ad

ಅಂದಿನ ಆರ್‌ಎಸ್‌ಎಸ್, ಅಂದಿನ ಎಬಿವಿಪಿ ಎಲ್ಲವೂ ಇಂದು ಬದಲಾಗಿವೆ-ಬಿ.ಎಲ್ ಸಂತೋಷ

SUDDILIVE || SHIVAMOGGA

ಅಂದಿನ ಆರ್‌ಎಸ್‌ಎಸ್, ಅಂದಿನ ಎಬಿವಿಪಿ ಎಲ್ಲವೂ ಇಂದು ಬದಲಾಗಿವೆ-ಬಿ.ಎಲ್ ಸಂತೋಷ-The RSS of that day, the ABVP of that day, everything has changed today - B.L.Santhosh

RSS, ABVP



ಈ ದೇಶಕ್ಕೆ ಇನ್ನೆಂದೂ ತುರ್ತು ಪರಿಸ್ಥಿತಿ ಎದುರಿಸುವ ಅನಿವಾರ್ಯತೆ ಬೀಳುವುದಿಲ್ಲ. ಏಕೆಂದರೆ 1975ರ ಭಾರತ, ಅಂದಿನ ಆರ್‌ಎಸ್‌ಎಸ್, ಅಂದಿನ ಎಬಿವಿಪಿ ಎಲ್ಲವೂ ಇಂದು ಬದಲಾಗಿವೆ ಎಂದು  ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ರಾಷ್ಟ್ರೋತ್ಥಾನ ಬಳಗ ಶಿವಮೊಗ್ಗ ಘಟಕದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೇಶ ಅನುಭವಿಸಿದ ಕರಾಳ ತುರ್ತು ಪರಿಸ್ಥಿತಿಗೆ 50 ವರ್ಷಗಳು ಎಂಬ ವಿಷಯದ ಕುರಿತು ಮಾತನಾಡಿದ ಅವರು, ಮೊದಲು ಪಕ್ಷವನ್ನು ಕೈವಶ ಮಾಡಿಕೊಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಬಳಿಕ ಆಡಳಿತ ತನ್ನ ಸುತ್ತಲೇ ಕೇಂದ್ರಿತವಾಗುವಂತೆ ನೋಡಿಕೊಂಡರು. ನಂತರ ದೇಶವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾದರು ಎಂದು ಅಭಿಪ್ರಾಯಪಟ್ಟರು.

ತುರ್ತು ಪರಿಸ್ಥಿತಿ ಹೇರುವ ಮುನ್ನವೇ ಇಂದಿರಾ ಗಾಂಧಿ ಪ್ರಜಾಪ್ರಭುತ್ವದಿಂದ ವಿಮುಖರಾಗಿದ್ದರು. ಕೀನ್ಯಾದಲ್ಲಿ ಆಕೆ ಮಾಡಿದ್ದ ಭಾಷಣದಲ್ಲಿ ಭಾರತದಲ್ಲಿ ಅನೇಕ ಪ್ರತಿಪಕ್ಷಗಳಿವೆ. ಇದು ಕಿರಿಕಿರಿ ಉಂಟು ಮಾಡುತ್ತಿದೆ ಎಂದಿದ್ದರು. ಇಂದಿರಾ ಸುತ್ತಲೂ ಇದ್ದವರೆಲ್ಲ ತುರ್ತು ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದವರು ಎಂದರ್ಥವಲ್ಲ. ಅವರೆಲ್ಲರೂ ಆಡಳಿತಕ್ಕೆ ಒಗ್ಗಿಕೊಂಡಿದ್ದರು ಎಂದು ಹೇಳಿದರು.

 ಅಂದು ದೇಶದಲ್ಲಿ ಸರ್ವವ್ಯಾಪಿಯಾಗಿದ್ದ ಕಾಂಗ್ರೆಸ್ ಈಗ ಶಕ್ತಿ ಕಳೆದುಕೊಂಡಿದೆ. ಅಂದು ನಮ್ಮ ಮನೆಗಳನ್ನು ಹಾಳು ಮಾಡಿದವರು ಇಂದು ತಮ್ಮ ಮನೆ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ವ್ಯಂಗ್ಯವಾಡಿದರು.

ಈ ದೇಶ ಸ್ವಾತಂತ್ರ್ಯ ವಿಚಾರದಲ್ಲಿ ಯಾವ ಕಾಲದಲ್ಲಿಯೂ ರಾಜಿ ಮಾಡಿಕೊಳ್ಳಲಿಲ್ಲ. ರಾವಣ ವಿದ್ವಾಂಸ ಆಗಿದ್ದರೂ ಆಗಲೂ ಒಪ್ಪಲಿಲ್ಲ. ದ್ವೈತ, ಅದ್ವೈತ, ‌ವಿಶಿಷ್ಟಾದ್ವೈತ ಎಲ್ಲವೂ ನಡೆದಿದೆ. ಯಾರೂ ಹಿಂಸೆಗೆ  ಇಳಿಯಲಿಲ್ಲ . ವಿಚಾರದ ವಶ ಯಾವತ್ತೂ ಒಪ್ಪಲಿಲ್ಲ ಎಂದರು

ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ.ಪಿ.ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದರು. ಮರು ಮುದ್ರಿತಗೊಂಡ ಭುಗಿಲು ಕೃತಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮಾತನಾಡಿ, ಭುಗಿಲು ಪುಸ್ತಕ ಇವತ್ತಿನ ಜನಾಂಗ ಓದಬೇಕು ಎಂದರು. ಖ್ಯಾತ ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ,  ನಾನು ಆಗ ಪ್ರೌಢ ಶಾಲಾ ವಿದ್ಯಾರ್ಥಿ ಆಗಿದ್ದೆ. ಆ ಸಮಯದಲ್ಲಿ ಹೆಚ್ಚು ಅರ್ಥ ಆಗಿರಲಿಲ್ಲ ಎಂದರು.

ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಅಂತ ಭಟ್ಟಂಗಿಗಳು ಹೇಳಿದ್ದರು. ಆಡಳಿತ, ‌ಪಕ್ಷ ಎಲ್ಲಾ ವಶ ಮಾಡಿಕೊಳ್ಳಲು ನೋಡಿದರು. ತಮ್ಮ ಸುತ್ತ ಅಧಿಕಾರ ಇರುವಂತೆ ನೋಡಿಕೊಂಡಿದ್ದರು.‌ ತಮ್ಮ ಸ್ವಾರ್ಥಕ್ಕೆ ಅನುಯಾಯಿ ತರ ಕೆಲವರು ಇದ್ದರು. ಇದು ಆಗಬಾರದು ಎಂದರು. ಈ ದೇಶದಲ್ಲಿ ಸತ್ಯ ಯಾವತ್ತೂ ನಾಶ ಆಗುವುದಿಲ್ಲ. ಸಮಯ ತೆಗೆದುಕೊಳ್ಳಬಹುದು. 

ರಾಷ್ಡ್ರೋತ್ಥಾನ ಪರಿಷತ್ ನ ಡಾ.ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೋತ್ಥಾನ ಪರಿಷತ್  ಶಿವಮೊಗ್ಗ ಶಾಖೆ ವತಿಯಿಂದ ನಗರದ ದ್ವಾರಕ ಸಭಾಂಗಣದಲ್ಲಿ ಮಂಗಳವಾರ ಕರಾಳ ತುರ್ತು ಪರಿಸ್ಥಿತಿಗೆ 50 ವರ್ಷ ಮರು ಮುದ್ರಿತ ಭುಗಿಲು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು. 

ತುಂಬಿ ತುಳುಕಿದ ಸಭಾಂಗಣ...

ಭುಗಿಲು ಪುಸ್ತಕ ಮರು ಮುದ್ರಣ ಲೋಕಾರ್ಪಣೆ ಕಾರ್ಯಕ್ರಮ  ಆರಂಭಕ್ಕೂ ಮೊದಲೇ ಸಭಾಂಗಣ ಸಂಪೂರ್ಣ ಭರ್ತಿ ಆಗಿತ್ತು. ನಂತರ ಆಗಮಿಸಿದ ನೂರಾರು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮ ಅಯೋಜಿಸಲು ರಂಗಮಂದಿರ ನಿರಾಕರಿಸುವಂತೆ ಮಾಡಿದವರು ಹೊಟ್ಟೆಕಿಚ್ಚು ಪಡುವಷ್ಟು ಸಂಖ್ಯೆ ಜನರು ಸೇರಿದ್ದರು. 

ಪುಣ್ಯ, ಗಾಂಧಿ ವ್ಯಕ್ತಿತ್ವ ಮತ್ತು ಗಾಂಧಿ ಹೆಸರು 1975 ರವರೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣ. ಜನರಲ್ಲಿ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ಇತ್ತು. ನಮ್ಮ ದೇಶದಲ್ಲಿ ಭಟ್ರು ಮಗ ಭಟ್ರು, ಶೆಟ್ರು ಮಗ  ಶೆಟ್ರು ಆಗಿರುತ್ತಾರೆ. ಆದರೆ ನೆಹರು ಮಕ್ಕಳು ಗಾಂಧಿ ಆಗಿದ್ದು ವಿಶೇಷ ಎಂದರು.

ಸಂವಿಧಾನ ಹೆಚ್ಚು ಅನ್ಯಾಯ ಅತ್ಯಾಚಾರ ಮಾಡಿರುವುದು ಕಾಂಗ್ರೆಸ್. ಈಗ ರಾಹುಲ್‌ ಗಾಂಧಿ ಸಂವಿಧಾನ ಕೈಯಲ್ಲಿ ಹಿಡಿದು ಓಡಾಡುತ್ತಾರೆ.‌ ಬ್ರಾಂಡ್‌ ಮಾಡಲು ಓಡಾಡುತ್ತಾರೆ.  

ಸೆಕ್ಯಲರ್ ಮತ್ತು ಸೋಷಿಯಲಿಸಂ ಹೊಸಬಾಳೆ ಅವರಿಗೆ ಏನೂ ತೊಂದರೆ ಇಲ್ಲ. ಸರ್ವರಿಗೂ ಸಮಬಾಳು ನಾವು ಹೇಳಿದ್ದೇವೆ. ಅಂಬೇಡ್ಕರ್ ಮೂಲ ಸಂವಿಧಾನ ಬರಲಿ ಎಂಬುದು ಅಪೇಕ್ಷೆ ಎಂದರು.

The RSS of that day, the ABVP of that day, everything has changed today - B.L.Santhosh

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close