ad

ರಾಯಣ್ಣನ ಪ್ರತಿಮೆ ನಿರ್ಮಿಸಲು ಆಗ್ರಹ-Kannada Workers' Protection Forum appeals

 SUDDILIVE || SHIVAMOGGA

ರಾಯಣ್ಣನ ಪ್ರತಿಮೆ ನಿರ್ಮಿಸಲು ಆಗ್ರಹ-Kannada Workers' Protection Forum appeals       

Protection, forum


ಹೊನ್ನಾಳಿ ರೈಲ್ವೆ ಓವರ್ ಬ್ರಿಡ್ಜ್ ಬಳಿ ಇರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಯನ್ನು ನಿರ್ಮಿಸುವಂತೆ ಹಾಗೂ ರಾಮೇನಕೊಪ್ಪದಲ್ಲಿ ವಾಸವಾಗಿರುವ ಜನರಿಗೆ ಹಕ್ಕುಪತ್ರ ನೀಡುವಂತೆ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವಾಟಾಳ್ ಮಂಜು ನೇತೃತ್ವದಲ್ಲಿ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ಹೊನ್ನಾಳಿ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ಬಳಿ ಇರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸುವಂತೆ ಈ ಹಿಂದೆಯಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ ಇದುವರೆಗೂ ರಾಯಣ್ಣನ ಪ್ರತಿಮೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಹಾಗಾಗಿ ಈ ಮನವಿಯನ್ನು ಪರಿಗಣಿಸಿ ರಾಯಣ್ಣನ ಪ್ರತಿಮೆಯನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯೇ ನಿರ್ಮಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ

ತಾಲೂಕಿನ ರಾಮೇನಕೊಪ್ಪ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ಸ್ಥಳೀಯರಿಗೆ ಹಕ್ಕುಪತ್ರ ನೀಡಿ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿರುವ  ಹಿಂದುಳಿದ ವರ್ಗಗಳ ಜನಾಂಗಗಳು ದಿನನಿತ್ಯ ಕೂಲಿ ಮಾಡಿಕೊಂಡು ವಾಸವಾಗಿದ್ದಾರೆ. 

ಇವರಿಗೆ ಮನೆ ಕಟ್ಟಲು ಜಾಗವಿಲ್ಲದೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ ಇವರಿಗೆ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಇದುವರೆಗೂ ಸರ್ಕಾರದಿಂದ ಅವರು ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕು ಪತ್ರ ಸಹ ನೀಡಿರುವುದಿಲ್ಲ ಹಲವಾರು ಜಾತಿ ಜನಾಂಗಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು ಗ್ರಾಮ ಪಂಚಾಯತಿಯಿಂದ ಸೈಟ್ಗಳನ್ನು ಸಹ ಹಂಚಿಕೆ ಮಾಡಿರುವುದಿಲ್ಲ. ಆದ್ದರಿಂದ ಕಟ್ಟಿರುವ ಮನೆಗಳಿಗೆ ಹಕ್ಕುಪತ್ರ ನೀಡಿ ಹಾಗೂ ಸೋಲಿಲ್ಲದವರಿಗೆ ಸೂರು ಕಟ್ಟಲು ಜಾಗ ನೀಡುವಂತೆ ಹಲವಾರು ದಿನಗಳ ಹಿಂದೆ ಮನವಿ ಸಲ್ಲಿಸಲಾಗಿತ್ತು.

ಈಗ ಎ ಡಿ ಎಲ್ ಆರ್ ಕಚೇರಿಗೆ ಸರ್ವೇ ಮಾಡಲು ಅಧಿಕಾರಿಗಳು ಬಂದಿದ್ದು ವಿಚಾರವನ್ನು ಪರಿಗಣಿಸಿ ಕ್ರಮ ಜರುಗಿಸುವಂತೆ ಮನವಿಯಲ್ಲಿ ವಾಟಾಳ್ ಮಂಜು ಒತ್ತಾಯಿಸಿದ್ದಾರೆ

Kannada Workers' Protection Forum appeals

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close