SUDDILIVE || SHIVAMOGGA
ಶಾಹೀದ್ ಖಾನ್ ರವರನ್ನ ಬಿಗಿ ಭದ್ರತೆಯಲ್ಲಿ ಕರೆತಂದ ಪೊಲೀಸರು-Shahid Khan brought Shivamogga under tight security
ನಿಷೇಧಿತ ಪಿಎಫ್ಐ ಜಿಲ್ಲಾಧ್ಯಕ್ಷ ಶಾಹೀದ್ ಖಾನ್ ಅವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರದ ಪೊಲೀಸರು ಇಂದು ಕರೆತಂದಿದ್ದಾರೆ. ತಂದೆ ಅನ್ವರ್ ಖಾನ್ ನಿಧನದ ಹಿನ್ನಲೆಯಲ್ಲಿ ಶಾಹೀದ್ ಖಾನ್ ಅವರನ್ನ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಂದು ಬೆಳಿಗ್ಗೆ ಕರೆತರಲಾಗಿತ್ತು.
ಶಾಹೀದ್ ಖಾನ್ ಅವರ ಮನೆ ಲಷ್ಕರ್ ಮೊಹಲ್ಲಾದಲ್ಲಿದ್ದು ಇಙದು ಬೆಳಿಗ್ಗೆ 4 ಗಂಟೆಗೆ ಕರೆತರಲಾಗಿತ್ತು. ಅನ್ವರ್ ಖಾನ್ ಗೆ (80) ವಯಸ್ಸಾಗಿದ್ದು ಕ್ಯಾನ್ಸರ್ ಖಾಯಿಲೆಯಿಂದಲೂ ಬಳಲುತ್ತಿದ್ದರು. ಮೊನ್ನೆ ಇವರು ಅಸುನೀಗಿದ್ದರು. ಶಾಹೀದ್ ಖಾನ್ ಅವರೆ ಇವರ ಕೇರ್ ಟೇಕರ್ ಆಗಿದ್ದರು.
![]() |
ಅನ್ವರ್ ಖಾನ್ |
ದೊಡ್ಡಪೇಟೆ ಪೊಲೀಸ್ ಠಾಣೆ ಎದುರಿನ ಖಬರ್ ಸ್ತಾನ್ ನಲ್ಲಿ ಅನ್ವರ್ ಖಾನ್ ಅವರ ಅಂತ್ಯಕ್ರಿಯೆ ನಡೆದಿದ್ದು ಈ ಅಂತ್ಯಕ್ರಿಯೆಯಲ್ಲಿ ಶಾಹೀದ್ ಖಾನ್ ಭಾಗಿಯಾಗಿದ್ದರು. ನಂತರ ಅವರನ್ನ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿತ್ತು. ಶಾಹೀದ್ ಖಾನ್ ಡಿಜೆಹಳ್ಳಿ ಮತ್ತು ಕೆಜೆಹಳ್ಳಿ ಗಲಭೆಯ ಆರೋಪಿಯಾಗಿದ್ದು ಎನ್ಐಎ ಇವರನ್ನ ಬಂಧಿಸಿತ್ತು.
Shahid Khan brought Shivamogga under tight security