SUDDILIVE || SHIVAMOGGA
ಜಿಲ್ಲಾಡಳಿತ ಸತ್ತುಹೋಗಿದೆ-ತೀನಾಶ್ರೀ-The district administration is dead-Teenashri
ಮನೆಗೆ ಹೋಗಿ ಪೋಡಿ ಮಾಡಿಕೊಡುವ ಯೋಜನೆಗೆ ಅಧಿಕಾರಿಗಳು ತಿಲಾಂಜಲಿ ಇಟ್ಟಿದ್ದಾರೆ. ಅದರಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಉದ್ದೇಶ ಪೂರಕವಾಗಿ ಒಬ್ಬ ರೈತನನ್ನ ಟಾರ್ಗೆಟ್ ಮಾಡಿಕೊಂಡು ಗಿಡ, ಕೊಟ್ಟಿಗೆ, ಮನೆಯನ್ನ ಉರುಳಿಸಿ ಬಂದಿದ್ದು ಅವರನ್ನ ಡಿಸ್ ಮಿಸ್ ಮಾಡಬೇಕೆಂದು ಮಲೆನಾಡ ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲೂಕಿನ ಹೊಸವಿ ಗ್ರಾಮದಲ್ಲಿ ಶ್ರೀಧರ್ ಎಂಬ ರೈತ ನಾಲ್ಕು ಎಕರೆ 18 ಗುಂಟೆಗೆ 1998 ರಲ್ಲಿ 53 ನೇ ಅರ್ಜಿ ಹಾಕಿ ಹಕ್ಕಪತ್ರಕ್ಕೆ ಮನವಿ ಸಲ್ಲಿಸಿದ್ದರು. ಸಣ್ಣ ಹಿಡುವಳಿದಾರರು ಜಮೀನು ನಿಮ್ಮದು ಎಂಬುದಕ್ಕೆ ದಾಖಲಾತಿ ನೀಡಿಲ್ಲ ಎಂದು ವಜಾಗೊಳಿಸಲಾಗಿದೆ. ಎಸಿನೂ ವಜಾಮಾಡಿದ್ದಾರೆ ಡಿಸಿ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಫಾರಂ ನಂ 57 ರಲ್ಲಿ ಅವರು ಮತ್ತೆ ಅರ್ಜಿ ಹಾಕಿದ್ದಾರೆ. ವಿಚಾರಣೆ ಬಾಕಿಯಿದೆ ಎಂದರು.
1600 ಅಡಿಕೆ ಗಿಡಗಳನ್ನ ನಾಶ ಪಡಿಸಿದ್ದಾರೆ. ಡಿಸಿ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವುದನ್ನ ತಹಶೀಲ್ದಾರ್ ಅವರಿಂದ ಹಾನಿಗೊಳಪಡಿಸಿದ್ದು ಕಾನೂನು ಬಾಹಿರವಾಗಿದೆ. ಆದರೆ ಜಿಲ್ಲಾಡಳಿತ ಸತ್ತುಹೋಗಿದೆ. ಡಿಸಿ ವಿಚಾರಿಸಿದರೆ ಹಳೇ ಗಿಡಗಳನ್ನ ನೆಟ್ಟಿದ್ದಾರೆ. ಅದಕ್ಕೆ ನಾಶಪಡಿಸಲಾಗಿದೆ ಎಂದು ಕಾರಣ ಕೇಳಿ ನೀಡಲಾಗಿದೆ. ಈಗ ಏಸಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಎಸಿ, ಡಿಸಿ ಸಚಿವರು, ಸಂಸದರು ಹೋಗಿದ್ದಾರೆ. ಸ್ಥಳೀಯ ಶಾಸಕರು ಹೊಸನಗರ ತಹಶೀಲ್ದಾರ್ ಅವರನ್ನ ಭ್ರಷ್ಠ ತಹಶೀಲ್ದಾರ್ ಎಂದು ಬೈದಿದ್ದಾರೆ. ಇದು ಗಮನೀಯವಾಗಿದೆ ಎಂದರು.
ಜನ್ರತಿನಿಧಿಗಳು ತಹಶೀಲ್ದಾರ್ ಹಿಂದಿರುವ ಶಂಕೆಇದೆ. ಕಾನೂನುಬಾಹಿರವಾಗಿ ನಡೆದುಕೊಂಡ ತಹಶೀಲ್ದರ್ ನ್ನ ವಜಾಗೊಳಿಸಿ ಇಲ್ಲ ಎಂದರೆ ಜಿಲ್ಲಾಧಿಕಾರಿಗಳ ಕಚೇರಿ ಬೀಗಹಾಕಲಾಗುವುದು ಎಂದರು. ಅರ್ಜಿ ವಜಾಗೊಳಿಸಿರುವುದು 10-20 ಸಾವಿರ ಅರ್ಜಿ ಇದೆ. ಆದರೆ ಎಲ್ಲೂ ಈ ರೀತಿ ಯಾವ ತಹಶೀಲ್ದಾರ್ ನಡೆದುಕೊಂಡಿಲ್ಲ ಎಂದರು.
ಸಂತ್ರಸ್ತ ಶ್ರೀಧರ್ ಮಾತನಾಡಿ, ಮನೆ ಮತ್ತು ಕೊಟ್ಟಿಗೆ ಜೆಸಿಬಿ ಮತ್ತು ಪೊಲೀಸ್ ಪ್ರೊಟೆಕ್ಚನ್ ನಿಂದ ಕೆಡವಿದ್ದಾರೆ. ಭ್ರಷ್ಠ ಅಧಿಕಾರಿ ಹಣದ ವಿಚಾರದಲ್ಲಿ ಈ ರೀತಿ ನಡೆದುಕೊಂಡಿರುವ ಶಂಕೆಯಿದೆ ಎಂದು ಹೇಳಿದ್ದಾರೆ.
The district administration is dead-Teenashri