SUDDILIVE || ANANDPURA
ಕಾರು ಬಸ್ ಡಿಕ್ಕಿ-ಕಾರಿನಲ್ಲಿರುವವರಿಗೆ ಗಾಯ-Car collides with bus, injuring occupants
ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ. ಆನಂದಪುರ ಸಮೀಪದ ಮುಂಬಾಳುವಿನ ಕೆರೆ ಏರಿಯಾದ ಮೇಲೆ ಇಂದು ಸಂಜೆ ಘಟನೆ ಸಂಭವಿಸಿದೆ.
ಕಾರಿನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶರತ್ ಮತ್ತು ಭರತ್ ಎಂಬುವವರಿಗೆ ಗಾಯವಾಗಿದೆ. ಬಸ್ಸಿನ ಮುಂಭಾಗಕ್ಕು ಹಾನಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಕೆರೆಯ ತಡೆಗೋಡೆ ಮೇಲೆ ನಿಂತಿದೆ. ಬಸ್ಸು ರಸ್ತೆಯ ಬದಿಗೆ ಸರಿದಿದೆ. ಕಾರಿನಲ್ಲಿದ್ದವರು ಹುಬ್ಬಳ್ಳಿಯವರೆಂದು ತಿಳಿದು ಬಂದಿದೆ.
ಖಾಸಗಿ ಬಸ್ಸು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತಿತ್ತು. ಕಾರು ಸಾಗರದ ದಿಕ್ಕಿಗೆ ಹೋಗುತಿತ್ತು. ಘಟನೆ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
Car collides with bus, injuring occupants