ತು. ಹೀಗಾಗಿ ರಾಷ್ಟ್ರೀಯ ಮತ್ತು ನಾಡ ಹಬ್ಬಗಳು ಜಿಲ್ಲೆ ಆಡಳಿತ ಯಂತ್ರ ವಿದ್ಯಾರ್ಥಿಗಳು ಮತ್ತು ಮಾಧ್ಯಮಗಳಿಗೆ ಮಾತ್ರ ಸೀಮಿತ ಎಂಬಂತಾಗಿತ್ತು.

12 ವರ್ಷಗಳ ನಂತರ ಡಿಎಆರ್ ಗ್ರೌಂಡ್ ಇಂದ ನೆಹರು ಕ್ರೀಡಾಂಗಣದಲ್ಲಿ ಆಗೋಸ್ಟ್ 15ರಂದು ಸ್ವತಂತ್ರೋತ್ಸವ ಆಚರಣೆಯನ್ನು ಆಚರಿಸಲಾಗುತ್ತಿದ್ದು ಅಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ ತಿಳಿಸಿದ್ದಾರೆ.

ಡಿಸಿ ಹೇಳಿಕೆ

ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಆನೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ನಗರದ ಹೃದಯ ಭಾಗದಲ್ಲಿ ಈ ಬಾರಿಯ ಸ್ವತಂತ್ರೋತ್ಸವ ಆಚರಿಸಲಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಂಗಳವಾರ ಸ್ವತಂತ್ರೋತ್ಸವದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಡಿಸಿ ಮಾತನಾಡಿದರು.

ಸ್ವಾತಂತ್ರ್ಯೋತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲಾಗಿದೆ ತಮಗೆ ವಯಸ್ಸಾದ ಹೊಣೆಗಾರಿಕೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಯಿತು ವೇದಿಕೆ ಅಲಂಕಾರ ರಾಷ್ಟ್ರಗೀತೆ ನಾಡಗೀತೆ ಪೆರೇಡ್ ಸಿದ್ದತೆ ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಿರ್ವಹಿಸಬೇಕು ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಮ ಸಮರ್ಪಕ ತರಬೇತಿ ನೀಡಬೇಕೆಂದು ಸೂಚಿಸಿದರು.

This time the Independence Day will be celebrated at Nehru Stadium

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close