SUDDILIVE || SHIVAMOGGA
ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಗಲಾಟೆ-ಓರ್ವನ ಬಂಧನ-Riot at bar and restaurant - one arrest
ಕ್ಷುಲಕ ಕಾರಣಕ್ಕೆ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಸ್ನೇಹಿತರ ಮಧ್ಯೆ ಗಲಾಟೆಯಾಗಿ ಒಬ್ಬಾತನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆಯಲಾಗಿದೆ. ಗಂಭೀರ ಗಾಯಗೊಂಡಿರುವ ಆತನನ್ನು ಶಿವಮೊಗ್ಗ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಜಯ್ ಎಂಬಾತನಿಗೆ ಗಾಯವಾಗಿದೆ. ಆತನ ಸ್ನೇಹಿತರಾದ ಮಾರುತಿ ಮತ್ತು ರವಿಕುಮಾರ್ ಎಂಬುವವರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಲಾಟೆ
ವಿಜಯ್, ಮಾರುತಿ, ರವಿಕುಮಾರ್ ಅವರು ಸ್ನೇಹಿತರೊಂದಿಗೆ ಸೋಮಿನಕೊಪ್ಪದ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಲು ತೆರಳಿದ್ದರು. ಈ ಸಂದರ್ಭ ಸ್ನೇಹಿತರ ಮಧ್ಯೆ ಕ್ಷುಲಕ ವಿಚಾರಕ್ಕೆ ಜಗಳವಾಗಿದೆ. ಆಗ ಮಾರತಿಯು ಬಿಯರ್ ಬಾಟಲಿಯಿಂದ ವಿಜಯ್‌ನ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ವಿಜಯ್‌ನನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಆತನನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿ ಕುಮಾರ್ ನನ್ನ ಪೊಲೀಸರು ಬಂಧಿಸಿದ್ದಾರೆ. ಮಾರುತಿಗೆ ಬಲೆ ಬೀಸಲಾಗಿದೆ.
Riot at bar and restaurant - one arrest