SUDDILIVE || SHIVAMOGGA
ಕೋಟೆ ಪೊಲೀಸ್ ಠಾಣೆಯ ಆವರಣದಲ್ಲಿರುವ ಮರವನ್ನೇರಿ ಆತಂಕ ಮೂಡಿಸಿದ ವ್ಯಕ್ತಿ-A man created panic by climbing a tree in the premises of the Kote Police Station.
ಕೋಟೆ ಪೊಲೀಸ್ ಠಾಣೆಯ ಆವರಣದಲ್ಲಿರುವ ಅರಳಿ ಮರವನ್ನೇ ವ್ಯಕ್ತಿ ಒಬ್ಬ ಅತ್ತಿದ್ದು ಆತನನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿ ಠಾಣೆಗೆ ಹಸ್ತಾಂತರಿಸಿರುವ ಘಟನೆ ವರದಿಯಾಗಿದೆ. ಬೆಳ್ಳಂ ಬೆಳಗೆ ಆತ ಠಾಣೆಯ ಆವರಣದಲ್ಲಿದ್ದ ಅರಳಿಮರವನ್ನೇ ಏರಿ ಆತಂಕ ಮುಡಿಸಿದ್ದ
ಪೊಲೀಸ್ ಠಾಣೆಯಲ್ಲಿ ಇರುವ ಅರಳಿ ಮರವನ್ನು ಹತ್ತಿದ ವ್ಯಕ್ತಿಯನ್ನು ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಮರ ಹತ್ತಿರುವ ಬಗ್ಗೆ ಹಾಗೂ ಮಾನಸಿಕವಾಗಿ ಸ್ಥರವಾಗಿದ್ದನಾ ಎಂಬುದರ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ. ಕೆಲವು ಆತಂಕದ ಹಿನ್ನೆಲೆಯಲ್ಲಿ ಮರ ಹತ್ತಿ ಕೆಳಗೆ ಇಳಿಯಲು ನಿರಾಕರಿಸಿರುವ ಶಂಕೆ ವ್ಯಕ್ತವಾಗಿದೆ. ಕೆಳಗೆ ಬಂದರೆ ತನ್ನನ್ನು ಕೊಲ್ಲುವುದಾಗಿ ಹೇಳುತ್ತಿದ್ದ ಎಂಬ ವಿಷಯ ಗಾಬರಿ ಹುಟ್ಟಿಸುವಂತೆ ಮಾಡಿತ್ತು.
ಬೆಳಿಗ್ಗಿನ ಜಾವ ಎರಡು ಗಂಟೆಯ ಆಸುಪಾಸಿನಲ್ಲಿ ಮರಹತ್ತಿ ಕೆಳೆಗೆ ಇಳಿಯಲು ನಿರಾಕರಿಸಿದ್ದ. ಕೋಟೆ ಪೊಲೀಸರು ಆತನ ಮನವೊಲಿಸಿ ಕೆಳಗಿಳಿಸಲು ಯತ್ನಿಸಿದ್ದಾರೆ. ಸಾಧ್ಯವಾಗದ ಹಿನ್ನಲೆಯಲ್ಲಿ ಮೊದಲಿಗೆ ಮಸೀದಿಯ ಮುಖ್ಯಸ್ಥರನ್ನ ಕರೆಯಿಸಿ ಮನವೊಲಿಸುವ ಪ್ರಯತ್ನ ನಡೆದಿತ್ತು. ಆದಕ್ಕೂ ಒಪ್ಪದ ವ್ಯಕ್ತಿ ನನಗೆ ಜೈಲಿಗೆ ಹಾಕಿ ಕೆಳಗೆ ಇಳಿಸಬೇಡಿ. ನಾನು ಕೆಳಗೆ ಬಂದರೆ ಕೊಲೆ ಮಾಡುತ್ತಾರೆ ಎಂದು ಹೇಳುತ್ತಿದ್ದ.
ಸುಮಾರು 4 ಗಂಟೆಗೆ ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದೆ. ಅಗ್ನಿಶಾಮಕ ದಳದವರ ಮಾತಿಗೂ ಮನವೊಲಿಯದ ವ್ಯಕ್ತಿಯನ್ನ ಕೆಳೆಗಿಳಿಸಲು ಅನೇಕ ಪ್ರಯತ್ನ ನಡೆಸಲಾಗಿತ್ತು. ನಂತರ ಎಸ್ಪಿ ಮತ್ತು ಡಿಸಿಗೆ ನಿಮ್ಮವಿಷಯ ತಿಳಿಸಲಾಗಿದೆ. ನಿನಗೆ ಜೈಲಿಗೆ ಹಾಕ್ತಾರೆ ನೀನು ಇಳಿದು ಬಾ ಎಂದು ಮನವೊಲಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಲ್ಯಾಡ್ ಬಳಸಿ ಕೆಳಗೆ ಇಳಿಸಿದ್ದಾರೆ. ಠಾಣೆಗೆ ಹಸ್ತಾಂತರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿಎಫ್ಒ ಅಶೋಕ್ ಕುಮಾರ್, ಐಸಿ ಎಎಫ್ಎಸ್ಒ ಮುಕುಂ ಹುಸೇನ್, ಎಸ್ಎಫ್ಒ ವಿಪ್ರೈಡ್ ಗಾನ್ಸ್ಲವಿಸ್, ಎಲ್ ಎಫ್ ಲೋಹಿತ್ ಕುಮಾರ್, ಎಫ್ ಡಿ ಶರತ್ ಕುಮಾರ್, ಎಫ್ ಎಂ ಮಾರುತಿ ಟಿ.ಆರ್, ಎರ್ರಿಸ್ವಾಮಿ, ಕಿರಣ್ ಕುಮಾರ್, ಯಶವಂತ್ ಭಾಗಿಯಾಗಿದ್ದರು.
A man created panic by climbing a tree