ad

ಕನ್ನಡ ಸಿನಿಮಾದ ಕಡೆ ಮುಖ ಮಾಡುವಂತೆ ಮಾಡಿದ ಸು ಫ್ರಂ ಸೋ ಸಿನಿಮಾ- The movie Su From So that made fans turn face towards Kannada cinema

 SUDDILIVE || SHIVAMOGGA

ಕನ್ನಡ ಸಿನಿಮಾದ ಕಡೆ ಮುಖ ಮಾಡುವಂತೆ ಮಾಡಿದ  ಸು ಫ್ರಂ ಸೋ ಸಿನಿಮಾ - The movie Su From So that made fans turn face towards Kannada cinema

Su from so, cinema

ಒಂದು ವಿಲಕ್ಷಣ ಹೆಸರಿನಿಂದ ಕನ್ನಡ ಸಿನಿಮಾ ಪ್ರದರ್ಶನಕಂಡಿದ್ದು ಚಿತ್ರಮಂದಿರ ಎರಡನೇ ದಿನಕ್ಕೆ ಭರ್ತಿಯಾಗಿದೆ. ಶಿವಮೊಗ್ಗದ ವೀರಭದ್ರ ಚಲನಚಿತ್ರ ಮಂದಿರದಲ್ಲಿ ಸು ಫ್ರಂ ಸೋ ಸಿನಿಮಾ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಒಂದು ಒಳ್ಳೆಯ ಕಥೆಯನ್ನ‌ಹೊತ್ತು ಬಂದರೆ ಜನ ಹೇಗೆ ಚಲನಚಿತ್ರ ಮಂದಿರ ಕಡೆ ತಿರುಗುತ್ತಾರೆ ಎಂಬುದಕ್ಕೆ ಸು ಫ್ರಂ ಸೋ ಒಳ್ಳೆಯ ಉದಾಹರಣೆ ಕೂಡ. 

ಈ ವಾರ ಹೊಸಬರ 'ಸು ಫ್ರಂ ಸೋ' ದರ್ಬಾರ್ ಜೋರಾಗಿದೆ. ರಾಜ್‌ ಬಿ ಶೆಟ್ಟಿ ನಿರ್ಮಾಣದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಕ್ತಿದೆ. ಕಡಿಮೆ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಆದರೆ ರೆಸ್ಪಾನ್ಸ್ ಮಾತ್ರ ಅದ್ಭುತವಾಗಿದೆ. 'ಎಕ್ಕ' ಚಿತ್ರಕ್ಕೆ ಹೋಲಿಸಿದರೆ ಇದು ಸಣ್ಣ ಸಿನಿಮಾ ಇರಬಹುದು. ಆದರೆ ಇದ್ದಿದ್ದರಲ್ಲಿ ಜೆಪಿ ತುಮ್ಮಿನಾಡ್ ನಿರ್ದೇಶನದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.


ಸಿಂಪಲ್ ಕಥೆಯನ್ನು ಹಾಸ್ಯಭರಿತವಾಗಿ ಹೇಳಿ ಜೆಪಿ ತುಮ್ಮಿನಾಡು ಗೆದ್ದಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುವ ಕಥೆ ಇದು. ಹಾಗಾಗಿ ಅಲ್ಲಿನ ಕಲಾವಿದರು, ತಂತ್ರಜ್ಞರು ಹೆಚ್ಚಾಗಿ ಕೆಲಸ ಮಾಡಿದ್ದಾರೆ. ಕರಾವಳಿಯ ಮರ್ಲೂರು. ಯಾವುದೇ ಸಮಸ್ಯೆ ಬಂದರೂ ನೆನಪಾಗುವ ರವಿಯಣ್ಣ. ನಡುವೆ ಅಶೋಕನ ಪ್ರೀತಿ. ರವಿಯಣ್ಣನಿಗೆ ಸವಾಲು ಹಾಕಲು ದೆವ್ವವಾಗಿ ಬರುವ ಸುಲೋಚನ. ಒಟ್ಟಾರೆ ಇಡೀ ಸಿನಿಮಾ ನೋಡುಗರಿಗೆ ಸಖತ್ ಮಜಾ ಕೊಡುವಂತಿದೆ

ಎರಡು ದಿನ ಮೊದ್ಲೆ ಮಂಗಳೂರಿನಲ್ಲಿ ಚಿತ್ರದ ಪ್ರೀಮಿಯರ್‌ ಶೋಗಳು ನಡೆದಿತ್ತು. ಮೊನ್ನೆ(ಜುಲೈ 24) ಕೂಡ ಒಂದಷ್ಟು ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳು ಏರ್ಪಾಡಾಗಿತ್ತು. ಸಿನಿಮಾ ನೋಡಿದವರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಸಿನಿಮಾ ನೋಡಿ ಎಂದು ಮತ್ತೊಬ್ಬರಿಗೆ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಸು ಫ್ರಂ ಸೋ' ಚಿತ್ರಕ್ಕೆ ಪ್ರೇಕ್ಷಕರೇ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ. ಸಣ್ಣ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಣ್ಣ ಸಣ್ಣ ಸ್ಕ್ರೀನ್‌ಗಳು ಸಿಕ್ಕಿದೆ. ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ನಿಧಾನವಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ. 

ಇನ್ನು 'ಸು ಫ್ರಂ ಸೋ' ಕ್ರೇಜ್ ಹೇಗಿದೆ ಎನ್ನುವುದನ್ನು ನೋಡುವುದಾಗಿ ಭಾನುವಾರದ ಶೋಗಳಿಗೆ ಪ್ರೇಕ್ಷಕರು ಇಂದೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಶುಕ್ರವಾರದ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದೆ. ಶನಿವಾರದ ಶೋಗಳು ಫಾಸ್ಟ್‌ ಫಿಲ್ಲಿಂಗ್ ಆಗುತ್ತಿದೆ. ಸಣ್ಣ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿರುವುದರಿಂದ ಮೇಲ್ನೋಟಕ್ಕೆ ಹೀಗೆ ಅನ್ನಿಸಬಹುದು. ಆದರೆ ಯಾವುದೇ ಸ್ಟಾರ್ ನಟರಿಲ್ಲದ, ನಿನ್ನೆ ಮೊನ್ನೆವರೆಗೂ ಸದ್ದು ಮಾಡದ ಸಿನಿಮಾ ದಿಢೀರನೆ ಬಾಕ್ಸಾಫೀಸ್‌ ಶೇಕ್ ಮಾಡ್ತಿದೆ.

ಅದರಂತೆ ಚಲನಚಿತ್ರ ಮಂದಿರ ಅನೇಕ ದಿನಗಳ ನಂತರ ಭರ್ತಿಯಾಗಿವೆ. ಚಲನಚಿತ್ರ ಮಂದಿರಗಳು ನೆನೆಗುದಿಗೆ ಬೀಳಲಿದೆ ಎಂಬ ಮಾತಿಗೆ ಈ ಸಿನಿಮಾ ಟಕ್ಕರ್ ನೀಡಿದೆ. ಒಂದು ಒಳ್ಳೆಯ ಸಿನಿಮಾ ಪ್ರೇಕ್ಷಕನನ್ನ ಹೇಗೆ ಕರೆತರುತ್ತದೆ ಎಂಬುದು ಇದು ಒಳ್ಳೆಯ ಉದಾಹರಣೆ ಸಹ ಹೌದು!

The movie Su From So that made fans turn face towards Kannada cinema

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close