SUDDILIVE || THIRTHAHALLI
ತೀರ್ಥಹಳ್ಳಿಯಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ-Body of man found washed away in a ditch in Thirthahalli
ತಾಲ್ಲೂಕಿನಾದ್ಯಂತ ಆರಿದ್ರಾ ಮಳೆಯ ಅಬ್ಬರ ಜೋರಾಗಿದ್ದು ಸುರಿದ ಭಾರಿ ಮಳೆಯಿಂದಾಗಿ ವ್ಯಕ್ತಿಯೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಮೇಗರವಳ್ಳಿ ಸಮೀಪದ ತೋಟವೊಂದಕ್ಕೆ ಬುಧವಾರ ಸಂಜೆ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತದೇಹ ಗುರುವಾರ ಬೆಳಗ್ಗೆ ಅಲ್ಲೇ ಸಮೀಪದಲ್ಲೇ ಸಿಕ್ಕಿದೆ. ಮೃತ ವ್ಯಕ್ತಿಯನ್ನು ಹೆಗ್ಡೆಕೇರಿಯರಾಘವೇಂದ್ರ (40) ಎಂದು ಗುರುತಿಸಲಾಗಿದೆ.
ಭಾರಿ ಮಳೆಯಾಗುತ್ತಿದ್ದು ಕೆಲಸಕ್ಕೆ ಹೋದಾಗ ಕಾಲು ಜಾರಿ ಈ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Body of man found washed in thirthahalli