SUDDILIVE || SHIVAMOGGA
ಸರ್ಕಾರಿ ಉರ್ದು ಶಾಲೆ ಜಾಗವನ್ನ ಮೌಲಾನಾ ಆಜಾದ್ ಮಾದರಿ ಶಾಲೆಗೆ ಸೇರಿಸಲು ಮನವಿ-Request to include the land of govt Urdu School in the Maulana Azad Model School
ಸರ್ಕಾರಿ ಖರಾಬು ಜಾಗದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಉರ್ದು ಜಾಗವನ್ನ ಸರ್ಕಾರಿ ಮೌಲಾನ ಆಜಾದ್ ಮಾದರಿ ಆಂಗ್ಲ ಶಾಲೆ ಹೆಸರಿಸುವಂತದ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ.
ಮಂಡ್ಲಿ ಗ್ರಾಮ ಕಸಬಾ 1 ಸರ್ವೆ ನಂಬರ್ 138 ರಲ್ಲಿ ಸರ್ಕಾರಿ ಖರಾಬು ಕಟ್ಟೆ ಜಾಗವನ್ನು ಸಾರ್ವಜನಿಕರ ಶಿಕ್ಷಣಕ್ಕಾಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸ್ಥಳಾಂತರಿಸಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಸರ್ಕಾರಿ ಮೌಲಾನ ಆಜಾದ್ ಮಾದರಿ ಆಂಗ್ಲ ಶಾಲೆ ಹೆಸರಿಗೆ ಈ ಜಾಗವನ್ನು ಮಂಜೂರು ಮಾಡಿ ಖಾತೆ ಪಹಣಿ ಮಾಡಿಕೊಡುವಂತೆ ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ರಿಯಾಜ್ ಅಹಮದ್ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನ್ಯೂಮಂಡ್ಲಿ ಶಾಲೆಯು ಸುಮಾರು 55 ವರ್ಷಗಳಿಂದ ನಡೆಯುತ್ತಿದೆ. ಸುಮಾರು 1 ರಿಂದ 8ನೇ ತರಗತಿವರೆಗೂ 138 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನ್ಯೂಮಂಡ್ಲಿ ಶಾಲೆಯನ್ನು ಪ್ರಸ್ತುತ ಜಾಗದಿಂದ ಸಮಾರು 300 ಮೀಟರ್ ದೂರದಲ್ಲಿರುವ ಸರ್ವೆ ನಂಬರ್:138ರ ಸರ್ಕಾರಿ ಖರಾಬು ಕಟ್ಟೆ ಜಾಗವಾದ 1.02 ಎಕರೆ ಇಲ್ಲಿಗೆ ಸ್ಥಳಾಂತರಿಸುವಂತೆ ಮನವಿ ಸಹ ಮಾಡಲಾಗಿದೆ.
ಸರ್ಕಾರದ ಹೊಸ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರದ ಮಂಜೂರಾತಿ ನೀಡಿದ್ದು ಸರ್ಕಾರದ ಆದೇಶ ಸಂಖ್ಯೆ: MWD 200 MDS 2024 ದಿನಾಂಕ:23/09/2024. ಅಲ್ಪಸಂಖ್ಯಾತರ ನಿರ್ದೇಶನಾಲಯದ ಇ-ಕಚೇರಿ :DOM/DEVP/MAMS/2/2025 ಸರ್ಕಾರದ ಆದೇಶ ಅನ್ವಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಇಲ್ಯಾಜ್ ನಗರ ಶಾಲೆ ಕಟ್ಟಡದಲ್ಲಿ ಪ್ರಾರಂಭಿಸಿದು ತಕ್ಷಣವೇ ಮಂಡ್ಲಿ ಗ್ರಾಮ ಕಸಬಾ 1 ಸರ್ವೆ ನಂಬರ್ 138 ರಲ್ಲಿ ಸರ್ಕಾರಿ ಖರಾಬು ಕಟ್ಟೆ ಜಾಗವನ್ನು ಸಾರ್ವಜನಿಕರ ಶಿಕ್ಷಣಕ್ಕಾಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸ್ಥಳಾಂತರಿಸಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಸರ್ಕಾರಿ ಮೌಲಾನ ಆಜಾದ್ ಮಾದರಿ ಆಂಗ್ಲ ಶಾಲೆ ಹೆಸರಿಗೆ ಈ ಜಾಗವನ್ನು ಹಂಚಿಕೆ ಮಂಜೂರು ಮಾಡಿ ಖಾತೆ ಪಹಣಿ ಮಾಡಿಕೊಡಬೇಕಾಗಿ ಮನವಿ ಮಾಡುತ್ತೇವೆ ಎಂದು ಸಂಬಂಧಪಟ್ಟ ದಾಖಲಾತಿಗಳನ್ನು ಲಗತ್ತಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Request to include the land of Govt Urdu School in the Maulana Azad Model School