SUDDILIVE || SHIVAMOGGA
ಸಿಗಂದೂರು ಸೇತುವೆ ಅದೇ ದಿನಾಂಕದಂದು ಉದ್ಘಾಟನೆ-ಸೇತುವೆಗೆ ಹೆಸರೇನು ಗೊತ್ತಾ?ಸಂಸದರು ಹೇಳಿದ್ದೇನು?-Sigandur Bridge inaugurated on the same date - do you know the name of the bridge? What did the MP say?
ಜುಲೈ 14 ರಂದೇ ಸಿಗಂದೂರು ಸೇತುವೆ ಉದ್ಘಾಟನೆಯಾಗಲಿದೆ. ಮತ್ತು ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡಲು ಪ್ರಯತ್ನ ನಡೆರಯುತ್ತಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ತಾಲೂಕಿನ ಕೆರೂರು ಆವಿನಹಳ್ಳಿ ಹೋಬಳಿಯಲ್ಲಿ ಜನಸಾಂಧ್ಯತೆಯ ವಸತಿ ಪ್ರದೇಶವಿದ್ದು, ಸಿಗಂದೂರು, ಬಸದಿಗಳು ಇವೆ. ಜಲಾಶಯ ನಿರ್ಮಿಸುವ ವೇಳೆ ಜಮೀನು,ಮನೆಗಳನ್ನ ಕಳೆದುಕೊಂಡ ಮಡೇನೂರು ಡ್ಯಾಂ ಮೂಲಕ ಓಡಾಡುತ್ತಿದ್ದ ಜನ ಲಿಂಗನಮಕ್ಕಿ ಜಲಾಶಯದ ನಂತರ 8 ಸಾವಿರ ಜನ ಕುಟುಂಬ ಮುಳುಗಡೆಯಾಗಿದ್ದರು. ಮೊದಲಿಗೆ ಲಾಂಚ್ ಸೇವೆಯನ್ನ ಆರಂಭಿಸಲಾಗಿತ್ತು.
ಅಧಿಕಾರಿಗಳಿಗೆ ಈ ಭಾಗದಲ್ಲಿ ವರ್ಗಾವಣೆ ಮಾಡೋದೆ ಶಿಕ್ಷೆಯಾಗಿತ್ತು. ಸೇತುವೆಗೆ ಹೊರಾಡಿವೆ. ಸಾಕಷ್ಟು ಜನ ಚಪ್ಪಲಿ ಸವೆದುಕೊಂಡಿದ್ದರು. ಕಾಗೋಡ ತಿಮ್ಮಪ್ಪರನ್ನೂ ನೆನಪಿಸಿಕೊಳ್ಳಬೇಕು. ಯಡಿಯೂರಪ್ಪನವರ ಆಶೀರ್ವಾದ ಮೋದಿ ಗಡ್ಕರಿಯ ಕೃಪಾಕಟಾಕ್ಷದಿಂದ ಸೇತುವೆ ನಿರ್ಮಾಣವಾಗಿದೆ.
2018 ರಿಂದ ಅಡಿಗಲ್ಲು ಹಾಕಲಾಗಿತ್ತು. ಬಿಜೆಪಿ ಸ್ ವೈ ಸಂಸದರಿದ್ದರು. ಗಡ್ಕರಿ ಅವರು ಬಂದು ಅಡಿಗಲ್ಲು ಹಾಕಿದ್ದರು. ಒಂದು ವರ್ಷಕ್ಕೆ ಡಿಪಿಆರ್ ತಯಾರಾಗುತ್ತೆ. ಆ ವೇಳೆ ಅನೇಕ ಸರ್ಕಸ್ ಆಗಿತ್ತು. ಹಾಸನ್ ಜಿಲ್ಲೆಗೆ 470 ಕೋಟಿ ಹಣದ ಸೇತುವೆ ಡೈವರ್ಟ್ ಆಗುತ್ತೆ. ವನ್ಯ ಜೀವಿ ಇರುವ ಕಾರಣದಿಂದ ಬೇರೆ ಜಿಲ್ಲೆಗೆ ಹೋಗಿತ್ತು. ನಂತರ ಒತ್ತಡ ತಂದು ವೈಲ್ಡ್ ಲೈಫ್ ಕ್ಲಿಯರೆನ್ಸ್ ಪಡೆದು ಸೇತುವೆ ಮಾಡಲಾಗಿದೆ. ಫೆ.28 2019 ಕ್ಕೆ ಎಫ್ ಎಸ್ ಸಿ ಅಪ್ರುವಲ್ ದೊರಕಿತು. ಅನುಮತಿ ಪಡೆದ ನಂತರ ಬೈ ಎಲೆಕ್ಷನ್ ನಡೆದಿತ್ತು ಎಂದು ನೆನಪಿಸಿಕೊಂಡರು.
ಸೇತುವೆ ನಿರ್ಮಾಣದಲ್ಲಿ ಹಲವಾರು ಕುಟುಂಬದ ಹೋರಾಟವಿತ್ತು. ಕಮಿಟ್ ಮೆಂಟ್ ನ ಪ್ರತಿಫಲ ಸೇತುವೆ ನಿರ್ಮಾಣಗೊಂಡಿದೆ. ಗಡ್ಕರಿಯವರನ್ನ ಭೇಟಿ ಮಾಡಿದಾಗ ಜುಲೈ 14 ರಂದು ದಿನಾಂಕ ನೀಡಿದ್ದರು. ಜುಲೈ 14 ರಂದೇ ಉದ್ಘಾಟನೆ ಮಾಡಲಾಗುತ್ತಿದೆ. ಸಚಿವ ಪ್ರಹ್ಲಾದ್ ಜೋಷಿ ಬರ್ತಾಯಿದ್ದಾರೆ. ಜಾಗ ಅಂತಿಮಗೊಳ್ಳಬೇಕಿದೆ. ಸೆಕೆಂಡ್ ಲೋಡ್ ಟೆಸ್ಟಿಂಗ್ ನ್ನ ಒಂದು ದಿನ ಮುಂದುಹೋಗಿದೆ. ಅನೇಕ ಕೆಲಸವಿದೆ. ಒಂದು ವಾರದಲ್ಲಿ ಕೆಲಸ ಮಾಡಿ 14 ರಂದು ಸೇತುವೆ ಲೋಕಾರ್ಪಣೆಯಾಗಲಿದೆ ಎಂದರು.
ದೇಶಕ್ಕೆ ಸ್ವಾತಂತ್ರ ಬಂದ ನೂರು ವರ್ಷದ ಹಿನ್ನಲೆಯಲ್ಲಿ ಅಮೃತ್ ಕಾಲದ ಹಿನ್ನಲೆಯಲ್ಲಿ ಭಾರತದ ಅಭಿವೃದ್ಧಿ ಪಥವನ್ನ ಮುನ್ನೆಲೆಗೆ ತರಲು ರಸ್ತೆಗಳು ಮುಖ್ಯವೆನಿಸಿದೆ ಇದಕ್ಕೆ ನ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಒತ್ತು ನೀಡಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಅನೇಕ ಜನರಿಗೆ ಈಗ ಟ್ಯಾಕ್ಸ್ ಬಗ್ಗೆ ನೆನಪಾಗುತ್ತಿದೆ. ಸೇತುವೆ ವೀಕ್ಷಣೆಗೆ ಫೋಸ್ ಕೊಡಲು ಹೋಗಿಲ್ಲ ಗಡ್ಕರಿ ಸಮಯಕೊಟ್ಟಿದ್ದರು. ಜಾಗ ನೋಡಲು ಸಿಗಂದೂರು ಸೇತುವೆಗೆ ಹೋಗಿದ್ವಿ ಎಂದು ಸಂಸದರು ಸ್ಪಷ್ಟನೆ ನೀಡಿದರು. ಹೊಸನಗರದ ಬಳಿ ಸುತ್ತಾಳು ಸೇತುವೆ 60% ಕೆಲಸ ಮುಗಿದಿದೆ. 315 ಕೋಟಿ ಯಲ್ಲಿ ಬೆಕ್ಕೋಡಿ ಸೇತುವೆ ಆಗಬೇಕಿದೆ. ಅದರಿಂದ 38 ಕಿಮಿ ದೂರ ತಗ್ಗಿಸಬಹುದಾಗಿದೆ ಅರಣ್ಯ ಅನುಮತಿ ಇನ್ನೂ ದೊರಕಬೇಕಿದೆ ಎಂದರು.
2019 ರಲ್ಲಿ ಪಟುಗುಪ್ಪ ಸೇತುವೆಯನ್ನ ಉದ್ಘಾಟಿಸಲಾಯಿತು. ಹಸಿರುಮಕ್ಕಿ ಸೇತುವೆಗೆ 110 ಕಫಟಿಗೆ 50 ಕೋಟಿ ಬಿಡುಗಡೆಯಾಗಿದೆ. ಅವರ ಕೆಲಸ ಅವರು ಮಾಡಲಿ. ಮೇಜರ್ 6 ಬ್ರಿಡ್ಜ್ ಗಳಿಗೆ ನಮ್ಮ ಸರ್ಕಾರ ಶಕ್ತಿ ತುಂಬಿದೆ. ಸಿಗಂದೂರು ಸೇತುವೆಗೆ ಸಿಗಂದೂರು ಚೌಡೇಶ್ವರಿ ಎಂದು ಘೋಷಿಸಬೇಕು. ರಾಜ್ಯ ಸರ್ಕಾರ ಎನ್ ಒಸಿ ನೀಡಿದರೆ ಕೇಂದ್ರ ಅನುಮತಿ ನೀಡಲಿದೆ. ಸರ್ಕಾರದಲ್ಲಿ ಹೊಳೆಬಾಗಿಲು ಕಳಸವಳ್ಳಿ ಸೇತುವೆ ಎಂದು ಇದೆ.
204 ರವರೆಗೆ 90 ಸಾಬಿರ ಕಿಮಿ ಅಭಿವೃದ್ಧಿ ಮಾಡಿತ್ತು. 2014 ರ ನಂತರ 1½ ಲಕ್ಷ ಕಿಮಿ ಮಾಡಲಾಗುತ್ತದೆ. ದಿನಕ್ಕೆ 25 ಕಿಮಿ ದೂರ ರಸ್ತೆ ನಿರ್ಮಿಸಲಾಗುತ್ತಿದೆ. ಮೋದಿ ನೇತೃತ್ವದ ಸರ್ಕಾರ 20 ಸಾವಿರ ಕೋಟಿಯಗೂ ಹೆಚ್ಚು ಮೊತ್ತ ವನ್ನ ಅಭಿವೃದ್ಧಿಗೆ ನೀಡಿದ್ದಾರೆ ಎಂದರು.
ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಸಚಿವ ಹಾಲಪ್ಪ, ಮಾಜಿ ಅಧ್ಯಕ್ಷ ಟಿ.ಡಿ ಮೇಘರಾಜ್, ಮಾಲ್ತೇಶ್, ವಿನ್ಸೆಂಟ್, ಹರಿಕೃಷ್ಣ ಉಪಸ್ಥಿತರಿದ್ದಾರೆ.
Sigandur Bridge inaugurated on the same date