ad

ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಎಸ್ಐಟಿಗೆ ನೀಡುವಂತೆ SDPI ಆಗ್ರಹ-SDPI demands that the rape case in Dharmasthala be handed over to the SIT

 SUDDILIVE || SHIVAMOGGA

ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಎಸ್ಐಟಿಗೆ ನೀಡುವಂತೆ SDPI ಆಗ್ರಹ-SDPI demands that the rape case in Dharmasthala be handed over to the SIT


ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಯನ್ನು ಸರ್ಕಾರ ಕೂಡಲೆ ಎಸ್ಐಟಿಗೆ ವಹಿಸಬೇಕು. ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ SDPI ಸಂಘಟನೆ ಆಗ್ರಹಿಸಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಕಾರ್ಯಕರ್ತರು, ಧರ್ಮಸ್ಥಳದಲ್ಲಿ ಕಳೆದ ನಾಲ್ಕು ದಶಕದಿಂದ ಹಲವು ಅತ್ಯಾಚಾರ, ಕೊಲೆಗಳಾಗಿವೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಸಾಕ್ಷಿ ಸಹಿತ ದೂರು ನೀಡಿದ್ದಾರೆ. ಹಾಗಿದ್ದೂ ಸರ್ಕಾರ ತನಿಖೆಗೆ ಹಿಂದೇಟು ಹಾಕುತ್ತಿದೆ. ಇದು ಅನುಮಾನಕ್ಕೀಡಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಎಸ್ ಡಿ.ಪಿ.ಐ ಮಾಜಿ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಮಾತನಾಡಿ,ಧರ್ಮಸ್ಥಳದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣ ಬಯಲಿಗೆ ಬರುತ್ತಿದೆ.ಆ ಕೇಸುಗಳನ್ನು ತನಿಖೆ ಮಾಡಲು ಬೆಳ್ತಂಗಡಿಯ ಪೊಲೀಸರು ಅರ್ಹರಿಲ್ಲ ಅಂತ ನಾವು ಹೇಳಲಿಕ್ಕೆ ಇಷ್ಟಪಡುತ್ತೇವೆ. ಏಕೆಂದರೆ ಅಲ್ಲಿ ಸಾವಿರಾರು ಅತ್ಯಾಚಾರಗಳು ನಡೆದರೂ ಕೂಡ ತಡಿಲಿಕ್ಕೆ ಅವರಿಗೆ ಸಾಧ್ಯವಾಗಿಲ್ಲ. ಪೊಲೀಸರು ಸಹ ಸಾಥ್  ನೀಡಿದ್ದಾರೆ ಅಂತ ಆರೋಪಗಳು ಸಹ ಅಲ್ಲಿ ಇವೆ.

ಹಾಗಾಗಿ ರಾಜ್ಯ ಸರ್ಕಾರ ತನಿಖೆ ಮಾಡಲು ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಲು ಸಮಿತಿ ರಚಿಸಿ ಎಸ್ಐಟಿಗೆ ಇನ್ವೆಸ್ಟಿಗೇಷನ್ ಮಾಡಲು ತನಿಖೆ ಮಾಡಲು ಕೊಡಬೇಕೆಂದು ಆಗ್ರಹಿಸುತ್ತೇವೆ.

ಧರ್ಮಸ್ಥಳದಲ್ಲಿ ಯಾರ್ಯಾರು ನಾಪತ್ತೆಯಾಗಿದ್ದಾರೆ ಅವೆಲ್ಲ ಪ್ರಕರಣಗಳು ಬೆಳಕಿಗೆ ಬರಲಿ. ಪ್ರಕರಣಗಳು ಮರುತನಿಕೆಯಾಗಲಿ.ಧಣಿಗಳು ಅಂತ ಸಮೀರ್( ಯೂಟ್ಯೂಬರ್) ಎಂಬುವವರು ವಿಡಿಯೋ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಅದರಲ್ಲಿ ಅವರು ದಣಿಗಳು ಅಂತ ಮೆನ್ಷನ್ ಮಾಡಿದ್ದಾರೆ. ಧಣಿಗಳು ಇರಲಿ ಯಾರೇ ಇರಲಿ ರೇಪಿಸ್ಟ್ ಗಳಿಗೆ ಶಿಕ್ಷೆ ಆಗಬೇಕು. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಧಣಿಗಳಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸುತ್ತೇವೆ ಎಂದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಜೀಲನ್‌ ಖಾನ್‌, ಉಪಾಧ್ಯಕ್ಷ ಸಲೀಂ ಖಾನ್‌, ಪ್ರಮುಖರಾದ ಇಸಾಕ್‌ ಅಹಮದ್‌, ಮನ್ಸೂರ್‌ ಖಾನ್‌, ಝಮೀರ್‌, ಮಝರ್‌ ಅಹ್ಮದ್‌ ಪ್ರತಿಭಟನೆಯಲ್ಲಿದ್ದರು


SDPI demands that the rape case in Dharmasthala be handed over to the SIT


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close