SUDDILIVE || SHIVAMOGGA
ಮತ್ತೋರ್ವ ಖೈದಿಯ ಬಳಿ ಸಿಮ್ ಪತ್ತೆ-SIM found with another prisoner
ಶಿವಮೊಗ್ಗ ಜೈಲಿನಲ್ಲಿದ್ದ ಖೈದಿ ಮೊಬೈಲ್ ನುಂಗಿದ ಪ್ರಕರಣ ದಾಖಲಾದ ಬೆನ್ನಲ್ಲೇ ಮತ್ತೋರ್ವ ಖೈದಿಯ ಬಳಿ ಸಿಮ್ ಪತ್ತೆಯಾಗಿದೆ. ಈ ಪ್ರಕರಣ ಪ್ರತ್ಯೇಕವಾಗಿ ದಾಖಲಾಗಿದೆ ದೌಲತ್ ಎಂಬ ಸಜಾಬಂಧಿಯು ಮೊಬೈಲ್ ನ್ನ ನುಂಗಿ ನಂತರ ಹೊಟ್ಟೆ ನೋವು ಎಂದು ಮೆಗ್ಗಾನ್ ಗೆ ಬಂದಿದ್ದ.
ಚಿಕಿತ್ಸೆಯ ನಂತರ ಮೊಬೈಲ್ ತೆಗೆಯಲಾಗಿತ್ತು. ಆದರೆ ಅದರಲ್ಲಿ ಸಿಮ್ ಪತ್ತೆಯಾಗಿದ್ದ ಬಗ್ಗೆ ಉಲ್ಲೇಖವಿರಲಿಲ್ಲ. ಈಗ ಮತ್ತೋರ್ವನ ಬಳಿ ಸಿಮ್ ಮತ್ತು ಮೆಟಲ್ ಪೀಸು ಪತ್ತೆಯಾಗಿದೆ. ಉಮೈದ್ ಎಂಬ ಶಿಕ್ಷಾಬಂಧಿಯ ಪ್ಯಾಂಟ್ ಜೇಬಿನಲ್ಲಿ ಸಿಮ್ಮೊಂದು ಮತ್ತು ಮೆಟಲ್ ಪೀಸು ಪತ್ತೆಯಾಗಿದೆ.
ಶಿಕ್ಷಾಬಂಧಿಯನ್ನ ಪುತ್ತೂರಿನ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವಾಗ ಜೈಲಿನ ಅಕ್ಸಸ್ ಕಂಟ್ರೋಲ್ ನಲ್ಲಿ ತಪಾಸಣೆ ನಡೆಸುವಾಗ ಸಿಮ್ ಕಾರ್ಡ್ ಮತ್ತು ತಗಡಿನ ಮಾಡಿದ ವಸ್ತು ಪತ್ತೆಯಾಗಿದೆ. ಇವೆಲ್ಲ ನಿಷೇಧಿತ ವಸ್ತುವಾಗಿದ್ದು ಜೈಲಿನಲ್ಲಿ ಅದರಲ್ಲೂ ಖೈದಿಗಳ ಕೈಗೆ ಹೇಗೆ ಲಭ್ಯವಾಗುತ್ತದೆ ಎಂಬುದೆ ಅಚ್ಚರಿ.
ನಿರಂತರವಾಗಿ ದಾಳಿ ನಡೆದ ಬಳಿಕವೂ ಸಹ ಮೊಬೈಲ್, ಸಿಮ್ ಕಾರ್ಡ್ ಮತ್ತು ಚಾಕುಗಳು ಖೈದಿಗಳ ಬಳಿ ಪತ್ತೆಯಾಗುತ್ತವೆ. ದಾಳಿಯ ವೇಳೆ ಪತ್ತೆಯಾಗದೆ ಇರುವುದು ಅಚ್ಚರಿಯೆ ಸರಿ
SIM found with another prisoner