ad

ಮೈದಾನ ಜಾಗ ಪಾಲಿಕೆ ಜಾಗ ಎಂದು ಆಗ್ರಹಿಸಿ ರಾಷ್ಟ್ರ ಭಕ್ತರ ಬಳಗ ಮನವಿ- Rashtra Bhakta Balaga appeals

SUDDILIVE || SHIVAMOGGA

ಮೈದಾನ ಜಾಗ ಪಾಲಿಕೆ ಜಾಗ ಎಂದು ಆಗ್ರಹಿಸಿ ರಾಷ್ಟ್ರ ಭಕ್ತರ ಬಳಗ ಮನವಿ-Rashtra Bhakta Balaga appeals demanding that the stadium land be municipal land

Balaga, appeals


ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಈದ್ಗಾ ಮೈದಾನ ಜಾಗದ ವಿಚಾರದಲ್ಲಿ ದಾಖಲೆಗಳನ್ನು ಪರಿಶೀಲಿಸುವಂತೆ ಆಯುಕ್ತ ಮಾಯಣ್ಣ ಗೌಡರಿಗೆ ಮನವಿ ಸಲ್ಲಿಸಿದ್ದಾರೆ. 

ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆಯ ಮಹಾನಗರ ಪಾಲಿಕೆಗೆ ಸೇರಿದ ಸರ್ಕಾರಿ ಜಾಗದ ಅಸಲಿ ದಾಖಲೆಗಳನ್ನು ಪರಿಶೀಲಿಸಬೇಕು. ಅನುಸೂಚಿತ ಸ್ವತ್ತು ಸರ್ಕಾರಿ ಜಾಗವಾಗಿದ್ದು, ಹಲವಾರು ದಶಕಗಳಿಂದಲೂ ಸಹ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು, ಸದರಿ ಸ್ವತ್ತು ಘನ ಸರ್ಕಾರದ ಜಾಗವಾಗಿದೆ. ಹಾಗು ಸರ್ಕಾರದ ಅಂಗಸಂಸ್ಥೆಯಾದ ಶಿವಮೊಗ್ಗ ಮಹಾನಗರ ಪಾಲಿಕೆಯ ಹಕ್ಕು, ಹಿತಾಸಕ್ತಿ ಒಡೆತನಕ್ಕೆ ಒಳಪಟ್ಟ ಜಾಗವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಅನುಸೂಚಿತ ಸ್ವತ್ತು ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳಾದ ಜಿಲ್ಲಾಧಿಕಾರಿಗಳ ಕಚೇರಿ, ಆರ್.ಟಿ.ಓ. ಕಚೇರಿ, ಜಯನಗರ ಪೋಲೀಸ್ ಠಾಣೆ ಹಾಗು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನೂ ಹತ್ತು ಹಲವು ಖಾಸಗಿ ವಾಣಿಜ್ಯ ವ್ಯವಹಾರ ನಡೆಯುವ ಸ್ಥಳದ ಮಧ್ಯಭಾಗದಲ್ಲಿ ಇರುವ ಖಾಲಿ ಜಾಗವಾಗಿದೆ, ಈ ಜಾಗವನ್ನು ಹಲವಾರು ದಶಕಗಳಿಂದಲು ಸಾರ್ವಜನಿಕರು ತಮ್ಮ ತಮ್ಮ ದೈನಂದಿನ ಬ್ಯಾಂಕ್, ಸರ್ಕಾರಿ ಕಚೇರಿ ಹಾಗು ಇನ್ನಿತರೆ ಕಾರ್ಯಗಳಿಗೆ ತಮ್ಮ ಓಡಾಟ, ವಾಹನ ನಿಲುಗಡೆ ಮತ್ತು ಇನ್ನಿತರೆ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು ನಿರ್ವಿವಾದಿತ ವಿಚಾರವಾಗಿದೆ.

ಈಗಾಗಲೇ ಸರ್ಕಾರ ಆದೇಶ ಸಂಖ್ಯೆ ನ.ಅ.ಇ.159ಬೆಂರೂಪ್ರಾ2012. ಬೆಂಗಳೂರು ದಿನಾಂಕ: 27/08/2012 ರನ್ವಯ ಶಿವಮೊಗ್ಗ ಮಹಾನಗರ ಯೋಜನೆ 2031ರ ದೊಡ್ಡ ಯೋಜನೆಯನ್ನು ರೂಪಿಸಿ ಶಿವಮೊಗ್ಗ ಮಹಾನಗರವು ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಈ ಬಗ್ಗೆ ತೀರ್ಮಾನ ಕೈಗೊಂಡು ಶಿವಮೊಗ್ಗ ಮಹಾನಗರ ಯೋಜನೆ-2031 ರ ರಾಜ್ಯ ಸರ್ಕಾರದ ವತಿಯಿಂದ ಅಧಿಸೂಚನೆಯನ್ನು ಸಹ ಹೊರಡಿಸಿದ್ದು ಈ ಬಗ್ಗೆ ಮಹಾನಗರ ಯೋಜನೆಯ ಒಂದು ಮಾಸ್ಟರ್ ಪ್ಲಾನ್ ರಚಿತಗೊಂಡಿದೆ.  ಈ ಪ್ಲಾನ್ ಸಹ 2012ರಲ್ಲಿಯೇ ಅನುಮೋದನೆಗೊಂಡು ಗೆಜೆಟ್ ಅಧಿಸೂಚನೆಯಲ್ಲಿ ಘೋಷಿತವಾಗಿದೆ. 

ಈ ಶಿವಮೊಗ್ಗ ಮಹಾನಗರ ಯೋಜನೆ-2031ರ ಮಹಾನಗರಕ್ಕೆ ಮತ್ತು ಸಂಪೂರ್ಣ ಜೋನಲ್ ರೆಗ್ಯುಲೇಶನ್ ಇದನ್ನು ಅನುಮೋದಿಸಿದೆ. ಮಹಾನಕ್ಷೆಯನ್ವಯ ಪ್ರಶ್ನಿತ ಸ್ವತ್ತು ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವಾಗಿದೆ.  "ದಟ್ಟ ಹಸಿರು ಬಣ್ಣದಿಂದ ಗುರುತಿಸಲ್ಪಟ್ಟಿದೆ.ಈ ಮಧ್ಯೆ ಸದರಿ ಸ್ವತ್ತಿನ ಪಶ್ಚಿಮ ಭಾಗದಲ್ಲಿ 6ಮೀ. (ಅಂದಾಜು 20 ಅಡಿ) ಅಗಲದ ರಸ್ತೆಯು ಇದ್ದು ರಸ್ತೆಯ ನಂತರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನಿತರೆ ವಾಣಿಜ್ಯ ಸಂಕಿರ್ಣದ ಕಟ್ಟಡಗಳಿರುತ್ತವೆ. ಅದೇ ರೀತಿ ಅನುಸೂಚಿತ ಸ್ವತ್ತಿನ ಪೂರ್ವ ದಿಕ್ಕಿಗೆ ಶಿವಮೊಗ್ಗ-ಸವಳಂಗ ರಸ್ತೆ ಇದ್ದು, ದಕ್ಷಿಣ ಬಾಗಕ್ಕೆ ತಿಲಕ್ ನಗರ ಮುಖ್ಯ ರಸ್ತೆ ಇದ್ದು, ಇದರ ಉತ್ತರ ದಿಕ್ಕಿಗೆ ಖಾಸಗಿ ಸ್ವತ್ತು ಇದ್ದು ಈ ಸ್ವತ್ತಿನ ನಡುವಿನ ಸುಮಾರು 32,670 ಚ.ಅಡಿ ವಿಸ್ತೀರ್ಣದ ಸ್ವತ್ತು ಇರುವ ಜಾಗ ಇದಾಗಿರುತ್ತದೆ.

ಹಲವು ಪಟ್ಟಭದ್ರ ಹಿತಾಸಕ್ತಿಯುಳ್ಳ ವ್ಯಕ್ತಿಗಳು ಅನುಸೂಚಿತ ಸ್ವತ್ತನ್ನು ಈದ್ಗಾ  ವಕ್ಫ್ ಗೆ  ಸೇರಿದ ಸ್ವತ್ತೆಂದು ತಪ್ಪಾಗಿ ಅರ್ಥೈಸಿಕೊಂಡು ಕಾನೂನುಬಾಹಿರವಾಗಿ ಸ್ವತ್ತಿನ ಪಶ್ಚಿಮ ದಿಕ್ಕಿನಲ್ಲಿರುವ 20 ಅಡಿ ವಿಸ್ತೀರ್ಣದ ರಸ್ತೆಯ ಮಧ್ಯಭಾಗದಲ್ಲಿ ಸುಮಾರು 1.2ಮೀ. ಮತ್ತು 6.8ಮೀ. ನ ಒಂದು ಗೋಡೆ ಆಕಾರದ ಧಾರ್ಮಿಕ ಆಕೃತಿಯನ್ನು ಅನಧಿಕೃತವಾಗಿ ಕಟ್ಟಿ ತಮ್ಮ ಧಾರ್ಮಿಕ ಭಾವನೆಗೋಸ್ಕರ ಸದರಿ ಜಾಗದಲ್ಲಿ ಅಭಿಮುಖವಾಗಿ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಿ ಕೊಳ್ಳುತ್ತಾ ಬಂದಿರುತ್ತಾರೆ.

1965 ರಲ್ಲಿ ಮುಸಲ್ಮಾನರು ತಪ್ಪು ಮಾಹಿತಿ ನೀಡಿ ಬೇರೆ ಜಾಗಕ್ಕೆ ಸಂಬಂಧಿಸಿದ ಜಾಗವನ್ನು ಈ ವಕ್ಫ್  ಜಾಗ ಎಂದು ಅಕ್ರಮವಾಗಿ ಮಹಾನಗರ ಪಾಲಿಕೆಯಲ್ಲಿ 2019ರಲ್ಲಿ  ಖಾತೆ ಆಗಿರುತ್ತದೆ. ಸದರಿ ಜಾಗ ಸಾರ್ವಜನಿಕ ಸ್ವತ್ತಾಗಿದ್ದು ದಾಖಲೆಗಳನ್ನು ಪರಿಶೀಲಿಸುವಂತೆ ದಾಖಲೆ ನೀಡಿರುತ್ತಾರೆ.

ಸದರಿ ಈದ್ಗಾ ಮೈದಾನದ ಜಾಗದ ಖಾತೆಯನ್ನು ನಿಯಮ ಬಾಹಿರವಾಗಿ ವಕ್ಫ್  ಹೆಸರಿಗೆ ಮಾಡಿದ್ದನ್ನು ಪ್ರಶ್ನಿಸಿ, ಪುನರ್ ಪರಿಶೀಲಿಸುವಂತೆ ದಿನಾಂಕ 10/11/2020 ರಂದು ಹಿಂದುಪುರ ಸಂಘಟನೆ ಮುಖಂಡರಾದ ಚಂದ್ರಶೇಖರ @ ರಾಜು 45 ವರ್ಷ ಬ್ರಾಹ್ಮಣ ಜನಾಂಗ ನೇತೃತ್ವದಲ್ಲಿ ಐದು ಜನರು ಅರ್ಜಿ ಸಲ್ಲಿಸಲಾಗಿದ್ದರೂ ಪಾಲಿಕೆ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರಕರಣ ಮಾನ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. (ರಿಟ್ ಅರ್ಜಿ ಸಂಖ್ಯೆ 14897/2025), ದಿನಾಂಕ 22/05/2025 ರ ಆದೇಶದಲ್ಲಿ ಉಚ್ಚ ನ್ಯಾಯಾಲಯ ಸದರಿ ಜಾಗದ ಹಕ್ಕುದಾರಿಕೆಯ ದಾಖಲಾತಿಗಳನ್ನು ಎಂಟು ವಾರದ ಒಳಗೆ ಪರಿಶೀಲಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಕೊಟ್ಟಿದ್ದ ದಿನಾಂಕ 17.7.25ರಂದು ಮುಕ್ತಾಯವಾಗಿರುತ್ತದೆ.

ಯಾವುದೇ ಒತ್ತಡಕ್ಕೆ ಸಂಬಂಧಪಟ್ಟ ಸಚಿವರ ಒತ್ತಡಕ್ಕೆ ಮಣಿಯದೆ ಸರಿಯಾದ ಕ್ರಮ ಆಗಬೇಕು ಇಲ್ಲಾಂದ್ರೆ ಹೋರಾಟ ಮಾಡಬೇಕಾಗುತ್ತದೆ . ಸುಮ್ಮನೆ ನಿಮ್ಮ ಹತ್ತಿರ ಇದು ಮಹಾನಗರ ಪಾಲಿಕೆ ಆಸ್ತಿ ಅಂತ ಬಂದಿಲ್ಲ ದಾಖಲೆಗಳನ್ನು ಹಿಡಿದುಕೊಂಡು ನಿಮಗೆ ಅನೂಕೂಲವಾಗಲೀ ಅಂತಾ  ತಂದಿದ್ದೇವೆ. ಸುಮ್ಮನಿದ್ದೀರಿ ಮಾತನಾಡಿ ಎಂದಾಗ,

ಆಯುಕ್ತ ಮಾಯಣ್ಣಗೌಡ ಮಾತಾನಾಡಿ, ಒಟ್ಟು ಎರಡು ಅರ್ಜಿಗಳು ಇದ್ದು, ಒಂದು ಅರ್ಜಿ ಆಗಿದೆ. ಇನ್ನೊಂದು ಅರ್ಜಿ 2019 ರಲ್ಲಿ ಉಪಮೇಯರಾಗಿದ್ದ ಎಸ್ ಎನ್ ಚನ್ನಬಸಪ್ಪ( ಪ್ರಸ್ತುತ ಶಿವಮೊಗ್ಗ ನಗರ ಶಾಸಕರು) ಹಿಂದಿನ ಅವಧಿಯ  ಹಿಂದಿನ ಆಯುಕ್ತರಿಗೆ ಅರ್ಜಿ ನೀಡಿದ್ದು ಅರ್ಜಿಯ ವಿಚಾರಣೆ ಇದೇ ಶುಕ್ರವಾರ ಹಿಯರಿಂಗ್ ನಡೆಸಲಾಗುವುದು.  ಕೇಸು ಹೈಕೋರ್ಟಿನಲ್ಲಿ ಇರುವುದರಿಂದ ಇಲ್ಲಿ ಹೆಚ್ಚು ಮಾತನಾಡಲು ಆಗುವುದಿಲ್ಲ ಎಂದರು. 

Rashtra Bhakta Balaga appeals

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close