ad

ಖೈದಿಯ ಹೊಟ್ಟೆ ಬಗೆಯದಿದ್ದರೆ ಆತನ ಸಾವು ನಿಶ್ಚಿತವಾಗಿತ್ತು!

 SUDDILIVE || SHIVAMOGGA

ಖೈದಿಯ ಹೊಟ್ಟೆ ಬಗೆಯದಿದ್ದರೆ ಆತನ ಸಾವು ನಿಶ್ಚಿತವಾಗಿತ್ತು!If the prisoner had not been fed, his death would have been certain!

Death, prisioner


ಸೋಗಾನೆಯ ಕೇಂದ್ರ ಕಾರಾಗೃಹ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್‌ ಫೋನ್‌ ಪತ್ತೆಯಾದ ಘಟನೆ ಈಗ ಭರ್ಜರಿ ಸದ್ದು ಮಾಡಿದೆ. ಜುಲೈ 2 ರಂದು ಪೊಲೀಸ್ ದಾಳಿ ನಡೆದಾಗಲೂ ಸೆಲ್ ಫೊನ್ ಗಳುವಪತ್ತೆಯಾಗಲ್ಲ. ಆದರೆ ಜೂನ್ 24 ರಂದು ಜೈಲಿನಲ್ಲಿ ಓರ್ವ ಖೈದಿ ಮೊಬೈಲ್ ನ್ನ ನುಂಗಿದ್ದಾನೆ. 

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಖೈದಿ ದೌಲತ್‌ ಅಲಿಯಾಸ್‌ ಗುಂಡ (30) ಎಂಬಾತನ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ ದೌಲತ್‌ ಅಲಿಯಾಸ್‌ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈತ ಜೂನ್‌ 24ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. 

ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್‌ರೇ ಮಾಡಿದಾಗ ಖೈದಿ ದೌಲತ್‌ನ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಗೊತ್ತಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್‌ ಫೋನ್‌ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.‌

ಈಗ ಆತನ ಹೊಟ್ಟೆಯನ್ನ ಬಗೆದು ಕೆಚಗೋಡ ಮೊಬೈಲ್ ನ್ನ ಹೊರತೆಗೆಯಲಾಗಿದೆ. ಜೂನ್ 24 ರಂದು ಆತ ಮೊಬೈಲ್ ನುಗಿದ್ದ, ಜೂನ್ 27 ಕ್ಕೆ ಆತನ ಹೊಟ್ಟೆ ಆಪರೇಷನ್ ಮಾಡಿ ಮೊಬೈಲ್ ತೆಗೆಯಲಾಗಿತ್ತು. ಈಗ ಆತ ಮೆಗ್ಗಾನ್ ನಿಂದ ಹುಷಾರಾಗಿ ಹೊಗಿದ್ದಾನೆ. ಮೂರು ದಿನ ಆತನ ಹೊಟ್ಟೆಯಲ್ಲಿದ್ದ ಮೊಬೈಲ್ ಲೀಥಿಯಮ್ ಬ್ಯಾಟರಿ ಒಂದು ವೇಳೆ ಸೋರಿಕೆಯಾಗಿದ್ದರೆ ಆತ ಸಾಯುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ. 

If the prisoner had not been fed, his death would have been certain!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close