ad

ಯುದ್ದ ವಿಮಾನ ಸ್ಥಾಪನೆಗೆ ಸ್ಥಳ ಪರಿಶೀಲನೆ

 SUDDILIVE || SHIVAMOGGA

ಯುದ್ದ ವಿಮಾನ ಸ್ಥಾಪನೆಗೆ ಸ್ಥಳ ಪರಿಶೀಲನೆ-Site inspection for fighter jet installation

Fighterjet, Mla


ನಗರಕ್ಕೆ ಯುದ್ಧ ವಿಮಾನ ಆಗಮಿಸುತ್ತಿದೆ. ಈ ಹಿನ್ನೆಲೆ ಅದರ ಸ್ಥಾಪನೆಗೆ ಇವತ್ತು ಸ್ಥಳ ಪರಿಶೀಲನೆ ನಡೆಸಲಾಯಿತು. ಶಾಸಕ ಎಸ್‌.ಎನ್.ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸ್ಥಳ ಪರಿಶೀಲಿಸಿದರು.

ಈಗಾಗಲೇ ಫ್ರೀಡಂ ಪಾರ್ಕ್‌ನಲ್ಲಿ ಯುದ್ಧ ಟ್ಯಾಂಕರ್ ನ್ನ ಸ್ಥಾಪಿಸಲಾಗಿದೆ. ಇದರ ಜೊತೆಗೆ ಯುದ್ಧ ವಿಮಾನವನ್ನು ಸ್ಥಾಪಿಸಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್‌.ಎನ್.‌ಚನ್ನಬಸಪ್ಪ ಸ್ಥಳ ಪರಿಶೀಲಿಸಿದರು. ಸಾರ್ವಜನಿಕರು ಸುಗಮವಾಗಿ ಯುದ್ಧ ವಿಮಾನ ವೀಕ್ಷಿಸುವಂತಾಗಬೇಕು ಎಂದು ಸೂಚಿಸಿದರು.

ಭಾರತೀಯ ಸೇನೆಯ ಬಳಸುತ್ತಿದ್ದ ಯುದ್ಧ ಟ್ಯಾಂಕರ್‌ ಅನ್ನು ಫ್ರೀಡಂ ಪಾರ್ಕ್‌ನಲ್ಲಿಯೇ ಸ್ಥಾಪಿಸಲಾಗಿದೆ. ಇದರ ಸನಿಹದಲ್ಲೇ ಯುದ್ಧ ವಿಮಾನ ಸ್ಥಾಪಿಸುವ ಕುರಿತು ಇವತ್ತು ಸ್ಥಳ ಪರಿಶೀಲಿಸಲಾಯಿತು.

Site inspection for fighter jet installation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close